ಜಗತ್ತಿನಲ್ಲಿ ಸಂಗೀತಕ್ಕೆ ಮನಸೋಲದವರಿಲ್ಲ. ಅಳುವ ಮಗುವೂ ಅಮ್ಮನ ಲಾಲಿಹಾಡು ಕಿವಿಗೆ ಬಿದ್ದೊಡನೆ ಸುಮ್ಮನಾಗುತ್ತದೆ. ಇಂಥ ಅದ್ಭುತ ಶಕ್ತಿಯಿರುವ ಸಂಗೀತಕ್ಕೆ ಶರಣಾಗಿ ಸಂಗೀತವನ್ನು ಜೀವನವನ್ನಾಗಿಸಿಕೊಳ್ಳಲು ಹೊರಟಿದ್ದಾರೆ ‘ಅಥರ್ವ’ ರಾಕ್ ಬ್ಯಾಂಡ್ನ ಸದಸ್ಯರು.

ಮೂರನೇ ವರ್ಷದ ಎಂಜಿನಿಯರಿಂಗ್ ಓದುತ್ತಿರುವ ಎಚ್.ಎಸ್. ಜೈದೇವ್ (ಗಾಯಕ), ವಿನಯ್ ಕುಮಾರ್, ಸಾಗರ್ (ಗಿಟಾರ್), ವಿವೇಕ್ ರವೀಶ್ ಭಟ್ (ಡ್ರಮ್ಸ್), ಸನತ್ ಹರಿತ್ಸ (ಕಿಬೋರ್ಡ್), ಗೌತಮ್ ನಾಯಕ್ (ಕೊಳಲು) ಹಾಗೂ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ (ಬಿಸಿಎ) ಮಾಡುತ್ತಿರುವ ಅಕ್ಷಯ್ (ವಯಲಿನ್), ಅಮೆಜಾನ್ನಲ್ಲಿ ಉದ್ಯೋಗದಲ್ಲಿರುವ ವೆಸ್ಲಿ (ಬೇಸ್ ಗಿಟಾರ್) ‘ಅಥರ್ವ’ದ ಸದಸ್ಯರು.

ಚಿನ್ಮಯ ಮಿಷನ್ನಲ್ಲಿ ವೇದ, ಶ್ಲೋಕಗಳನ್ನು ಕೇಳುತ್ತಾ ಬೆಳೆದ ಜೈದೇವ್ಗೆ ಸಂಗೀತವೆಂದರೆ ಪಂಚಪ್ರಾಣ. ಪಿ.ಯು.ಸಿಯಲ್ಲಿ ಇರುವಾಗಲೇ ಸಭಾ ಕಾರ್ಯಕ್ರಮಗಳಲ್ಲಿ ಭಾವಗೀತೆ, ಸಿನಿಮಾ ಗೀತೆಗಳನ್ನು ಹಾಡುತ್ತಿದ್ದ ಇವರು ಶಾಸ್ತ್ರಬದ್ಧವಾಗಿ ಸಂಗೀತ ಶಿಕ್ಷಣ ಕಲಿತವರಲ್ಲ. ಆದರೂ ಅನೇಕ ಸಂಗೀತ ಸ್ಪರ್ಧೆಗಳಲ್ಲಿ ಹಾಡಿ ಪ್ರಶಸ್ತಿ ಪಡೆದವರು.

ಜೈದೇವ್ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದಾಗ ಡ್ರಮ್ಸ್ ಕಲಿತಿದ್ದ ವಿವೇಕ್, ವಾದ್ಯ ಸಂಗೀತದ ವಿಡಿಯೊವನ್ನು ಯೂಟ್ಯೂಬ್ನಲ್ಲಿ ನೋಡಿ ಗಿಟಾರ್ ಕರಗತ ಮಾಡಿಕೊಂಡಿದ್ದ ವಿನಯ್ ಕುಮಾರ್ ಜೊತೆಯಾದರು. ಮೂವರು ಸಂಗೀತಾಸಕ್ತರ ಜೊತೆಗೆ ಸೇರಿಕೊಂಡವರು ಕೀಬೋರ್ಡ್ ಕಲಾವಿದ ಸನತ್.

ವಿದ್ಯಾಭ್ಯಾಸದ ಜೊತೆಜೊತೆಗೇ ಸಂಗೀತದ ಮೇಲಿನ ಆಸಕ್ತಿ ಹೆಚ್ಚಾಗಿದ್ದರಿಂದ ಪ್ರಥಮ ವರ್ಷದ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿರುವಾಗಲೇ ರಾಕ್ಬ್ಯಾಂಡ್ ಆರಂಭಿಸುವ ಕನಸು ಕಂಡವರು ಜೈದೇವ್.

ಕಾಲೇಜೊಂದರಲ್ಲಿ ನಡೆದ ‘ಬ್ಯಾಟಲ್ ಆಫ್ ಬ್ಯಾಂಡ್ಸ್’ ಫ್ಯೂಷನ್ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡ ಜೈದೇವ್ ತಾವೂ ಒಂದು ತಂಡವನ್ನು ಕಟ್ಟುವ ನಿರ್ಧಾರಕ್ಕೆ ಬಂದರು. ಪೋಷಕರ ಬಳಿ ಕಾಡಿಬೇಡಿ ಹಣ ಸಂಗ್ರಹಿಸಿ ಡ್ರಮ್ಸ್ ಕಿಟ್, ಗಿಟಾರ್ ಹಾಗೂ ಇನ್ನಿತರೆ ಸಂಗೀತ ಪರಿಕರಗಳನ್ನು ಖರೀದಿಸಿ 2013ರಲ್ಲಿ ‘ಅಥರ್ವ’ ರಾಕ್ ಬ್ಯಾಂಡ್ ತಂಡವನ್ನು ಕಟ್ಟಿದರು. ಆಗ ಅವರು ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ.

‘‘ನಾವು ರಾಕ್ಬ್ಯಾಂಡ್ ಆರಂಭಿಸಿದಾಗ ‘ಕೋಲ್ಡ್ ಪ್ಲೇ’ ಇಂಗ್ಲಿಷ್ ಬ್ಯಾಂಡ್ನ ಹಾಡುಗಳನ್ನು ಪ್ರಸ್ತುತಪಡಿಸುತ್ತಿದ್ದೆವು. ಆ ಹಾಡುಗಳನ್ನು ಯಥಾವತ್ ಹಾಗೆಯೇ ಹಾಡುತ್ತಿರಲಿಲ್ಲ. ಬದಲಾಗಿ ನಮ್ಮ ಶೈಲಿಯಲ್ಲಿರುತ್ತಿತ್ತು. ಆರಂಭದಲ್ಲಿ ರಾಕ್ ಸಂಗೀತವನ್ನಷ್ಟೇ ಪ್ರಸ್ತುತಪಡಿಸುತ್ತಿದ್ದ ನಮ್ಮ ತಂಡಕ್ಕೆ ಕೊಳಲು ಕಲಾವಿದ ಗೌತಮ್ ಸೇರಿಕೊಂಡ ನಂತರ ಶಾಸ್ತ್ರೀಯ ಸಂಗೀತದ ಸ್ಪರ್ಶವೂ ಸಿಕ್ಕಿತು.

ಈಗ ಬೇರೆಯವರ ಹಾಡುಗಳನ್ನು ಹಾಡುವುದಿಲ್ಲ, ನಮ್ಮದೇ ಸಂಯೋಜನೆಯ ಫ್ಯೂಷನ್ ಸಂಗೀತವನ್ನು ಪ್ರಸ್ತುತಪಡಿಸುತ್ತೇವೆ. ಇನ್ನು ನಮ್ಮ ತಂಡಕ್ಕೆ ‘ಅಥರ್ವ’ ಎಂದು ಹೆಸರಿಡಲು ಕಾರಣ ನಮ್ಮ ತಂಡದ ಬಹುತೇಕ ಸದಸ್ಯರೆಲ್ಲಾ ಶಾಸ್ತ್ರೀಯವಾಗಿ ಸಂಗೀತ ಕಲಿತವರಲ್ಲ. ಸಂಸ್ಕೃತದ ಹೆಸರನ್ನೇ ಇಡಬೇಕೆಂದು ಹುಡುಕಿದಾಗ ಸಿಕ್ಕ ಪದ ‘ಅಥರ್ವ’. ಅಥರ್ವ ಎಂದರೆ ಆರಂಭ ಎಂಬ ಅರ್ಥವಿದೆ. ಇದು ತಂಡಕ್ಕೂ ಸೂಕ್ತವಾಗಿತ್ತು. ಅದಕ್ಕಾಗಿ ಆ ಹೆಸರನ್ನೇ ಆಯ್ಕೆ ಮಾಡಿದೆವು’ ಎನ್ನುತ್ತಾರೆ ಗಾಯಕ ಜೈದೇವ್.

ಮಧುಪಾನ, ಜಯಹೇ...
ಈ ಕಲಾವಿದರು ಸ್ವಂತ ಸಂಯೋಜನೆಯ ‘ಮಧುಪಾನ’ ಹಾಗೂ ‘ಜಯಹೇ’ ಹಾಡುಗಳನ್ನು ರಚಿಸಿದ್ದಾರೆ. ಜೂನ್ನಲ್ಲಿ ಎಂಜಿನಿಯರಿಂಗ್ ಪರೀಕ್ಷೆ ಇರುವುದರಿಂದ ಪರೀಕ್ಷೆ ಮುಗಿದ ಮೇಲೆ ರೇಕಾರ್ಡಿಂಗ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಥರ್ವ ತಂಡವು ಫೀನಿಕ್ಸ್ ಮಾರ್ಕೆಟ್ಸಿಟಿ, ಚರ್ಚ್ ಸ್ಟ್ರೀಟ್ ಕಾರ್ನಿವಲ್, ಗಣರಾಜ್ಯೋತ್ಸವ, ಪ್ರೇಮಿಗಳ ದಿನ ಹಾಗೂ ಅನೇಕ ರೆಸ್ಟೋರೆಂಟ್ಗಳಲ್ಲಿ ಫ್ಯೂಷನ್ ಸಂಗೀತದ ರಸಧಾರೆ ಹರಿಸಿದೆ.

‘ನಮ್ಮ ತಂಡದಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲಾ ವಿದ್ಯಾರ್ಥಿಗಳು. ಓದಿನ ಜೊತೆಗೆ ಸಂಗೀತ ಅಭ್ಯಾಸಕ್ಕೆ ಸಮಯ ಮೀಸಲಿಡಬೇಕು. ರಜೆ ದಿನಗಳಲ್ಲಿ ನಾಲ್ಕು ಗಂಟೆ ಅಭ್ಯಾಸ ಮಾಡುತ್ತೇವೆ. ಕಾರ್ಯಕ್ರಮಗಳಿದ್ದಾಗ ಎರಡು ದಿನಗಳ ಮುಂಚೆಯೇ ಸಿದ್ಧರಾಗುತ್ತೇವೆ. ರಘು ದೀಕ್ಷಿತ್, ಶುಭಾ ಮುದ್ಗಲ್, ವಾಸು ದೀಕ್ಷಿತ್ ನಮಗೆ ಸ್ಫೂರ್ತಿ.

ಇಂಗ್ಲಿಷ್ ಗೀತೆಗಳಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಸೇರಿಸಿ ನೋಡುತ್ತೇವೆ. ಯಾವ ಟ್ಯೂನ್ ಚೆನ್ನಾಗಿ ಕೇಳಿಸುತ್ತದೆಯೋ ಅದನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಆಗ ಫ್ಯೂಷನ್ ಸಂಗೀತವನ್ನು ಆಲಿಸುವುದಕ್ಕೂ ಚೆನ್ನಾಗಿರುತ್ತದೆ. ಮುಂದಿನ ದಿನಗಳಲ್ಲಿ, ಅಂದರೆ ಎಂಜಿನಿಯರಿಂಗ್ ಕೋರ್ಸ್ ಮುಗಿದ ನಂತರವೂ ನಮ್ಮ ತಂಡ ಕಾರ್ಯಕ್ರಮವನ್ನು ನೀಡುತ್ತದೆ. ಪೋಷಕರ ಪ್ರೋತ್ಸಾಹವೂ ಜೊತೆಗಿದೆ’ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ ಜೈದೇವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.