ಬೆಂಗಳೂರು: ನಾಗರಹೊಳೆ ಹುಲಿ ಅಭಯಾರಣ್ಯದ ಹೊರ ವಲಯವನ್ನು ಗುರುತಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಸುಪ್ರೀಂಕೋರ್ಟ್ ಜೂನ್ 24ರಂದು ಸಫಾರಿ ನಿಷೇಧಿಸುವ ಸಂದರ್ಭದಲ್ಲಿ ನೀಡಿದ್ದ ಸೂಚನೆಯನ್ನು ಪಾಲಿಸಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸೂಚನೆಯ ಪ್ರಕಾರ ದೇಶದ ವಿವಿಧ ರಾಜ್ಯಗಳು ಹುಲಿ ಅಭಯಾರಣ್ಯದ ಹೃದಯ ಭಾಗ ಹಾಗೂ ಹೊರ ವಲಯವನ್ನು ಗುರುತಿಸಿಲ್ಲ ಎನ್ನುವ ಕಾರಣದಿಂದ ಸುಪ್ರಿಂಕೋರ್ಟ್ ಜುಲೈ 24ರಂದು ಹುಲಿಗಳ ರಕ್ಷಣೆಯ ಉದ್ದೇಶದಿಂದಲೇ ಪ್ರವಾಸೋದ್ಯಮ ಹಾಗೂ ಸಫಾರಿ ನಿಲ್ಲಿಸುವಂತೆ ಆದೇಶಿಸಿ, ಆಗಸ್ಟ್ 22ಕ್ಕೆ ವಿಚಾರಣೆಯನ್ನು ಮುಂದೂಡಿತ್ತು.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಮಾತ್ರವೇ ಹೊರ ವಲಯವನ್ನು ಗುರುತಿಸಿರಲಿಲ್ಲ. ಉಳಿದಂತೆ ಬಂಡೀಪುರ, ಭದ್ರಾ, ಅಣಶಿ- ದಾಂಡೇಲಿ, ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಹೃದಯಭಾಗ ಹಾಗೂ ಹೊರವಲಯವನ್ನು ಈಗಾಗಲೇ ಗುರುತಿಸಲಾಗಿದೆ. ಇದೀಗ ಆಗಸ್ಟ್ 14ರಂದು ನಾಗರಹೊಳೆ ಹೊರವಲಯವನ್ನು ಗುರುತಿಸಿ ಅಧಿಸೂಚನೆ ಹೊರಡಿಸುವ ಮೂಲಕ ನ್ಯಾಯಾಲಯದ ಸೂಚನೆಯನ್ನು ಪರಿಪಾಲಿಸಲಾಗಿದೆ.

2003ರ ಅಕ್ಟೋಬರ್ 16ರಂದು 1972ರ ವನ್ಯಜೀವಿ (ಸಂರಕ್ಷಣಾ ಕಾಯ್ದೆ) 35ನೇ ಸೆಕ್ಷನ್ ಅಡಿಯಲ್ಲಿ ಕೊಡಗು ಹಾಗೂ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ 643.39 ಚದರ ಕಿ.ಮೀ ಭಾಗವನ್ನು ರಾಜ್ಯ ಸರ್ಕಾರ ನಾಗರಹೊಳೆ ಅಭಯಾರಣ್ಯ ಎಂದು ಘೋಷಿಸಿತ್ತು.

2007ರ ನವೆಂಬರ್ನಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಹುಲಿ ಅಭಯಾರಣ್ಯದ ಸಂಪೂರ್ಣ ಪ್ರದೇಶವನ್ನು ಹೃದಯಭಾಗವೆಂದೂ, ಇದಕ್ಕೆ ರಕ್ಷಣೆ ನೀಡುವ ಸುತ್ತಲ ಪ್ರದೇಶವನ್ನು ಹೊರವಲಯ ಎಂದು ಗುರುತಿಸಲು ನಿರ್ದೇಶನ ನೀಡಿತ್ತು.

ಹೊರವಲಯದಲ್ಲಿ ಬರುವ ಹಳ್ಳಿಗಳ ಗ್ರಾಮಸಭೆಯಲ್ಲಿ ಹೊರವಲಯಕ್ಕೆ ಸೇರಿಸಲು ಅನುಮತಿ ಪಡೆಯಬೇಕಾಗುತ್ತದೆ. ಆದರೆ ನಾಗರಹೊಳೆ ಅಭಯಾರಣ್ಯಕ್ಕೆ ಸೇರಲು ಕೊಡಗು ಜಿಲ್ಲೆ ವ್ಯಾಪ್ತಿಯ ಗ್ರಾಮಗಳಿಂದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಹೊರವಲಯ ಗುರುತಿಸುವ ಪ್ರಕ್ರಿಯೆಗೆ ತಡೆಯಾಗಿತ್ತು.

ಇದೀಗ ಅಧಿಸೂಚನೆಯಲ್ಲಿ ಕೊಡಗು ಜಿಲ್ಲೆಯ ಗ್ರಾಮಗಳನ್ನು ಹೊರಕ್ಕೆ ಇಡಲಾಗಿದೆ. ಗ್ರಾಮಗಳಿಗೆ ಬದಲಾಗಿ ಕೊಡಗು ಜಿಲ್ಲೆಯ ಮೂಕಲ್ ಹಾಗೂ ದೇವಮಾಚಿ ರಕ್ಷಿತ ಅರಣ್ಯವನ್ನು ಹೊರವಲಯ ವ್ಯಾಪ್ತಿಗೆ ಸೇರಿಸಲಾಗಿದೆ. ನಾಗರಹೊಳೆಯ ಹೊರವಲಯಕ್ಕೆ ಇವೆರಡನ್ನು ಸೇರಿಸಿದರೂ ಆಡಳಿತ ವಿಭಾಗ ಈಗಿರುವಂತೆಯೇ ಉಳಿಯಲಿದೆ.

ಆದರೆ ಹೊರವಲಯಕ್ಕೆ ಸೇರಲು ಒಪ್ಪಿಗೆ ಸೂಚಿಸಿರುವ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಐದು ಗ್ರಾಮ, ಹುಣಸೂರಿನ 28 ಗ್ರಾಮ ಹಾಗೂ ಹೆಗ್ಗಡದೇವನಕೋಟೆಯ 44 ಗ್ರಾಮಗಳನ್ನು ಅಧಿಸೂಚನೆಯ ಮೂಲಕ ಈ ವಲಯಕ್ಕೆ ಸೇರಿಸಲಾಗಿದೆ. ಇದರಿಂದಾಗಿ ಅರಣ್ಯ ಪ್ರದೇಶದ 200.57 ಚದರ ಕಿ.ಮೀ ಹಾಗೂ ಗ್ರಾಮಗಳ ವ್ಯಾಪ್ತಿಯ 361.84 ಚದರ ಕಿ.ಮೀ ಪ್ರದೇಶ ನಾಗರಹೊಳೆ ಹುಲಿ ಅಭಯಾರಣ್ಯದ ಹೊರವಲಯವಾಗಿ ದೊರಕಿದಂತಾಗಿದೆ.

ಅಭಿವೃದ್ಧಿಗೆ ತೊಡಕಿಲ್ಲ: ಅರಣ್ಯದ ಹೊರವಲಯವಾಗಿ ಗ್ರಾಮಗಳನ್ನು ಸೇರಿಸಿದರೆ ಅಭಿವೃದ್ಧಿಗೆ ತೊಡಕಾಗುತ್ತದೆ, ಮನೆ ಕಟ್ಟಲು, ಕೈಗಾರಿಕೆಗಳನ್ನು ಸ್ಥಾಪಿಸಲು ಅಥವಾ ಕೃಷಿ ಸಾಲ ಪಡೆಯಲು ಸಾಧ್ಯವಾಗದು ಎನ್ನುವ ಕಲ್ಪನೆ ಗ್ರಾಮಸ್ಥರಲ್ಲಿ ಇದೆ. ಇದೇ ಕಾರಣದಿಂದ ಹೊರವಲಯಕ್ಕೆ ತಮ್ಮ ಗ್ರಾಮಗಳನ್ನು ಸೇರಿಸಲು ಕೊಡಗು ಜಿಲ್ಲಾ ವ್ಯಾಪ್ತಿಯ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಒಪ್ಪಿಗೆ ಸೂಚಿಸಿರಲಿಲ್ಲ.

ಈ ಅನುಮಾನದಲ್ಲಿ ಸತ್ಯಾಂಶವಿಲ್ಲ ಎನ್ನುವ ನಾಗರಹೊಳೆ ಅರಣ್ಯ ಸಂರಕ್ಷಣಾಧಿಕಾರಿ (ಪ್ರಭಾರಿ) ಕುಮಾರ್ ಪುಷ್ಕರ್, `ಹೊರವಲಯ ಹಾಗೂ ಹೃದಯಭಾಗವನ್ನು ಹುಲಿ ಅಭಯಾರಣ್ಯದ ಪ್ರಮುಖ ಅಂಗಗಳು ಎಂದೇ ಹೇಳಬೇಕು. ಹೃದಯಭಾಗವನ್ನು ರಕ್ಷಿಸುವ ಸಲುವಾಗಿಯೇ ಹೊರವಲಯವನ್ನು ಗುರುತಿಸಲಾಗುತ್ತಿದೆ.

ಉರುವಲು, ಜಾನುವಾರು ಮೇವು ಮತ್ತಿತರ ಕಾರಣಗಳಿಗೆ ಹೊರವಲಯದ ಗ್ರಾಮಗಳು ಅರಣ್ಯದ ಮೇಲೆ ಅವಲಂಬಿಸಿರುವುದನ್ನು ಕಾಲಕ್ರಮೇಣ ಕಡಿಮೆ ಮಾಡಬೇಕಾಗುತ್ತದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಯಲ್ಲಿ ಅನುದಾನ ನೀಡಲಿವೆ ಎಂದು ಹೇಳಿದರು.

ಕಟ್ಟಿಗೆ ಬಳಕೆ ಕಡಿಮೆ ಮಾಡಲು ಅಡುಗೆ ಅನಿಲ ಸಂಪರ್ಕ ನೀಡುವುದು ಹಾಗೂ ಕಡಿಮೆ ಹಾಲು ನೀಡುವ ಹಸುಗಳ ಬದಲಿಗೆ ಹೆಚ್ಚು ಹಾಲು ನೀಡುವ ಉತ್ತಮ ತಳಿ ಹಸುಗಳನ್ನು ನೀಡುವ ಯೋಜನೆ ಅನುಷ್ಠಾನವಾಗಲಿದೆ~ ಎಂದರು.

ರಾಜ್ಯದಿಂದ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ
ಹುಲಿ ಪ್ರಾಧಿಕಾರದ ಸೂಚನೆಯ ಪ್ರಕಾರ 2006ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ರಾಜ್ಯದ ಐದು ಹುಲಿ ಅಭಯಾರಣ್ಯಗಳಲ್ಲಿ ಹೃದಯ ಹಾಗೂ ಹೊರ ವಲಯವನ್ನು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿದೆ ಎನ್ನುವ ಅಂಶವನ್ನು ಪ್ರಮಾಣ ಪತ್ರದ ಮೂಲಕ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಇರಿಸಿದೆ ಎಂದು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಧರನ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಇದರ ಜೊತೆಯಲ್ಲಿಯೇ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ (ಜೆಎಲ್ಆರ್) ಹಾಗೂ ಖಾಸಗಿ ರೆಸಾರ್ಟ್ಗಳು ಸಹ ಸಫಾರಿಗೆ ಅನುಮತಿ ನೀಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸುತ್ತಿವೆ ಎಂದು ಜೆಎಲ್ಆರ್ ವ್ಯವಸ್ಥಾಪಕ ನಿರ್ದೇಶಕ ಅನೂರ್ ರೆಡ್ಡಿ ತಿಳಿಸಿದರು. ಆಗಸ್ಟ್ 22ರಂದು ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.