ಮೈಸೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೆ ದಿನೇ ಉಲ್ಬಣಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪಂಚಾಯತ್ ಜನರ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ‘ಜಲಸೇವಾ ನಿಯಂತ್ರಣ ಕೊಠಡಿ’ಯನ್ನು ನಾಲ್ಕು ದಿನಗಳ ಹಿಂದಷ್ಟೆ ತೆರೆದಿದೆ.

ಜಲಸೇವಾ ನಿಯಂತ್ರಣ ಕೊಠಡಿಗೆ ಜಿಲ್ಲಾಮಟ್ಟದಲ್ಲಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಅವರನ್ನು ನೋಡೆಲ್ ಅಧಿಕಾರಿಯನ್ನಾಗಿ ಹಾಗೂ ಸಹಾಯಕ ಕಾರ್ಯದರ್ಶಿ ಅವರನ್ನು ಸಹಾಯಕ ನೋಡೆಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಜಲಸೇವಾ ನಿಯಂತ್ರಣ ಕೊಠಡಿಗೆ ದೂರು ಬಂದ ಕೂಡಲೇ ಸಂಬಂಧಪಟ್ಟ ತಾಲ್ಲೂಕು ನಿಯಂತ್ರಣ ಕೊಠಡಿ ಇಲ್ಲವೇ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿ, ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದಲ್ಲಿ ಟ್ಯಾಂಕರ್ಗಳ ಮೂಲಕ ನೀರನ್ನು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

21 ಗ್ರಾಮಗಳಲ್ಲಿ ಹಾಹಾಕಾರ: ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 2,009 ಹಳ್ಳಿಗಳು ಬರಲಿದ್ದು, ಈ ಪೈಕಿ 21 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿವೆ. ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ಮತ್ತು ನಂಜನಗೂಡು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಸಿ ಮುಟ್ಟಿದೆ. ಈ ಸಂಬಂಧ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಕುಡಿಯುವ ನೀರಿನ ಸಮಸ್ಯೆ ತುರ್ತು ಬಗೆಹರಿಸುವಂತೆ ಹೋರಾಟ ಮಾಡಿ ಜಿಲ್ಲಾಡಳಿತದ ಗಮನ ಸೆಳೆದಿವೆ.

ಟ್ಯಾಂಕರ್ನಲ್ಲಿ ನೀರಿನ ಪೂರೈಕೆ: ಜಯಪುರ ಹೋಬಳಿಯ ಉದ್ಬೂರು, ಜಯಪುರ, ಕೆಲ್ಲಹಳ್ಳಿ, ಡಿ. ಸಾಲುಹುಂಡಿ, ದೇವಗಳ್ಳಿ, ರಾಯನಹುಂಡಿ, ಮರಟಿಕ್ಯಾತನಹಳ್ಳಿ ಸೇರಿದಂತೆ ಒಟ್ಟು 19 ಗ್ರಾಮಗಳು ಹಾಗೂ ನಂಜನಗೂಡು ತಾಲ್ಲೂಕಿನ ಕಾಮಹಳ್ಳಿ ಮತ್ತು ಸಿದ್ದೇಗೌಡನಹುಂಡಿಯಲ್ಲಿ ತೀವ್ರ ಸಮಸ್ಯೆ ಇದೆ. ಈ ಗ್ರಾಮಗಳನ್ನು ಜಿಲ್ಲಾ ಪಂಚಾಯತ್ ಪಟ್ಟಿ ಮಾಡಿ ಕಳೆದ ಫೆಬ್ರುವರಿ ತಿಂಗಳಿಂದಲೇ ಈ ಗ್ರಾಮಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಟ್ಯಾಂಕರ್ಗಳಲ್ಲಿ ನೀರನ್ನು ಪೂರೈಕೆ ಮಾಡುತ್ತಾ ಬಂದಿದೆ.

ಜಲಕ್ಷಾಮ ಎದುರಿಸುತ್ತಿರುವ 21 ಗ್ರಾಮಗಳಿಗೆ ಒಟ್ಟು 146 ಬಾರಿ ಟ್ಯಾಂಕರ್ಗಳಲ್ಲಿ ನೀರನ್ನು ಪೂರೈಕೆ ಮಾಡಲಾಗಿದೆ. ಈ ಗ್ರಾಮಗಳಲ್ಲಿ ಒಟ್ಟು 161 ಬೋರ್ವೆಲ್ಗಳು ಇದ್ದು, ಆ ಪೈಕಿ 44 ಬೋರ್ವೆಲ್ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ 117 ಬೋರ್ವೆಲ್ಗಳು ನಿಷ್ಕ್ರಿಯಗೊಂಡಿವೆ.
ತಾಲ್ಲೂಕುಮಟ್ಟದಲ್ಲಿ ಕ್ಷಿಪ್ರ ಕಾರ್ಯಪಡೆ: ಜಿಲ್ಲಾಮಟ್ಟದಲ್ಲಿ ಹೊರತುಪಡಿಸಿ ತಾಲ್ಲೂಕುಮಟ್ಟದಲ್ಲಿ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ.

ಕಾರ್ಯನಿರ್ವಾಹಕ ಅಧಿಕಾರಿ (ಇಒ) ಅಧ್ಯಕ್ಷತೆಯಲ್ಲಿ ತಹಶೀಲ್ದಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಪಂಚಾಯತ್ ರಾಜ್ ತಾಲ್ಲೂಕು ಪಂಚಾಯತ್ ಉಪ ವಿಭಾಗ ಮತ್ತು ‘ಸೆಸ್ಕ್’ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಳಗೊಂಡಂತೆ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ.

ತಾಲ್ಲೂಕುಮಟ್ಟದಲ್ಲಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಿದ 24 ಗಂಟೆಗಳ ಒಳಗೆ ಸಮಸ್ಯೆಯನ್ನು ಬಗೆಹರಿಸಲು ಕ್ಷಿಪ್ರ ಕಾರ್ಯಪಡೆ ಕ್ರಮ ವಹಿಸುತ್ತಿದೆ.

30 ಗ್ರಾಮಗಳಿಗೆ ನೀರು
ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಜಿಲ್ಲೆಯ 30 ಗ್ರಾಮಗಳಿಗೆ ಕಬಿನಿಯಿಂದ ನೀರು ಸರಬರಾಜು ಮಾಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₨ 26 ಕೋಟಿ ಬಿಡುಗಡೆ ಮಾಡಿ ಈಚೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮೈಸೂರು ತಾಲ್ಲೂಕಿನ 27 ಗ್ರಾಮಗಳು ಹಾಗೂ ನಂಜನಗೂಡು ತಾಲ್ಲೂಕಿನ 3 (ಕೆಂಬಾಲು, ಬಿದರಗೂಡು, ಹಳ್ಳಿಕೆರೆಹುಂಡಿ) ಗ್ರಾಮಗಳು ಸೇರಿ ಒಟ್ಟು 30 ಗ್ರಾಮಗಳು ಇದರ ವ್ಯಾಪ್ತಿಯಡಿ ಬರಲಿವೆ. ಈಗಾಗಲೇ ಟೆಂಡರ್ ಪೂರ್ಣಗೊಂಡು, ಶೇ 60ರಷ್ಟು ಕಾಮಗಾರಿ ಪೂರ್ಣಗೊಂಡು ಬರುವ ನವೆಂಬರ್ ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಮುಂದಿನ ಬೇಸಿಗೆಯಲ್ಲಿ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎನ್ನುತ್ತಾರೆ ಜಿ.ಪಂ. ಅಧಿಕಾರಿಗಳು.

‘ನೀರು ಪೂರೈಕೆಗೆ ಅಗತ್ಯ ಕ್ರಮ’
‘ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಒಟ್ಟು 21 ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಜಲಸೇವಾ ನಿಯಂತ್ರಣ ಕೊಠಡಿ, ತಾಲ್ಲೂಕು ಮಟ್ಟದಲ್ಲಿ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ನಿಯಂತ್ರಣ ಕೊಠಡಿ ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಈಚೆಗೆ ರೂ 26 ಕೋಟಿ ವೆಚ್ಚದಲ್ಲಿ 30 ಹಳ್ಳಿಗಳಿಗೆ ಕಬಿನಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜಯಪುರ ಹೋಬಳಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಹೆಚ್ಚು ಒತ್ತು ನೀಡಲಾಗಿದೆ’
– ಪಿ.ಎ. ಗೋಪಾಲ್, ಸಿಇಒ, ಜಿ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.