ಟೆಸ್ಟ್ ಕ್ರಿಕೆಟ್ನ ಆರಂಭಿಕ ಬ್ಯಾಟಿಂಗ್ ಸ್ವರೂಪವನ್ನೇ ಬದಲಿಸಿದ ವೀರೇಂದ್ರ ಸೆಹ್ವಾಗ್ ಹಾಗೂ ಭಾರತದ ಯಶಸ್ವಿ ವೇಗದ ಬೌಲರ್ಗಳ ಸಾಲಿಗೆ ನಿಸ್ಸಂಶಯವಾಗಿ ಸೇರುವ ಜಹೀರ್ ಖಾನ್ ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು. ಹೆಚ್ಚೂಕಡಿಮೆ ಏಕಕಾಲದಲ್ಲಿಯೇ ಇಬ್ಬರ ವೃತ್ತಿಬದುಕು ಪ್ರಾರಂಭವಾದದ್ದು (2000ದಲ್ಲಿ ಜಹೀರ್ ಖಾನ್, 201ರಲ್ಲಿ ಸೆಹ್ವಾಗ್). ಅಲ್ಲಿಂದ ಹತ್ತು ವರ್ಷ ಇಬ್ಬರೂ ಮಿಂಚಿದರು. ಆಮೇಲೆ ತಂಡದಿಂದ ಹೊರಗುಳಿದರು. ಒಂದೂವರೆ ವರ್ಷ ಮರಳಲು ಸಾಧ್ಯವಾಗಲೇ ಇಲ್ಲ.

ಅಸಾಂಪ್ರದಾಯಿಕವೂ ದಾಳಿಕೋರತನದ್ದೂ ಆದ ಸೆಹ್ವಾಗ್ ಬ್ಯಾಟಿಂಗ್ ಶೈಲಿ ವೀಕ್ಷಕರಿಗೆ ರಸದೌತಣ ನೀಡಿತು. ಅವರು ಬ್ಯಾಟಿಂಗ್ ಮಾಡುವಾಗ ಮಂಕಾದ ಕ್ಷಣ ಕಾಣುತ್ತಿದ್ದುದೇ ಅಪರೂಪ. ವಿವಿಯನ್ ರಿಚರ್ಡ್ಸ್ ಚೆಂಡನ್ನು ಹೊಡೆಯುತ್ತಿದ್ದ ರೀತಿಯನ್ನು ಸೆಹ್ವಾಗ್ ಬ್ಯಾಟಿಂಗ್ ಅನೇಕರಿಗೆ ನೆನಪಿಸಿತು.

ಭಾರತದ ಪರವಾಗಿ ತ್ರಿಶತಕ ಗಳಿಸಿದ ಏಕೈಕ ಆಟಗಾರ ಸೆಹ್ವಾಗ್. ಈ ಸಾಧನೆಯನ್ನು ಅವರು ಎರಡು ಸಲ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಗಳಿಸಿದಾಗ, 300 ರನ್ ಗಡಿ ದಾಟಲು ಅವರು ಕೇವಲ 278 ಎಸೆತಗಳನ್ನು ಎದುರಿಸಿದ್ದರು.

ಇದು ಕೂಡ ದಾಖಲೆಯೇ. ಏಕದಿನದ ಕ್ರಿಕೆಟ್ನಲ್ಲಿ ದ್ವಿಶತಕ ಹಾಗೂ ಟೆಸ್ಟ್ನಲ್ಲಿ ತ್ರಿಶತಕ ಗಳಿಸಿರುವ ಸಾಧನೆಯನ್ನು ಇಬ್ಬರೇ ಮಾಡಿರುವುದು. ಒಬ್ಬರು–ಸೆಹ್ವಾಗ್, ಇನ್ನೊಬ್ಬರು–ವೆಸ್ಟ್ಇಂಡೀಸ್ನ ಕ್ರಿಸ್ ಗೇಲ್. ಇನಿಂಗ್ಸ್ನ ಯಾವುದೇ ಹಂತದಲ್ಲಾಗಲೀ, ಪಂದ್ಯದ ಒತ್ತಡ ಇದ್ದಾಗಲಾಗಲೀ ಬ್ಯಾಟಿಂಗ್ ಶೈಲಿಯಲ್ಲಿ ಸೆಹ್ವಾಗ್ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. 294 ರನ್ ಇರುವಾಗ ಕ್ರೀಸ್ನಿಂದ ಆಚೆ ಬಂದು, ಸಿಕ್ಸರ್ ಹೊಡೆಯಲು ಗುಂಡಿಗೆ ಬೇಕು.

ಜಹೀರ್ ಶೈಲಿಯೇ ಬೇರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 2000ದಲ್ಲಿ ಕ್ರಿಕೆಟ್ಗೆ ಕಾಲಿಟ್ಟ ಅವರು ಬಹು ಬೇಗ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು. 2011ರ ವಿಶ್ವಕಪ್ ಅವರಿಗೆ ಸ್ಮರಣೀಯ. ಆ ಟೂರ್ನಿಯಲ್ಲಿ 21 ವಿಕೆಟ್ಗಳನ್ನು ಅವರು ಪಡೆದಿದ್ದರು. ಆ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಕೂಡ ಅವರ ಹೆಸರಲ್ಲೇ ಇದೆ.

ಗಾಯದ ಸಮಸ್ಯೆ ಅವರಿಗೆ ಪದೇಪದೇ ತೊಂದರೆ ನೀಡಿತು. ಅವನ್ನೆಲ್ಲಾ ಸರಿಪಡಿಸಿಕೊಂಡು, ಬೌಲಿಂಗ್ ಶೈಲಿಯನ್ನು ಕೂಡ ಬದಲಿಸಿಕೊಂಡರು. ಎಡಗೈ ವೇಗದ ಬೌಲರ್ ಜಹೀರ್ ಹಳೆಯ ಚೆಂಡಿನಲ್ಲಿ ಹಾಕುತ್ತಿದ್ದ ರಿವರ್ಸ್ ಸ್ವಿಂಗ್ಗಳು ತುಂಬಾ ಪರಿಣಾಮಕಾರಿಯಾಗಿ ಇರುತ್ತಿದ್ದುವು. 92 ಟೆಸ್ಟ್ ಪಂದ್ಯಗಳನ್ನು ಆಡಿದ ಅವರು 311 ವಿಕೆಟ್ಗಳನ್ನು ಪಡೆದರು.

ಏಕದಿನ ಕ್ರಿಕೆಟ್ನಲ್ಲಿ ಅವರು 200 ಪಂದ್ಯಗಳನ್ನು ಆಡಿ, 282 ವಿಕೆಟ್ಗಳನ್ನು ಗಳಿಸಿದರು. ಕಪಿಲ್ ದೇವ್ ಅವರನ್ನು ಹೊರತುಪಡಿಸಿದರೆ ಇಷ್ಟು ವಿಕೆಟ್ಗಳನ್ನು ಭಾರತದ ಪರವಾಗಿ ಬೇರೆ ಯಾವ ವೇಗದ ಬೌಲರ್ ಕೂಡ ಪಡೆದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.