ಸೋಮವಾರ, ಜೂಲೈ 13, 2020
29 °C

ಹೊಸ ಜಲ ನೀತಿಯಲ್ಲಿ ಪರಿಹಾರ ಸೂತ್ರ Ver. 6

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರು ಹಂಚಿಕೆ ಜೊತೆಗೆ ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳು ಮತ್ತು ಅದನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಒಳಗೊಂಡ ಹೊಸ ಜಲ ನೀತಿಯು ಈ ವರ್ಷಾಂತ್ಯದ ವೇಳೆಗೆ ರೂಪುಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರದ ಕ್ರಿಯಾ ಯೋಜನೆಗೆ ಚೌಕಟ್ಟು ಒದಗಿಸುವ ಮತ್ತು ನೀರು ಹಂಚಿಕೆ, ಅಂತರ್ಜಲ ಸಂರಕ್ಷಣೆ,  ರಾಷ್ಟ್ರೀಯ ಜಲ ನೀತಿ, ಮಳೆ ನೀರು ಸಂಗ್ರಹ, ನದಿಗಳ ಜೋಡಣೆಯಂತಹ ವಿವಿಧ ವಿಷಯಗಳನ್ನು ಒಳಗೊಳ್ಳುವ ರಾಷ್ಟ್ರೀಯ ಜಲ ನೀತಿಯನ್ನು 1987ರಲ್ಲಿ ಮೊದಲು ವ್ಯವಸ್ಥಿತವಾಗಿ ನಿರೂಪಿಸಲಾಯಿತು. ನಂತರ 2002ರಲ್ಲಿ ಮರುಪರಿಶೀಲಿಸಲಾಯಿತು.

ಈಗ ಮತ್ತೆ ಪರಿಶೀಲನೆ ನಡೆಯುತ್ತಿದ್ದು ಜಲ ಸಂಪನ್ಮೂಲಗಳ ಮೇಲೆ ಹವಾಮಾನ ವೈಪರೀತ್ಯದ ದುಷ್ಪರಿಣಾಮದ ಸಾಧ್ಯತೆ ಮತ್ತು ಅಗತ್ಯವಿರುವ ನಿವಾರಣಾ ಕ್ರಮಗಳ ಬಗ್ಗೆ ಸಲಹೆ ನೀಡಲಾಗುವುದು ಎಂದು  ಜಲಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.