ಮಾಗಡಿ: ಪ್ರೌಢಶಾಲಾ ಹಂತದಲ್ಲಿಯೇ ಶಾಲಾ ಮಕ್ಕಳಿಗೆ ಜನಪದ ಕಥನ ಗೀತೆ ಗಳನ್ನು ಕಲಿಸಿಕೊಡುವುದು ಸೂಕ್ತ ಎಂದು ತಾ.ಪಂ ಮಾಜಿ ಅಧ್ಯಕ್ಷ ಬಿ.ಟಿ. ವೆಂಕಟೇಶ್ ನುಡಿದರು.

ಬೆಳಗವಾಡಿ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಚಿಗುರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮೂಹ ಮಾಧ್ಯಮಗಳ ದಾಳಿ ಯಿಂದ ಜನಪದ ಮೂಲ ಪರಂಪರೆ ಯನ್ನು ಮುಂದುವರೆ ವಿನಾಶದತ್ತ ಸಾಗಿದೆ.

ಸೋಮನ ಕುಣಿತ, ಡೊಳ್ಳು ಕುಣಿತ, ಕೋಲಾಟ, ವೀರಗಾಸೆ ನೃತ್ಯ, ಪಂಡರಿ ಭಜನೆ, ಸೋಬಾನೆ ಪದಗಳು ಇತರೆ ಕಲಾವಂತಿಕೆಗಳನ್ನು ಆಧುನಿಕ ಕಾಲದ ಯುವಜನತೆ ಸುದ್ದಿ ಮಾಧ್ಯಮಗಳಲ್ಲಿ ಮಾತ್ರ ನೋಡುವಂತಾಗಿದೆ. ಜನರಿಂದ ದೂರ ಸರಿಯುತ್ತಿರುವ ಜನಪದ ಕಲೆಗ ಳನ್ನು ಯುವಜನರ ಸ್ವತ್ತನ್ನಾಗಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕಿದೆ ಎಂದರು.

ಹಾರ್ಮೋನಿಯಂ ಮಾಸ್ಟರ್ ಕೃಷ್ಣಪ್ಪ, ಕಲಾವಿದರಾದ ಹೊಂಬಯ್ಯ, ಕರಿ ಯಪ್ಪ, ನಾಗೇಶ್, ಗಿರಿತಿಮ್ಮಯ್ಯ, ಬೆಟ್ಟ ಸ್ವಾಮಿ, ಪುಟ್ಟಸ್ವಾಮಿ ಮಾತ ನಾಡಿದರು.ಪ್ರೌಢಶಾಲಾ ಮಕ್ಕಳಿಗೆ ಬಿ.ಟಿ.ವೆಂಕ ಟೇಶ್ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು. ಮುಖ್ಯ ಶಿಕ್ಷಕ ವೈ.ಬಿ. ಪ್ರಸನ್ನ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕಿ ಗಿರಿಜಮ್ಮ, ಬಿ.ಎಂ.ನಾಗ ರಾಜು, ಕಲ್ಲು ದೇವನಹಳ್ಳಿ ವೆಂಕಟಪ್ಪ, ರಾಜು, ಹನುಮಂತ ರಾಯಪ್ಪ ಇತರರು ಕಾರ್ಯ ಕ್ರಮದಲಲ್ಲಿ ಹಾಜರಿದ್ದರು.

ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.