ಪಣಜಿ: ಫಿಡೆ ಚೆಸ್ ವಿಶ್ವಕಪ್ ಫೈನಲ್ ಆಡುತ್ತಿರುವ ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ ಮತ್ತು ವೇಯಿ ಯಿ ಅವರು ಎರಡನೇ ಕ್ಲಾಸಿಕಲ್ ಆಟದಲ್ಲೂ ಹೆಚ್ಚಿನ ಸಾಹಸಕ್ಕೆ ಹೋಗಲಿಲ್ಲ. 30 ನಡೆಗಳಲ್ಲಿ ಇಬ್ಬರೂ ಡ್ರಾಕ್ಕೆ ಒಪ್ಪಿಕೊಂಡರು.

ಸ್ಕೋರ್ 1–1 ಸಮಬಲಗೊಂಡಿದ್ದು, ಬುಧವಾರ ನಡೆಯಲಿರುವ ಕಾಲಮಿತಿಯ ರ್ಯಾಪಿಡ್ ಮತ್ತು ಬ್ಲಿಟ್ಝ್ ಸೆಟ್ ಮೂಲಕ ವಿಜೇತರನ್ನು ನಿರ್ಧರಿಸಲಾಗುವುದು. ವಿಜೇತ ಆಟಗಾರ, ಹೊಸದಾಗಿ ಸ್ಥಾಪಿಸಿರುವ ವಿಶ್ವನಾಥನ್ ಆನಂದ್ ಟ್ರೋಫಿಯ ಜೊತೆಗೆ ₹1.07 ಕೋಟಿ ನಗದು ಬಹುಮಾನ ಪಡೆಯಲಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ನಡೆಯೊಂದನ್ನು ಇರಿಸುವ ಮೂಲಕ ಎರಡನೇ ಕ್ಲಾಸಿಕಲ್ ಆಟಕ್ಕೆ ಚಾಲನೆ ನೀಡಿದರು.

ಮೂರನೇ ಸ್ಥಾನದ ಪ್ಲೇ ಆಫ್ ಪಂದ್ಯದಲ್ಲಿ, 23 ವರ್ಷ ವಯಸ್ಸಿನ ಆ್ಯಂಡ್ರಿ ಇಸಿಪೆಂಕೊ ಅವರು ಅವರು ಎರಡನೇ ಕ್ಲಾಸಿಕಲ್ ಆಟದಲ್ಲೂ ಉಜ್ಬೇಕಿಸ್ತಾನದ ನೊದಿರ್ಬೆಕ್ ಯಾಕುಬೊಯೇವ್ ಅವರನ್ನು ಸೋಲಿಸಿದರು. 2–0 ಯಿಂದ ಗೆದ್ದ ಅವರು ಮೂರನೇ ಸ್ಥಾನದ ಜೊತೆಗೆ ಕ್ಯಾಂಡಿಡೇಟ್ಸ್ ಟೂರ್ನಿಗೂ ಅರ್ಹತೆ ಪಡೆದರು.

206 ಆಟಗಾರರ ಕಣದಲ್ಲಿದ್ದ ಈ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಪಡೆದವರು 2026ರ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.