ಬಂಟ್ವಾಳ: ಕರಾವಳಿಯಲ್ಲಿ ನಾಗಾರಾಧನೆ ಮತ್ತು ದೈವಾರಾದನೆ ವೈಶಿಷ್ಟ್ಯತೆ ಜೊತೆಗೆ ದೈವಾರಾಧನೆಯಲ್ಲಿ ಪರಸ್ಪರ ಸೌಹಾರ್ದತೆ ಬಿಂಬಿಸುವ ತುಳುನಾಡಿನ ಪರಂಪರೆ ಅಡಗಿದೆ ಎಂದು ನಿವೃತ್ತ ಪ್ರಾಂಶುಪಾಲ ಅರಳ ಗರುಡ ಮಹಾಕಾಳಿ ದೇವಳದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ ಹೇಳಿದ್ದಾರೆ.

ತಾಲ್ಲೂಕಿನ ಕೊಯಿಲ ಬೊಬ್ಬರ್ಯ ದೈವಸ್ಥಾನದಲ್ಲಿ ಗುರುವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮಾತನಾಡಿದರು. ರಾಜ್ಯ ಬಿ.ಜೆ.ಪಿ. ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಜಿ.ಪಂ.ಸದಸ್ಯೆ ನಳಿನಿ ಬಿ. ಶೆಟ್ಟಿ, ಪಂಜಿಕಲ್ಲು ಬಾಲೇಶ್ವರ ಬ್ರಹ್ಮಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶಕುಮಾರ್ ಜೈನ್ ಪೀರ್ದಬೆಟ್ಟುಗುತ್ತು, ರಾಯಿ ಗ್ರಾ.ಪಂ.ಸದಸ್ಯ ಡೊಂಬಯ ಬಿ.ಅರಳ, ರಾಯಿ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ವೇದಾನಂದ ಕಾರಂತ್,

ಉದ್ಯಮಿಗಳಾದ ಜಿತೇಂದ್ರ ಎಸ್.ಕೊಟ್ಟಾರಿ, ದಿನೇಶ್ ಕುಮಾರ್ ಕಾಯರ್ಮಾರ್, ಬಿ.ಮಂಜುನಾಥ ಪೈ , ಮಧುಕರ ಬಂಗೇರ ರಾಯಿ, ಲೋಕೇಶ ಪೆದಮಲೆ, ವಕೀಲ ಸುರೇಶ್ ಶೆಟ್ಟಿ ಸಿದ್ಧಕಟ್ಟೆ, ಡಾ. ಸುದೀಪ್ ಜೈನ್ ಸಿದ್ಧಕಟ್ಟೆ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ , ಅಧ್ಯಕ್ಷ ಮೋಹನ್ ಶೆಟ್ಟಿ ಪಂಜಿಕಲ್ಲು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಂತ ಪಿಲ್ಕಾಜೆ, ಅನಂತರಾವ್ ಕೊಯಿಲಗುತ್ತು ಮತ್ತಿತರರು ಮತ್ತಿತರರು ಶುಭ ಹಾರೈಸಿದರು.

ವ್ಯವಸ್ಥಾಪಕ ಸಮಿತಿ ಗೌರವಾಧ್ಯಕ್ಷ ವಸಂತ ಕುಮಾರ್ ಅಣ್ಣಳಿಕೆ ಸ್ವಾಗತಿಸಿ, ಕೋಶಾಧಿಕಾರಿ ಹರ್ಷೇಂದ್ರ ಹೆಗ್ಡೆ ಅಂತರ ಪ್ರಾಸ್ತಾವಿಕ ಮಾತನಾಡಿದರು.

ಸಮಿತಿ ಉಪಾಧ್ಯಕ್ಷ ಮೋಹನ್ ಕೈತ್ರೋಡಿ ವಂದಿಸಿದರು. ಸಂತೋಷ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.