ಹೈನುಗಾರಿಕೆ ಮಾಡುವುದು ಕಷ್ಟ ಎಂಬ ಅಭಿಪ್ರಾಯ ಬಹಳ ರೈತರದ್ದು. ಇತ್ತೀಚೆಗೆ ಪಶು ಆಹಾರದ ಬೆಲೆಯಲ್ಲಾದ ತೀವ್ರ ಏರಿಕೆ ಈ ಅನಿಸಿಕೆಗೆ ಇಂಬು ನೀಡುವಂತಿದೆ.

ಮೊದಲಿನಿಂದಲೂ ಕೈಗೊಳ್ಳುತ್ತ ಬಂದ ಮೂಲ ಕಸುಬಾದ ಕೃಷಿ ಕಾರ್ಯವನ್ನೇ ಹಲವಾರು ಕಾರಣಗಳಿಂದ ಕೈಬಿಡುತ್ತಿರುವಾಗ ಪಶುಪಾಲನೆ ಆಸಕ್ತಿ ಹುಟ್ಟಿಸೀತೇ?
`ಹಿಂಡಿ ರೇಟು ಈ ಥರ ಹೆಚ್ಚಾಗ್ತಾ ಹೋದ್ರೆ ಹಸು ಸಾಕೋದು ಹೇಗೆ?~ ಇದು ಈಗೀಗ ಎಲ್ಲಾ ಹೈನುಗಾರರ ಮನಸ್ಸಿನಲ್ಲಿ ಮೂಡುತ್ತಿರುವ ಪ್ರಶ್ನೆ. ಹೌದು. ಕಳೆದ ಒಂದೂವರೆ ಎರಡು ತಿಂಗಳಿನಿಂದ ಪಶು ಆಹಾರದ ಬೆಲೆ ತೀವ್ರ ಗತಿಯಲ್ಲಿ ಏರತೊಡಗಿದೆ. ಆದರೆ ರೈತ ಉತ್ಪಾದಿಸುವ ಹಾಲಿನ ದರ ಹೆಚ್ಚಲಿಲ್ಲ.

ಈಗಾಗಲೇ ಹೈನುಗಾರಿಕೆಯಿಂದ ರೈತರಿಗೆ ದೊರೆಯುವ ಲಾಭ ಕತ್ತಿಯ ಅಲಗಿನ ಮೇಲೆ ನಿಂತಿದೆ. ಹೀಗಿರುವಾಗ ಕೇವಲ ಎರಡು ತಿಂಗಳ ಅವಧಿಯಲ್ಲಿ ಪಶು ಆಹಾರ ತಯಾರಿಕೆಗೆ ಬೇಕಾಗುವ ಮೆಕ್ಕೆ ಜೋಳ, ಬೂಸಾ, ಸೂರ್ಯಕಾಂತಿ ಹಿಂಡಿ, ಹತ್ತಿಕಾಳು ಹಿಂಡಿ, ಸೋಯಾ ಇತ್ಯಾದಿ ಘಟಕಾಂಶಗಳ ಬೆಲೆ ಒಂದೂವರೆಯಿಂದ ಎರಡು ಪಟ್ಟು ಹೆಚ್ಚಾಗಿದೆ.

ಪರಿಣಾಮವಾಗಿ ಸಿದ್ಧ ಪಶು ಆಹಾರದ ಬೆಲೆ ಕಿಲೋ ಒಂದಕ್ಕೆ ಮೂರರಿಂದ ನಾಲ್ಕು ರೂಪಾಯಿಗಳಷ್ಟು ಅಧಿಕವಾಗಿದೆ. ಈ ತನಕ ಅತಿ ಕಡಿಮೆ ಲಾಭದಲ್ಲಿ ಹೈನುಗಾರಿಕೆ ನಡೆಸುತ್ತಿರುವ ಸಣ್ಣ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ.

ಮೊದಲಿನಿಂದಲೂ ಹಳ್ಳಿಗಳಲ್ಲಿ ಹೈನುಗಾರಿಕೆಯನ್ನು ಸಣ್ಣ ಪ್ರಮಾಣದಲ್ಲಿ ನಡೆಸಿಕೊಂಡು ಬರಲಾಗುತ್ತಿದ್ದರೂ ಈಗೀಗ ಇದೊಂದು ಉದ್ಯಮದ ರೂಪವನ್ನು ತಾಳುತ್ತಿದೆ. ಅಧಿಕ ಬೇಡಿಕೆ ದೊಡ್ಡ ಪ್ರಮಾಣದ ಹೈನೋದ್ಯಮಕ್ಕೆ ದಾರಿಯಾಗಿದೆ. ಮೊದಲೆಲ್ಲ ಪೂರ್ಣವಾಗಿ ಸಣ್ಣ ರೈತರೇ ಹಾಲು ಉತ್ಪಾದಕರಾಗಿದ್ದರು. ಆದರೆ ಈಗೀಗ ಒಟ್ಟು ಉತ್ಪಾದನೆಯ 20 ಪ್ರತಿಶತದಷ್ಟು ಹಾಲು ದೊಡ್ಡ ಪ್ರಮಾಣದ ಹೈನುಗಾರಿಕೆಯಿಂದ ಬರುತ್ತಿದೆ.

ಹೈನೋದ್ಯಮವು ಹೆಚ್ಚಿನ ಸಂಖ್ಯೆಯ ರೈತರು ಸಣ್ಣ ಪ್ರಮಾಣದಲ್ಲಿ ಒಂದೆರಡು ಹೈನುರಾಸುಗಳನ್ನು ಸಾಕುವುದಾಗಿರಬಹುದು ಅಥವಾ 50 ರಿಂದ 100 ರಾಸುಗಳನ್ನು ಸಾಕುವ ದೊಡ್ಡ ದೊಡ್ಡ ಹಾಲಿನ ಡೈರಿಗಳಾಗಿರಬಹುದು. ಗಾತ್ರ ಯಾವುದೇ ಇರಲಿ, ಆರಂಭಿಸುವಾಗ ಇದರ ಸಾಧಕ ಬಾಧಕಗಳನ್ನು ಆಲೋಚಿಸಿಕೊಳ್ಳಬೇಕಾಗುತ್ತದೆ.

ಶೇಕಡಾ ಅರವತ್ತಕ್ಕಿಂತ ಹೆಚ್ಚು ರೈತರು ಕೃಷಿಯ ಜೊತೆ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಸಾಮುದಾಯಿಕ ಜ್ಞಾನ ಹಾಗೂ ಪಾರಂಪರಿಕ ಜ್ಞಾನ ಎರಡೂ ಮಿಳಿತಗೊಂಡಿರುವ ಹೈನುಗಾರಿಕೆ ನಮಗೇನೂ ಹೊಸದಲ್ಲ. ಜೊತೆಗೆ ಇತರ ಕೆಲವು ಉದ್ಯಮಗಳಂತೆ ಹೈನುಗಾರಿಕೆಯನ್ನು ಪ್ರಾರಂಭಿಸಲು ತೀರಾ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ.

ಹೈನುಗಾರಿಕೆ ಪ್ರತಿನಿತ್ಯ ಆದಾಯ ನೀಡುವ ಚಟುವಟಿಕೆ.ಹಾಲಿಗೆ ತುಂಬಾ ಬೇಡಿಕೆ ಇದೆ. ವರ್ಷದ ಎಲಾಲ್ಲಿ ದಿನಗಳಲ್ಲೂ ಈ ಬೇಡಿಕೆಗೆ ಅಡಚಣೆಯಿಲ್ಲ. ಹಾಲಿನ ಅಗತ್ಯ ದಿನದಿಂದ ದಿನಕ್ಕೆ ಏರುಮುಖವಾಗಿಯೇ ಸಾಗುತ್ತಿದೆ. ಈ ಕೊರತೆ ತುಂಬಲು ಇನ್ನೂ ಹೆಚ್ಚು ಹಾಲನ್ನು ಉತ್ಪಾದಿಸಲು ಅವಕಾಶವಿದೆ.

ಹಾಲಿನಂತೆಯೇ ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೂ ಉತ್ತಮ ಬೇಡಿಕೆಯಿದೆ. ಇದರ ಮಾರುಕಟ್ಟೆಯೂ ಸ್ಥಿರವಾಗಿರುವುದನ್ನು ನಾವು ಕಾಣಬಹುದು. ಚಿಕ್ಕ ದೊಡ್ಡ ಪಟ್ಟಣಗಳ ಹೊರವಲಯಗಳಲ್ಲಿ ಡೈರಿಗಳನ್ನು ಸ್ಥಾಪಿಸಿದರೆ ನೇರ ಮಾರಾಟದಿಂದ ಲಾಭ ಹೆಚ್ಚು. ಆದ್ದರಿಂದ ಬಹುತೇಕ ಎಲ್ಲಾ ಪಟ್ಟಣ ಮತ್ತು ನಗರಗಳ ಸುತ್ತಲಿನ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಹೈನುಗಾರಿಕೆಯನ್ನು ಕೈಗೊಳ್ಳಲಾಗುತ್ತಿದೆ.

ಈಗಾಗಲೇ ಹೈನುಗಾರಿಕೆಯಲ್ಲಿ ನಾವು ಬಹಳಷ್ಟು ಮುಂದುವರಿದಿದ್ದೇವೆ. ಜಗತ್ತಿನಲ್ಲಿ ನಮಗೇ ಪ್ರಥಮ ಸ್ಥಾನ. ಆದರೂ ಸಾಧಿಸಬೇಕಾದದ್ದು ಇನ್ನೂ ಬಹಳ ಇದೆ. ವೈಜ್ಞಾನಿಕವಾದ ಸುಧಾರಿತ ಹೈನುಗಾರಿಕಾ ವಿಧಾನಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಾಗಿದೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ರೈತ ವಿಶ್ವೇಶ್ವರ ಹೆಗಡೆಯವರು ಒಬ್ಬ ಜಾನುವಾರು ದಲ್ಲಾಳಿ. ಏಳೆಂಟು ಹೈನು ರಾಸುಗಳು ಯಾವಾಗಲೂ ಅವರ ಕೊಟ್ಟಿಗೆಯಲ್ಲಿರುತ್ತವೆ. ಅವರು ಹಾಲನ್ನು ಡೈರಿಗೆ ಹಾಕುವುದಿಲ್ಲ. ಬದಲಿಗೆ ಖೋವಾ ತಯಾರಿಸಿ ಸ್ವತಃ ಮಾರಾಟ ಮಾಡುತ್ತಾರೆ.

ಕಳೆದ ಇಪ್ಪತ್ತು ವರ್ಷಗಳಿಂದ ಖಾಯಂ ಆಗಿ ಹತ್ತಿರದ ಶಿರಸಿಯ ಕೆಲವು ಬೇಕರಿ ಅಂಗಡಿಗಳಿಗೆ ಇದನ್ನು ಮಾರುತ್ತಾರೆ. ಹಾಲನ್ನು ಡೈರಿಗೆ ಮಾರುವುದಕ್ಕಿಂತ ಖೋವಾ ಮಾಡಿದರೇ ಲಾಭ ಹೆಚ್ಚು ಎಂಬುದು ಅವರ ಅಭಿಪ್ರಾಯ. ಇಂತಹ ಮೌಲ್ಯವರ್ಧನೆಯ ಪ್ರಯತ್ನಗಳು ಹೆಚ್ಚು ಸಂಖ್ಯೆಯಲ್ಲಿ ನಡೆಯಬೇಕಾಗಿದೆ.

ಉತ್ಸಾಹದಿಂದ ಪ್ರಾರಂಭಿಸಿದ ಹೈನುಗಾರಿಕೆ ಕೆಲವೇ ದಿನಗಳಲ್ಲಿ ಮುಚ್ಚಿಹೋಗಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಶಿರಸಿಯ ಮಾದೇವಿ ಗೌಡ ಬ್ಯಾಂಕು ಸಾಲ ಕೊಡುತ್ತದೆಂದು ಎರಡು ಹಸುಗಳನ್ನು ತಂದರು. ಆದರೆ ಸರಿಯಾದ ಹುಲ್ಲು ಹಿಂಡಿ ನೀಡಲಾಗದೇ ತುಂಬು ಗಬ್ಬದಲ್ಲಿ ಒಂದು ಹಸು ಸಾವನ್ನಪ್ಪಿದರೆ ಇನ್ನೊಂದು ಕೂಡ ಕ್ರಮೇಣ ಬಡಕಲಾಗಿ ನೆಲ ಹಿಡಿದು ಸತ್ತು ಹೋಯಿತು.

ಹಾಲನ್ನು ಹೆಚ್ಚು ಕಾಲ ಸಂಗ್ರಹಿಸಿ ಇಡಲಾಗದು. ಇದನ್ನು ಸುಲಭವಾಗಿ ಕಲಬೆರಕೆ ಮಾಡಬಹುದು. ನಿಯಂತ್ರಣವಿಲ್ಲದ ಕಳಪೆ ಗುಣಮಟ್ಟದ ವಿವಿಧ ಹಾನಿಕಾರಕ ರಾಸಾಯನಿಕಗಳಿಂದ ಕೂಡಿದ ಕೃತಕ ಹಾಲು ಕೂಡ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿವೆ.

ಈಗ ನಮ್ಮ ದೇಶದಲ್ಲಿ ಉತ್ಪಾದಿಸಲಾಗುತ್ತಿರುವ ಹಾಲಿನಲ್ಲಿ ಸೋಂಕುಕಾರಕ ಬ್ಯಾಕ್ಟೀರಿಯಾಗಳು, ಕೀಟನಾಶಕಗಳು ಮತ್ತು ಆಂಟಿಬಯೋಟಿಕ್ಗಳು, ಭಾರಲೋಹದ ಅಂಶಗಳ ಪ್ರಮಾಣವು ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರುವ ಸಾಧ್ಯತೆಗಳೂ ಇವೆ. ಈ ಅಂಶಗಳು ಅಂತರಾಷ್ಟ್ರೀಯ ಮಾನದಂಡವನ್ನು ಪೂರೈಸಲಾರವು. ಇಂತಹ ಹಾಲು ಆರೋಗ್ಯಕ್ಕೆ ಹಾನಿಕರವಾಗಬಹುದು. ಹೀಗಾಗಿ ಇನ್ನು ಮುಂದೆ ಶುದ್ಧ ಹಾಲಿನ ಉತ್ಪಾದನೆಯ ಬಗ್ಗೆ ಹೆಚ್ಚು ಗಮನ ಕೊಡಬೇಕಾಗಿದೆ.

ಮಾರುಕಟ್ಟೆ ದೂರಲ್ಲಿದ್ದರೆ ಹೈನುಗಾರಿಕೆ ಕಷ್ಟ. ಈಗ ಹಾಲು ಉತ್ಪಾದಕರ ಸಂಘಟನೆಗೆ ಇರುವ ಬಲ ಮತ್ತು ಅವುಗಳ ಸಂಖ್ಯೆ ಸಾಕಾಗದು. ಉತ್ಪಾದನೆಯ ವೆಚ್ಚವನ್ನಾಧರಿಸಿ ಹಾಲಿನ ದರವನ್ನು ನಿಗದಿಪಡಿಸುವ ಸ್ವಾತಂತ್ರ್ಯ ಹೈನುಗಾರರಿಗಿಲ್ಲ.

ದೇಶದಲ್ಲಿ ಹೈನುಗಾರಿಕೆಗೆ ಅವಕಾಶವಿರುವ ಎಲ್ಲಾ ಪ್ರದೇಶಗಳಲ್ಲಿ ಅಮೂಲ್ ಮಾದರಿಯ ರೈತರ ಸಹಕಾರ ಸಂಘ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗಿಲ್ಲ. ಹೈನುಗಾರಿಕೆಗೆ ಲಭ್ಯವಿರುವ ಸಾಲದ ಬಡ್ಡಿದರ ಹೆಚ್ಚು.

ಸಣ್ಣ ಸಣ್ಣ ಹೈನುಗಾರರಿಗೆ ವೈಜ್ಞಾನಿಕ ಪಶುಪಾಲನಾ ಪದ್ಧತಿಗಳ ಬಗ್ಗೆ ತಿಳುವಳಿಕೆ ಕಡಿಮೆ, ತಪ್ಪು ಕಲ್ಪನೆಳು ಹೆಚ್ಚು. ಈ ಉದ್ಯೋಗಕ್ಕೆ ರಜಾ ದಿನಗಳು ಇಲ್ಲ. ಬರಡಾದ ಹಾಗೂ ವಯಸ್ಸಾದ ಜಾನುವಾರುಗಳನ್ನು ಮತ್ತು ಮಿಶ್ರತಳಿ ಗಂಡುಕರುಗಳನ್ನು ಸಾಕಿ ಲಾಭವಿಲ್ಲ. ಹೈನುಗಾರಿಕೆಯಲ್ಲಿ ಅಗತ್ಯವಾದ ಮೇವು, ಹಿಂಡಿ, ಔಷಧಗಳಂತಹ ಎಲ್ಲಾ ಒಳಸುರಿಗಳ ಬೆಲೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ.

ಆದರೆ ಇವು ಯಾವುವೂ ಪರಿಹಾರ ಕಾಣದ ಸಮಸ್ಯೆಗಳೇನಲ್ಲ. ಹೈನುಗಾರರ ವಿವೇಚನೆಯಿಂದ ಮತ್ತು ಸರಕಾರದ ಸಹಭಾಗಿತ್ವದಿಂದ ಈ ಎಲ್ಲಾ ತೊಂದರೆಗಳಿಗೆ ಪರಿಹಾರ ದೊರಕಿಸಿಕೊಳ್ಳಬಹುದಾಗಿದೆ.

ಒಂದಂತೂ ನಿಜ. ಹೈನುಗಾರಿಕೆಯ ವಿಸ್ತರಣೆಯಿಂದ ನಮ್ಮ ಗ್ರಾಮೀಣ ಜನತೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವದ್ಧಿ ಇನ್ನೂ ವೇಗ ಪಡೆದುಕೊಳ್ಳುತ್ತದೆ. ಆ ಮೂಲಕ ಬಡತನದ ನಿವಾರಣೆಗಾಗಿ ಇದು ಅತ್ಯಂತ ಸೂಕ್ತ ವೇದಿಕೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.