ಗುವಾಹಟಿ: ಈ ಭಾಗದಲ್ಲಿ ಸೂರ್ಯ ಬೇಗನೇ ಅಸ್ತಮಿಸುವಂತೆ, ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಉಳಿಸಿಕೊಳ್ಳುವ ಭಾರತ ಆಸೆಯೂ ಬೇಗನೇ ಕಮರುವಂತೆ ಕಾಣುತ್ತಿದೆ. ಪಂದ್ಯ ಗೆಲ್ಲುವುದು ದೂರದ ಮಾತಾಗಿದ್ದು, ಸೋಲು ತಪ್ಪಿಸಿಕೊಳ್ಳಲು ನಾಳೆ ದಿನವಿಡೀ ಆಡಬೇಕಾಗಿದೆ.

ನಾಲ್ಕನೇ ದಿನವಾದ ಮಂಗಳವಾರ ದಕ್ಷಿಣ ಆಫ್ರಿಕಾ 5 ವಿಕೆಟ್ಗೆ 260 ರನ್ ಗಳಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡು, ಆತಿಥೇಯರಿಗೆ 549 ರನ್ಗಳ ಅಸಾಧ್ಯ ಸವಾಲೆಸೆಯಿತು. ದಿನದ ಕೊನೆಗೆ ರಿಷಭ್ ಪಂತ್ ಪಡೆ 15.5 ಓವರುಗಳಲ್ಲಿ 2 ವಿಕೆಟ್ಗೆ 27 ರನ್ ಗಳಿಸಿ ಅಪಾಯಕ್ಕೆ ಸಿಲುಕಿದೆ.

ಎಸಿಎ ಕ್ರೀಡಾಂಗಣದಲ್ಲಿ ಹತ್ತು ಓವರುಗಳಾಗುವಷ್ಟರಲ್ಲಿ ಇಬ್ಬರೂ ಆರಂಭಿಕರು ಪೆವಿಲಿಯನ್ ಸೇರಿಕೊಂಡರು. ಸಾಯಿ ಸುದರ್ಶನ್ (ಔಟಾಗದೇ 2) ಜೊತೆ ನೈಟ್ ವಾಚ್ಮನ್ ಕುಲದೀಪ್ ಯಾದವ್ (ಔಟಾಗದೇ 4) ಅಂತಿಮ ದಿನದಾಟ ಮುಂದುವರಿಸಲಿದ್ದಾರೆ. ಭಾರತ ಇನ್ನೂ 522 ರನ್ ಹಿಂದೆ ಇದೆ.

ಭಾರತದ ಗಾಯಕ್ಕೆ ಉಪ್ಪು ಸವರುವಂತೆ, ದಕ್ಷಿಣ ಆಫ್ರಿಕಾ ಕೋಚ್ ಶುಕ್ರಿ ಕೊನ್ರಾಡ್ ಅವರು ಮಾಧ್ಯಮಗೋಷ್ಠಿಯಲ್ಲಿ ‘ನಾವು ಅವರನ್ನು (ಭಾರತವನ್ನು) ಅಡ್ಡಬೀಳುವಂತೆ ಮಾಡಬಯಸಿದ್ದೇವೆ’ ಎಂದು ಮಾತನಾಡಿದರು. ಇಂಗ್ಲೆಂಡ್ನ ಗ್ರೆಗ್ 1976ರಲ್ಲಿ ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡವನ್ನು ಉದ್ದೇಶಿಸಿ ಈ ರೀತಿಯ ಕುಪ್ರಸಿದ್ಧ ಹೇಳಿಕೆ ನಿಡಿದ್ದರು.

ಈ ಹೇಳಿಕೆಗೆ ತಿರುಗೇಟಿನಂತೆ ಭಾರತವು, ವೆಸ್ಟ್ ಇಂಡೀಸ್ ಅಂದು ಆಡಿದಂತೆ ಡ್ರಾ ಮಾಡುವುದೇ? ಡ್ರಾ ಆದರೂ ತವರಿನಲ್ಲಿ ಮತ್ತೊಂದು ಸರಣಿ ಸೋಲು ತಪ್ಪುವುದಿಲ್ಲ. ಆದರೆ ಮರ್ಯಾದೆ ಉಳಿಸಿಕೊಳ್ಳಬಹುದು.

ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಎರಡನೇ ಇನಿಂಗ್ಸ್ನಲ್ಲೂ ಧೈರ್ಯದಿಂದ ಆಡಲು ಹೋದರು. ಯಾನ್ಸನ್ ಬೌಲಿಂಗ್ನಲ್ಲಿ ರಿಸ್ಕ್ ತೆಗೆದುಕೊಂಡು ‘ಕಟ್’ ಹೊಡೆತಕ್ಕೆ ಹೋದ ಅವರು ವಿಕೆಟ್ ಕೀಪರ್ ಕೈಲ್ ವೆರೆಯನ್ ಅವರಿಗೆ ಕ್ಯಾಚ್ ನೀಡಬೇಕಾಯಿತು. ಆದರೆ ಕೆೆ.ಎಲ್.ರಾಹುಲ್ ನಿರ್ಗಮಿಸಿದ್ದು, ಡ್ರಾ ಮಾಡುವ ಯತ್ನಕ್ಕೆ ದೊಡ್ಡ ಹಿನ್ನಡೆ ಎನಿಸಿತು. ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ ರೀತಿ ಬೇರೂರಿ ಆಡಬಲ್ಲ ಇನ್ನೊಬ್ಬ ಬ್ಯಾಟರ್ ಅವರಾಗಿದ್ದರು. ಹಾರ್ಮರ್ ಅವರ ಅಮೋಘ ಎಸೆತವನ್ನು ಫ್ಲಿಕ್ ಮಾಡುವ ಯತ್ನದಲ್ಲಿ ಅವರು ಎಡವಿದರು. ‘ಟಾಸ್’ ಆಗಿ ಸ್ವಲ್ಪ ನಿಧಾನಗತಿ ಪಡೆದು ತಿರುವು ಪಡೆದು ಬೇಲ್ಸ್ ಉರುಳಿಸಿತು. ದಕ್ಷಿಣ ಆಫ್ರಿಕಾ ಸಂಭ್ರಮಿಸಿತು.

ಇದಕ್ಕೆ ಮೊದಲು ವಿಕೆಟ್ ನಷ್ಟವಿಲ್ಲದೇ 26 ರನ್ (ಜೊತೆಗೆ 314 ರನ್ಗಳ ಮುನ್ನಡೆ) ದಿನದಾಟ ಮುಂದುವರಿಸಿದ ಹರಿಣಗಳ ಪಡೆ ಅವಸರದಲ್ಲಿರಲಿಲ್ಲ. ಅನುಭವಿ ಜಡೇಜ (62ಕ್ಕೆ4) ಮತ್ತು ಸುಂದರ್ (67ಕ್ಕೆ1) ಅವರು ಚೆಂಡಿಗೆ ಸಾಕಷ್ಟು ತಿರುವು ಪಡೆದುಕೊಳ್ಳುವಲ್ಲಿ ಸಫಲರಾದರು. ರಿಯಾನ್ ರಿಕೆಲ್ಟನ್ ಮತ್ತು ಏಡನ್ ಮರ್ಕರಂ (29) ಅವರು 59 ರನ್ ಸೇರಿಸಿದರು. ಜಡೇಜ ಬೌಲಿಂಗ್ನಲ್ಲಿ ರಿಕೆಲ್ಟನ್ ಚೆಂಡನ್ನು ಕವರ್ಸ್ನಲ್ಲಿ ಸಿರಾಜ್ಗೆ ಕ್ಯಾಚಿತ್ತರು. ಜಡೇಜ ನಂತರ ಅತ್ಯುತ್ತಮ ಎಸೆತವೊಂದರಲ್ಲಿ ಮರ್ಕರಂ ಅವರ ರಕ್ಷಣೆಯನ್ನು ಭೇದಿಸಿ ಬೌಲ್ಡ್ ಮಾಡಿದರು.

ಎಂಟು ವಿಕೆಟ್ಗಳು ಇದ್ದು 362 ರನ್ಗಳ ಲೀಡ್ ಪಡೆದ ದಕ್ಷಿಣ ಆಫ್ರಿಕಾ ಅಪಾಯದಲ್ಲೇನೂ ಇರಲಿಲ್ಲ. ಪಂದ್ಯ ಭಾರತದ ಕೈಗೆಟಕದಂತೆ ನೋಡಿಕೊಳ್ಳುವುದು ಅವರ ಮೊದಲ ಗುರಿಯಾಗಿತ್ತು. ಟ್ರಿಸ್ಟನ್ ಸ್ಟಬ್ಸ್ (96) ಮತ್ತು ಟೋನಿ ಡಿ ಝೋರ್ಜಿ (49) ಅವರು ನಾಲ್ಕನೇ ವಿಕೆಟ್ಗೆ 101 ರನ್ ಸೇರಿಸಿದರು. ಸ್ಟಬ್ಸ್ ಮತ್ತು ವಯಾನ್ ಮಲ್ಡರ್ (ಔಟಾಗದೇ 35) ಅವರು ಐದನೇ ವಿಕೆಟ್ಗೆ 82 ರನ್ ಸೇರಿದ್ದರಿಂದ ಲೀಡ್ 500ರ ಗಡಿ ದಾಟಿತು.

ಅಂತಿಮ ಅವಧಿಯಲ್ಲಿ ಸ್ಟಬ್ಸ್ ಅವರು ಟೆಸ್ಟ್ನಲ್ಲಿ ಮೂರನೇ ಶತಕ ಬಾರಿಸಬಹುದೇ ಎಂಬ ಕುತೂಹಲವಷ್ಟೇ ಉಳಿದಿತ್ತು. ಆದರೆ ರನ್ ವೇಗ ಹೆಚ್ಚಿಸುವ ಯತ್ನದಲ್ಲಿ ಅವರು ಜಡೇಜ ಬೌಲಿಂಗ್ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಲ್ಡ್ ಆದರು. ಭಾರತಕ್ಕೆ 18 ಓವರುಗಳನ್ನು ಆಡಬೇಕಿತ್ತು. 16 ಓವರುಗಳಷ್ಟೇ ಸಾಧ್ಯವಾಯಿತು. ಪ್ರವಾಸಿ ತಂಡಕ್ಕೆ ಅಗತ್ಯವಿದ್ದ ಯಶಸ್ಸು ಅಷ್ಟರೊಳಗೆ ಲಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.