ಹುಬ್ಬಳ್ಳಿ: ಸೂಕ್ಷ್ಮ ಪ್ರದೇಶ ಎಂದೇ ಪರಿಗಣಿಸಲಾಗಿರುವ ನಗರದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಜನತೆ ಇನ್ನೂ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಶಾಂತಿ–ಸುವ್ಯವಸ್ಥೆ ಕಾಪಾಡುವುದು ಸಹ ಪೊಲೀಸ್ ಇಲಾಖೆಗೆ ಸವಾಲೇ ಸರಿ.

ಆದರೆ, ಹೋಳಿ ಸಂದರ್ಭದಲ್ಲಿ ನಡೆಯುವ ಮೆರವಣಿಗೆ ಹಾಗೂ ಓಕುಳಿಯಾಟದ ಮೇಲೆ ಕಣ್ಣಿಟ್ಟು, ಅಹಿತಕರ ಘಟನೆಗೆ ಪ್ರಚೋದಿಸುವವರನ್ನು ಕಂಡು ಹಿಡಿಯುವ ಸಂಬಂಧ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್ ಇದೇ ಮೊದಲ ಬಾರಿಗೆ ‘ವೆಹಿಕಲ್ ಮೌಂಟೆಡ್ ಸರ್ವೆಲನ್ಸ್ ಕ್ಯಾಮೆರಾ’ ಬಳಕೆ ಮಾಡುತ್ತಿದೆ.

‘ವಾಹನವೊಂದಕ್ಕೆ ಅಳವಡಿಸಲಾಗುವ ಅತ್ಯಾಧುನಿಕ ಎರಡು ಕ್ಯಾಮೆರಾಗಳು ಚಿತ್ರೀಕರಿಸುವ ದೃಶ್ಯಗಳನ್ನು 38 ದಿನಗಳ ವರೆಗೆ ಸಂಗ್ರಹಿಸಿ ಇಡುವ ವ್ಯವಸ್ಥೆಯೂ ಇದೆ’ ಎಂದು ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂತಹ ಜನಸಂದಣಿ ಇದ್ದರೂ ಸೂಕ್ಷ್ಮ ಸಂಗತಿಗಳನ್ನು ಈ ಕ್ಯಾಮೆರಾಗಳು ಸೆರೆಯುತ್ತವೆ. 360 ಡಿಗ್ರಿ ತಿರುಗಬಲ್ಲ ಹಾಗೂ 500 ಮೀಟರ್ ದೂರದ ವರೆಗಿನ ವಸ್ತು, ಘಟನೆಯನ್ನು ಚಿತ್ರೀಕರಿಸಬಲ್ಲವು. ಅಲ್ಲದೇ, 120 ಕಿ.ಮೀ. ವೇಗದಲ್ಲಿ ಚಲಿಸುವ ವಾಹನದ ನೋಂದಣಿ ಸಂಖ್ಯೆಯನ್ನು ಸಹ ಕರಾರುವಾಕ್ಕಾಗಿ ಗುರುತಿಸಿ, ಸೆರೆ ಹಿಡಿಯಬಲ್ಲ ಸಾಮರ್ಥ್ಯವನ್ನೂ ಹೊಂದಿವೆ. ಜನರಿಗೆ ಮಾಹಿತಿ ನೀಡುವ ಸಲುವಾಗಿ ಎರಡು ಮೈಕ್–ಸ್ಪೀಕರ್ ಹೊಂದಿದ ವ್ಯವಸ್ಥೆ ಸಹ ಈ ವಾಹನ ಹೊಂದಿದೆ’ ಎಂದು ವಿವರಿಸಿದರು.

‘ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಂತಹ ಕ್ಯಾಮರಾಗಳ ಬಳಕೆಯನ್ನು ಗಮನಿಸಿದೆ. ಬಂದೋಬಸ್ತ್ ವೇಳೆ ಇಲ್ಲಿಯೂ ಇಂತಹ ಕ್ಯಾಮರಾಗಳನ್ನು ಬಳಕೆ ಮಾಡಬೇಕು ಎಂಬ ದೃಷ್ಟಿಯಿಂದ ಒಟ್ಟು ₨ 5 ಲಕ್ಷ ವೆಚ್ಚದಲ್ಲಿ ಎರಡು ವಾಹನಗಳನ್ನು ಸಿದ್ಧಪಡಿಸಲಾಗಿದೆ’ ಎಂದೂ ಹೇಳಿದರು. ‘ಕೇವಲ ಹೋಳಿ ಹಬ್ಬದ ಸಂದರ್ಭದಲ್ಲಿ ಮಾತ್ರವಲ್ಲ, ಬೃಹತ್ ಸಂಖ್ಯೆಯಲ್ಲಿ ಜನರು ಸೇರುವ ಕಾರ್ಯಕ್ರಮಗಳಲ್ಲಿ ಹಾಗೂ ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಸಹ ಈ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಪೊಲೀಸ್ ಕಮಿಷನರೇಟ್ನ ಅಗತ್ಯಗಳಿಗೆ ಹೊಂದುವ ಹಾಗೂ ಇನ್ಫ್ರಾರೆಡ್ ತರಂಗಗಳನ್ನು ಬಳಸಿ ರೆಕಾರ್ಡಿಂಗ್ ಮಾಡುವ ತಂತ್ರಜ್ಞಾನ ಹೊಂದಿರುವ ಈ ಕ್ಯಾಮರಾಗಳನ್ನು ನಗರದ ಟ್ರಿನಿಟಿ ಟೆಕ್ನಾಲಜೀಸ್ ಆ್ಯಂಡ್ ಸಾಫ್ಟ್ವೇರ್ ಎಂಬ ಸಂಸ್ಥೆ ಪೂರೈಸಿದೆ.
ಫೆ. 28ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದ ‘ಭಾರತ ಗೆಲ್ಲಿಸಿ’ ರ್ಯಾಲಿ ಸಂದರ್ಭದಲ್ಲಿ ಈ ವಾಹನಗಳನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.