ವಾಷಿಂಗ್ಟನ್ (ಐಎಎನ್ಎಸ್): ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಆದರ್ಶ ನಾಯಕರ ಪಟ್ಟಿಯಲ್ಲಿ ಭಾರತದ ಮಹಿಳಾ ಸ್ವ ಉದ್ಯೋಗ ಸಂಘಟನೆಯ ಸಂಸ್ಥಾಪಕಿ ಇಳಾ ಭಟ್ ಸ್ಥಾನ ಗಿಟ್ಟಿಸಿದ್ದಾರೆ.

`ಸಾಕ್ಷಿ ಮತ್ತು ಪರಿಣಾಮ ಕುರಿತ ಲಿಂಗಾನುಪಾತ~ದ ಅಂತರ ಕುರಿತು ಗುರುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಹಿಲರಿ ಈ ವಿಷಯವನ್ನು ಪ್ರಸ್ತಾಪಸಿದ್ದಾರೆ.

`ಮಹಿಳೆಯರು ಕಾನೂನು ಪದವಿ ಅಧ್ಯಯನ ಮಾಡದ ಕಾಲದಲ್ಲಿ ಅತೀ ವಿರಳವಾಗಿ 1950ರಲ್ಲಿ ಅವರು ಕಾನೂನು ಪದವಿ ಪಡೆದಿದ್ದರು~ ಎಂದು ಇಳಾ ಅವರ ಕಾರ್ಯವನ್ನು ಹಿಲರಿ ಶ್ಲಾಘಿಸಿದ್ದಾರೆ.~ `ಕಾನೂನು ಪದವಿಯನ್ನು ಪಡೆದರೂ ಅದೇ ಕ್ಷೇತ್ರದಲ್ಲಿ ಮುಂದುವರಿಯದ ಇಳಾ, ಸ್ಥಳೀಯ ಕಾರ್ಮಿಕ ಸಂಘಟನೆಗಾಗಿ ತೊಡಗಿಸಿಕೊಂಡರು. ಆದರೆ ಕೈಗಾರಿಕಾ ಕಾರ್ಮಿಕರಿಗೆ ಮಾತ್ರ ಕಾನೂನು ಮಾನ್ಯತೆ ನೀಡುತ್ತದೆ. ಆದರೆ ಹೆಚ್ಚಿನ ಮಹಿಳೆಯರು ಅನೌಪಚಾರಿಕ ಕೆಲಸ ಮಾಡುತ್ತಿದ್ದರೂ ಭಾರತದಲ್ಲಿ ಕೇವಲ ಶೇ 6ರಷ್ಟು ಮಹಿಳೆಯರನ್ನು ಮಾತ್ರ ಉದ್ಯೋಗಿಗಳು ಎಂದು ಅಧಿಕೃತವಾಗಿ ಪರಿಗಣಿಸಲಾಗಿದೆ ಎಂಬುದನ್ನು ಇಳಾ ಅರಿತಿದ್ದರು~ ಎಂದು ಹಿಲರಿ ಹೇಳಿದ್ದಾರೆ.

`ಕಠಿಣವಾದ ಕೆಲಸ ಮಾಡುವ ಮಹಿಳೆಯರಿಗೆ ಇಳಾ ಸಹಾಯ ಮಾಡಿದ್ದರು. ಆದರೆ ಇದು ಸರ್ಕಾರದ ಗಮನಕ್ಕೆ ಬರಲಿಲ್ಲ~ ಎಂದು ಅವರು ವಿಷಾದಿಸಿದ್ದಾರೆ. `ದುಡಿಯುವ ಮಹಿಳೆಯರು ದತ್ತಾಂಶಗಳು ಲಭಿಸಿದರೆ ಯೋಜನೆ ರೂಪಿಸುವವರು ಅದನ್ನು ಅಲ್ಲಗಳೆಯಲಾಗದು. 1996ರಲ್ಲಿ ಇಳಾ ನೇತೃತ್ವದಲ್ಲಿ ಜರುಗಿದ ಮನೆ ಕೆಲಸ ಮಾಡುವರ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಮನೆ ಕೆಲಸ ಮಾಡುವ ಮಹಿಳೆಯರ ಹಕ್ಕು ಮತ್ತು ಕೊಡುಗೆ, ಅವರ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲಲಾಯಿತು ಎಂದು ಅವರು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.