ಸೋಮವಾರ, ಜೂನ್ 14, 2021
27 °C

‘ಟಿಡಿಎಸ್‌’ ಗಡುವು ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): 2012–13 ಮತ್ತು 2013–14ನೇ ಸಾಲಿನ ಮೂಲ­ದಲ್ಲೇ ತೆರಿಗೆ ಕಡಿತದ(ಟಿಡಿಎಸ್‌)  ವಿವರ ಸಲ್ಲಿ­ಸಲು ನಿಗದಿ­ಪಡಿ­ಸಿದ್ದ ಗಡು­ವನ್ನು  ತೆರಿಗೆ ಇಲಾಖೆ ಮಾ. 31ರವರೆಗೆ ವಿಸ್ತರಿಸಿದೆ.



ಗಡುವು ವಿಸ್ತರಣೆ ಕೋರಿ ಹಲವು ಕಂಪೆನಿಗಳು ‘ಕೇಂದ್ರ ನೇರ ತೆರಿಗೆ ಮಂಡಳಿ’ಗೆ (ಸಿಬಿಡಿಟಿ) ಮನವಿ ಮಾಡಿ­ದ್ದವು. ಈ ಹಿನ್ನೆಲೆಯಲ್ಲಿ 2012–13ನೇ ಸಾಲಿನ 2, 3 ಮತ್ತು 4ನೇ ತ್ರೈಮಾಸಿಕ ಹಾಗೂ 2013–14ನೇ ಸಾಲಿನ 1, 2 ಮತ್ತು 3ನೇ ತ್ರೈಮಾಸಿಕದ ಟಿಡಿಎಸ್‌ ವಿವರ ಸಲ್ಲಿಕೆ ಗಡುವು ವಿಸ್ತರಿಸಲಾಗಿದೆ ಎಂದು ‘ಸಿಬಿಡಿಟಿ’ ಪ್ರಕಟಣೆ ತಿಳಿಸಿದೆ.



ಖಾಸಗಿ ಅಥವಾ ಸರ್ಕಾರಿ ಕ್ಷೇತ್ರದ ಯಾವುದೇ ಕಂಪೆನಿ ನಿಗದಿತ ಸಮಯ­ದೊಳಗೆ ‘ಟಿಡಿಎಸ್‌’ ವಿವರ ಸಲ್ಲಿಸ­ದಿದ್ದರೆ ಕನಿಷ್ಠ ₨200ರಿಂದ ಗರಿಷ್ಠ ₨1ಲಕ್ಷದವ­ರೆಗೆ ದಂಡ ವಿಧಿಸುವುದಾಗಿ ‘ಸಿಬಿಡಿಟಿ’ ಎಚ್ಚರಿಕೆ ನೀಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.