ಭಾನುವಾರ, ಜನವರಿ 26, 2020
23 °C

ಹೆಚ್ಚುವರಿ ಗೃಹ ಕಾರ್ಯದರ್ಶಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್‌(ಪಿಟಿಐ): ಕೆಲಸ ಕೊಡಿಸುವ ನೆಪದಲ್ಲಿ 29 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇರೆಗೆ ಉತ್ತರಾಖಂಡ ಹೆಚ್ಚುವರಿ ಗೃಹ ಕಾರ್ಯದರ್ಶಿ ಜೆ.ಪಿ. ಜೋಶಿ ಅವರನ್ನು ಅಮಾನತು ಮಾಡಲಾಗಿದೆ.ಜೋಶಿ ಅಮಾನತಿಗೆ ಮುಖ್ಯಮಂತ್ರಿ ವಿಜಯ್‌ ಬಹುಗುಣ ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಜೋಶಿ ಅವರು ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ದೂರವಾಣಿ ಕರೆ ಮಾಡಿ ನನ್ನನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ’ ಎಂದು ಮಹಿಳೆಯು ನ.25ರಂದು ನೀಡಿದ ದೂರಿನಲ್ಲಿ ಜೋಶಿ ವಿರುದ್ಧ ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)