ಶನಿವಾರ, ಫೆಬ್ರವರಿ 27, 2021
31 °C
ಎಸ್‌ಜೆಎಂ ಮಹಿಳಾ ಕಾಲೇಜಿನ ಕಾರ್ಯಕ್ರಮದಲ್ಲಿ ಮುರುಘಾ ಶರಣರು

‘ತ್ರಿಶಕ್ತಿ’ಗಳಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತ್ರಿಶಕ್ತಿ’ಗಳಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿ

ಚಿತ್ರದುರ್ಗ: ‘ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ವ್ಯಕ್ತಿತ್ವದ ಭಾಗವಾದರೆ, ಮನುಷ್ಯನ ಬೌದ್ಧಿಕ ಸಾಮರ್ಥ್ಯ ಹೆಚ್ಚುತ್ತದೆ. ಇದು ಮನುಷ್ಯನ ಬೆಳವಣಿಗೆಯ ಒಂದು ಭಾಗವಾಗುತ್ತದೆ’ ಎಂದು ಮುರುಘಾಮಠದ ಶಿವಮೂರ್ತಿ ಶರಣರು ಅಭಿಪ್ರಾಯಪಟ್ಟರು.ನಗರದ ಎಸ್.ಜೆ.ಎಂ. ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ 2016-–17 ನೇ ಸಾಲಿನ ಕ್ರೀಡಾ, ಸಾಂಸ್ಕೖತಿಕ, ಯೂತ್್ ರೆಡ್್ ಕ್ರಾಸ್್ ಹಾಗೂ ಎನ್.ಎಸ್.ಎಸ್. ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಬೌದ್ಧಿಕ ಸಾಮರ್ಥ್ಯ ಉತ್ತಮ ಕಾರ್ಯಗಳಿಗೆ ಬಳಕೆಯಾಗಬೇಕು. ಅಂಥ ಬುದ್ಧಿ ಉಪಯೋಗಿಸಿಕೊಂಡು ಒಬ್ಬ ಮನುಷ್ಯ ಏಕಕಾಲದಲ್ಲಿ ನಾಲ್ಕೈದು ಕೆಲಸ ಮಾಡುವಷ್ಟು ಸಮರ್ಥನಾಗಿರುತ್ತಾನೆ ಸಾಮರ್ಥ್ಯ ವೃದ್ಧಿಯಾದರೆ, ಅವಕಾಶಗಳು ಮನೆಬಾಗಿಲಿಗೇ ಅರಸಿ ಬರುತ್ತವೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.‘ಡಿ.ಟಿ.ಪಿ. ಅನಿಮೇಷನ್, ಗ್ರಾಫಿಕ್ ಡಿಸೈನ್‌ಂತಹ ಕೌಶಲ್ಯಯುತ ವೃತ್ತಿಗಳನ್ನು ಕರಗತ ಮಾಡಿಕೊಂಡರೆ, ಕಲಾ ಪದವೀಧರರಿಗೂ  ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ. ಹಾಗೆಯೇ ಆಧುನಿಕ ತಂತ್ರಜ್ಞಾನ ಅರಿತವರು, ಅದನ್ನು ಉತ್ತಮ ಕೆಲಸಗಳಿಗೆ ಬಳಸಬೇಕೇ ವಿನಾ, ಸಮಾಜ ಘಾತಕ ಕಾರ್ಯಗಳಿಗಲ್ಲ’ ಎಂದರು.ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ‘ಮಹಿಳಾ ಸಬಲೀಕರಣ ಎನ್ನುವುದು ಎಲ್ಲ ರಂಗಗಳಲ್ಲೂ ಕಾಣಿಸುತ್ತಿದೆ  ಶಿಕ್ಷಣ, ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲಿ ಈ ಸಬಲೀಕರಣ ತುಸು ಪ್ರಗತಿಯಾಗಬೇಕಿದೆ’ ಎಂದರು.‘ಶಿಕ್ಷಣಕ್ಕೆ ಮಹತ್ವದ ಬಗ್ಗೆ ಸರಿಯಾದ ಅರಿವಿಲ್ಲದ್ದರಿಂದಲೇ  ಹಳ್ಳಿಗಳಲ್ಲಿ ಮಹಿಳಾ ಶಿಕ್ಷಣದ ಪ್ರಗತಿಗೆ ತೊಡಕಾಗಿದೆ. ಶಿಕ್ಷಣಕ್ಕೆ ಆದ್ಯತೆ ಕೊಡುವ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಪಾಲ್ಗೊಳ್ಳುವಂತೆ ಮಾಡಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದರು.‘ಮಹಿಳಾ ಸ್ವಸಹಾಯ ಸಂಘಗಳಿಗೆ ಬೆಂಬಲ, ಉಚಿತ ಕಡ್ಡಾಯ ಶಿಕ್ಷಣ, ಲೈಂಗಿಕ, ವರದಕ್ಷಿಣೆ ಕಿರುಕುಳಗಳನ್ನು ತಡೆಯಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಸಹಾಯಕರಿಗೂ ನೆರವು ನೀಡುತ್ತಿದೆ. ಇವೆಲ್ಲ ಸದ್ಬಳಕೆಯಾಗಬೇಕಿದೆ’ ಎಂದರು.ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಕೆ.ವಿ. ಪ್ರಭಾಕರ್ ಮಾತನಾಡಿ, ‘ಪಠ್ಯಗಳ ಜತೆ, ಕ್ರೀಡೆಯಲ್ಲೂ ಭಾಗವಹಿಸಬೇಕು. ಇದು ವಿದ್ಯಾರ್ಥಿಗಳ ಓದಿನ ಭಾಗವಾಗಬೇಕು. ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ರಕ್ತದಾನ ಮಾಡಿ, ಇದರಿಂದ ದೇಹಾರೋಗ್ಯವೂ ಸುಧಾರಿಸುತ್ತದೆ’ ಎಂದರು.ಪ್ರಾಚಾರ್ಯ ಎಂ.ಎಸ್. ಕರಿಸಿದ್ದೇಶ್ವರ ಸ್ವಾಮಿ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಗುರಿ ಇಟ್ಟುಕೊಳ್ಳುವುದು ಮತ್ತು ಅದನ್ನು ತಲುಪುವ ಸಲುವಾಗಿ ಶ್ರಮವಹಿಸುವುದು ಬಹಳ ಮುಖ್ಯವಾದ ಕೆಲಸ. ಔಪಚಾರಿಕ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಬೌದ್ಧಿಕ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು’ ಎಂದರು.ಕಾರ್ಯಕ್ರಮದಲ್ಲಿ ನಾಗಶ್ರೀ ಪ್ರಾರ್ಥಿಸಿದರು. ಅಶ್ವಿನಿ ಸ್ವಾಗತಿಸಿದರು. ಜ್ಯೋತಿ ವಂದಿಸಿದರು. ಪೂಜಾ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೖತಿಕ ಕಾರ್ಯಕ್ರಮಗಳು ನಡೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.