ಭಾನುವಾರ, ಜನವರಿ 26, 2020
22 °C

‘ತಾಂತ್ರಿಕತೆ ಸಕಾಲಕ್ಕೆ ರೈತರಿಗೆ ತಲುಪಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ‘ಒಣ ಬೇಸಾಯದ ಉತ್ತಮ ತಾಂತ್ರಿಕತೆಯನ್ನು ಸರಿಯಾದ ಸಮಯಕ್ಕೆ ರೈತರಿಗೆ ತಲುಪಿಸಲು ಕೃಷಿ ವಿಜ್ಞಾನಿಗಳು ಶ್ರಮವಹಿಸಿದರೆ, ಹವಾಮಾನ ವೈಪರಿತ್ಯದಿಂದ ಆಗುವ ಸಂಕಷ್ಟಗಳಿಂದ ರೈತರನ್ನು ಪಾರು ಮಾಡಬಹುದು’ ಎಂದು ಹೈದರಾ ಬಾದ್‌ನ ಒಣ ಬೇಸಾಯ ಸಂಶೋ ಧನಾ ಕೇಂದ್ರದ ಯೋಜನಾ ಸಂಯೋ ಜಕ ಡಾ. ಶ್ರೀನಿವಾಸರಾವ್ ಹೇಳಿದರು.ಧಾರವಾಡದ ಕೃಷಿ ವಿಶ್ವ ವಿದ್ಯಾಲಯ, ಹೈದರಾಬಾದ್‌ನ ಕೇಂದ್ರೀಯ ಒಣ ಬೇಸಾಯ ಸಂಶೋಧನಾ ಸಂಸ್ಥೆಯ ಸಹಯೋಗ ದಲ್ಲಿ ಇಲ್ಲಿಯ ಪ್ರಾದೇಶಿಕ ಕೃಷಿ ಸಂಶೋ ಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ‘ಒಣ ಬೇಸಾಯ ಯೋಜನೆಯ ವಾರ್ಷಿಕ ಪರಾಮರ್ಶೆ ಕಾರ್ಯಾ ಗಾರ’ದ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದರು.‘ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹೆಚ್ಚು ಅನುಕೂಲಕರವಾಗುವ ಕಡಿಮೆ ವೆಚ್ಚದ ತಾಂತ್ರಿಕತೆಗಳನ್ನು ಪರಿಚಯಿಸಬೇಕು’ ಎಂದು ಸಲಹೆ ನೀಡಿದರು.‘ಹವಾಮಾನ ಸಂಕಷ್ಟ ನಿವಾರಣಾ ಗ್ರಾಮ ಸಮಿತಿ, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಂದ ಬಾಡಿಗೆ ಆಧರಿತ ಉಪಕರಣ ಕೇಂದ್ರ, ಮೇವು ಬ್ಯಾಂಕ್‌ ಬೆಳೆ ಯೋಜನೆಗಳನ್ನು ಕಾರ್ಯಗತ ಗೊಳಿಸಬೇಕು’ ಎಂದರು.ಹೈದರಾಬಾದ್‌ನ ವಿಜ್ಞಾನಿ ಡಾ. ರವೀಂದ್ರಾಚಾರಿ, ಪಂಜಾಬ್‌ನ ಡಾ.ಎಸ್‌.ಸಿ. ಶರ್ಮಾ ಮಾತನಾಡಿ ದರು.

ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಕೃಷಿ ಕಾಲೇಜಿನ  ಪ್ರಭಾರಿ ಡೀನ್ ಡಾ. ಎಸ್‌.ಬಿ. ದೇವರನಾವದಗಿ, ‘ರಾಜ್ಯ ಸರ್ಕಾರ ಜಾರಿಗೊಳಿಸಲು ಬಯಸಿರುವ ಒಣ ಬೇಸಾಯ ಯೋಜನೆಗಳ ರೂಪರೇಷಗಳನ್ನು ರೂಪಿಸಲು ಈ ಕಾರ್ಯಾಗಾರ ನೆರವಾಗಿದೆ’ ಎಂದರು.ಡಾ.ಎಂ.ಎಸ್. ಶಿರಹಟ್ಟಿ ಸ್ವಾಗತಿಸಿದರು. ಡಾ. ಸುರೇಶ ಅಳ ಗುಂಡಗಿ  ನಿರೂಪಿಸಿದರು. ಡಾ.ವಿ. ಎಸ್. ಸುರಕೋಡ ವಂದಿಸಿದರು.

ಪ್ರತಿಕ್ರಿಯಿಸಿ (+)