ಬೆಂಗಳೂರು: `ದೇಶದಲ್ಲಿ ಮಿತಿಮೀರಿದ ಭ್ರಷ್ಟಾಚಾರದ ಕಾರಣದಿಂದ ಬಡವರು, ಕಾರ್ಮಿಕರು ಎಲ್ಲ ಸೌಲಭ್ಯಗಳಿಂದ ದೂರ ಉಳಿದು ಅಸಹಾಯಕರಾಗಿದ್ದಾರೆ~ ಎಂದು ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ಎಂ.ಆರ್. ಶ್ರೀನಿವಾಸನ್ ಬೇಸರ ವ್ಯಕ್ತಪಡಿಸಿದರು.

ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ನಡೆದ ಬೆಂಗಳೂರು ವಿವಿಯ 47ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

`ಅರ್ಥ ವ್ಯವಸ್ಥೆ ಸುಧಾರಿಸಿದಂತೆ ಭ್ರಷ್ಟಾಚಾರವೂ ಹೆಚ್ಚುತ್ತಿರುವುದು ವಿಪರ್ಯಾಸ. ಸಾರ್ವಜನಿಕ ಆಸ್ತಿ ಎನಿಸಿರುವ ಭೂಮಿ ಮತ್ತು ಖನಿಜ ಸಂಪತ್ತು ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಅಗತ್ಯ ಎನಿಸಿದೆ. ಈ ಎಲ್ಲ ಸಂಪತ್ತುಗಳು ಸಮನಾಗಿ ಹಂಚಿಕೆಯಾಗದೆ ಖಾಸಗಿ ಸ್ವತ್ತು ಆಗುತ್ತಿವೆ. ಅದಕ್ಕೆ ಸರ್ಕಾರಗಳೇ ಕಾರಣ ಆಗುತ್ತಿವೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.

`ದೇಶದ ಬಹುಪಾಲು ಜನತೆಗೆ ಶುಚಿತ್ವದ ವ್ಯವಸ್ಥೆ ಕಲ್ಪಿಸಿಲ್ಲ. 2050ರ ವೇಳೆಗೆ ಭಾರತ ಜಗತ್ತಿನ ಮೂರನೇ ಬಹುದೊಡ್ಡ ಶ್ರೀಮಂತ ರಾಷ್ಟ್ರ ಎನಿಸಿಕೊಳ್ಳಲಿದೆ. ಆ ವೇಳೆಗೆ ದೇಶದಲ್ಲಿರುವ ಎಲ್ಲರಿಗೆ ಶೌಚಾಲಯದ ವ್ಯವಸ್ಥೆ ದೊರಕುವಂತಾಗಬೇಕು~ ಎಂದರು.

ವಿಭಜನೆಗೆ ವಿರೋಧ: `ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸುವ, ಮೂರು ಭಾಗಗಳಿಗೆ ವಿಂಗಡಿಸುವ ಹಾಗೂ ಯುವಿಇಸಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವ್ಯಾಪ್ತಿಗೆ ಒಳಪಡಿಸುವ ಸುದ್ದಿ ಇದೆ. ವಿಟಿಯು ವ್ಯಾಪ್ತಿಗೆ ಸೇರಿಸಿದರೆ ಸಾವಿರಾರು ಅನುಪಮ ತಂತ್ರಜ್ಞರನ್ನು ಸೃಷ್ಟಿಸಿದ ವಿಶ್ವೇಶ್ವರಯ್ಯ ಅವರ ಕನಸಿನ ಕೂಸಾದ ಸಂಸ್ಥೆಯನ್ನು ಕಸಿದುಕೊಂಡಂತಾಗುತ್ತದೆ~ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯಪಾಲರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಆಯ್ದ 14 ಮಂದಿಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಚಿನ್ನದ ಪದಕ ಪ್ರದಾನ ಮಾಡಿ ತುರ್ತು ಕಾರ್ಯದ ನಿಮಿತ್ತ ನಿರ್ಗಮಿಸಿದರು. ಉಳಿದವರಿಗೆ ಕುಲಪತಿ ಪ್ರೊ.ಎನ್. ಪ್ರಭುದೇವ್ ಪದವಿ ಪ್ರದಾನ ಮಾಡಿದರು. 224 ಚಿನ್ನದ ಪದಕ, 89 ನಗದು ಬಹುಮಾನ, 129 ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಈ ಬಾರಿ 40,114 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆದರು.

ಕುಲಸಚಿವ ಪ್ರೊ.ಬಿ.ಸಿ. ಮೈಲಾರಪ್ಪ, ಪರೀಕ್ಷಾಂಗ ಕುಲಸಚಿವ ಸುಬ್ರಹ್ಮಣ್ಯ, ವಿವಿಧ ನಿಕಾಯಗಳ ಡೀನ್ಗಳು, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡದಿರುವುದು ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.