ಬೆಂಗಳೂರು: `ಅಲೋಪತಿ ವೈದ್ಯಕೀಯ ಚಿಕಿತ್ಸೆಯು ಇಂದು ವಾಣಿಜ್ಯೀಕರಣಗೊಂಡು ಸಾಮಾನ್ಯ ಜನರಿಗೆ ದುಬಾರಿಯಾಗಿದೆ. ಹೀಗಾಗಿ ಹೋಮಿಯೋಪತಿ ಪದ್ಧತಿಯು ಎಲ್ಲರಿಗೂ ಕೈಗೆಟುಕುವ ಉತ್ತಮ ವೈದ್ಯ ಪದ್ಧತಿಯಾಗಿದೆ~ ಎಂದು ಹೋಮಿಯೋಪತಿ ವೈದ್ಯ ಡಾ.ಬಿ.ಟಿ.ರುದ್ರೇಶ್ ಹೇಳಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ಶನಿವಾರ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮಾತುಕತೆಯಲ್ಲಿ ತಿಂಗಳ ಅತಿಥಿಯಾಗಿ ಅವರು ಮಾತನಾಡಿದರು.`ಹೋಮಿಯೋಪತಿ ಪದ್ಧತಿ ಇಲ್ಲದೇ 2020ರ ವೇಳೆಗೆ ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಸಾಧ್ಯವಿಲ್ಲ. ಕ್ಯಾನ್ಸರ್, ಬಂಜೆತನ ನಿವಾರಣೆ ಒಳಗೊಂಡಂತೆ ನಾನಾ ಕಾಯಿಲೆಗೆ ಕಡಿಮೆ ಬೆಲೆಯಲ್ಲಿ ಹೋಮಿಯೋಪತಿ ವಿಧಾನದ ಮೂಲಕ ಚಿಕಿತ್ಸೆಯನ್ನು ನೀಡಬಹುದು~ ಎಂದರು.

`ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಆಸ್ಪತ್ರೆಯ ಕಟ್ಟಡ ನಿರ್ಮಿಸಿ, ದುಬಾರಿ ಬೆಲೆಯ ಸಾಧನಗಳನ್ನು ಅಳವಡಿಸಿದ ಮಾತ್ರಕ್ಕೆ ಅಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುತ್ತದೆ ಎಂದು ಭಾವಿಸುವಂತಿಲ್ಲ~ ಎಂದರು.

`ಎಸ್.ಎಲ್.ಬೈರಪ್ಪ ಅವರ ಕಾದಂಬರಿಗಳು ನನ್ನ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದ್ದು, ಅವುಗಳಲ್ಲಿ `ದೂರ ಸರಿದರು~ ನನ್ನ ಅಚ್ಚು ಮೆಚ್ಚಿನ ಕಾದಂಬರಿಯಾಗಿದೆ. ಇಂಗ್ಲಿಷ್ನ ಹಲವು ಕೃತಿಗಳು ನನ್ನ ಬದುಕಿಗೆ ತಿರುವು ನೀಡಿವೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.