ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆ, ಲಕ್ಕುಂಡಿ (ಗದಗ ತಾ.): ಅನ್ನ ನೀಡುವ ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾನೆ ಎನ್ನುವುದಕ್ಕೆ ಪೋಸ್ಕೊ ಕಂಪನಿ ವಿರುದ್ಧ ರೈತರು ಬೀದಿಗಿಳಿದು ಮಾಡಿದ ಹೋರಾಟವೇ ಸಾಕ್ಷಿ ಎಂದು ಲಕ್ಕುಂಡಿ ಗ್ರಾಮದ ಪ್ರಗತಿ ಪರ ರೈತ ಬಿ.ಬಿ.ಮಾಡಲಗೇರಿ ಹೇಳಿದರು.

ಲಕ್ಕುಂಡಿ ಉತ್ಸವದ ಎರಡನೇ ದಿನ ವಾದ ಭಾನುವಾರ ನಡೆದ ವಿಚಾರ ಗೋಷ್ಠಿಯಲ್ಲಿ ಕೃಷಿ ಬದುಕಿನ ತಲ್ಲಣಗಳ ಕುರಿತು ಮಾಡಲಗೇರಿ ಮುಕ್ತ ಮನಸ್ಸಿ ನಿಂದ ತಮ್ಮ ಅಭಿಪ್ರಾಯ ಹಂಚಿ ಕೊಂಡರು. ನಾಡಿನ ಎಲ್ಲ ಭಾಗದಲ್ಲಿ ಒಂದೇ ಪರಿಸ್ಥಿತಿ ಇರುವುದಿಲ್ಲ. ನಾಡಿಗೆ ಕೃಷಿ ನೀತಿ ಎಷ್ಟು ಪರಿಣಾಮಕಾರಿ ಆಗ ಬಲ್ಲದು. ಉತ್ತರ ಕರ್ನಾಟಕ ಬಹುತೇಕ ಬರಗಾಲದ ಆಸರೆಯಲ್ಲೇ ಜೀವನ ಸಾಗಿಸುತ್ತದೆ. ಆದಾಗ್ಯೂ ರೈತ ತಲ್ಲಣದ ನಡುವೆಯೂ ತಾಳ್ಮೆ, ಕಲ್ಲುಗಳ ನಡುವೆ ರತ್ನಗಳನ್ನು ಹುಡುಕುವ ಪ್ರಯತ್ನದಂತೆ ಮುಂದಿನ ಹಂಗಾಮಿನಲ್ಲಾದರೂ ಒಳ್ಳೆಯ ಬೆಳೆ ಬಂದಿತು ಅಂದುಕೊಂಡು ರೈತರು ಅಧೀರರಾಗದೇ ಜೀವನ ನಡೆಸು ತ್ತಿದ್ದಾರೆ ಎಂದು ತಿಳಿಸಿದರು.

ಲಕ್ಕುಂಡಿ ಇತಿಹಾಸ ಹಾಗೂ ಸಂಸ್ಕೃತಿ ಕುರಿತು ಡಾ. ವೈ.ಆರ್. ಬೇಲೇರಿ ಅವರು ವಿಷಯ ಮಂಡಿಸಿ ಲಕ್ಷ ತೀರ್ಥಗಳ ಕುಂಡಗಳ ಊರು ಲಕ್ಕುಂಡಿಯ ಕುರಿತು 111 ಶಾಸನಗಳು ಸಂಗ್ರ ಹಿತವಾಗಿವೆ. ಲಕ್ಕುಂಡಿ ಬಹುಧರ್ಮಗಳ ಯುಗಶಾಲೆ ಯಾಗಿ, ವರ್ತಕರಿಗೂ ಆಶ್ರಯ ನೀಡಿತ್ತು ಎಂದು ಡಾ. ಬೇಲೇರಿ ನುಡಿದರು.

ಗದಗ ಜಿಲ್ಲೆಯ ದೇವಾಲಯಗಳ ಕುರಿತು ಡಾ.ಅಪ್ಪಣ್ಣ ಹಂಜಿ ಮಾತ ನಾಡಿ, ಈ ಮಣ್ಣಿನಲ್ಲಿ ಕಟ್ಟಲಾದ ದೇವಾ ಲಯಗಳ ಹಿಂದೆ ರಾಜಕೀಯ ಇತಿಹಾಸ ಹಾಗೂ ಸಾಹಿತ್ಯಗಳು ಮಹತ್ವದ ಕೊಡುಗೆ ನೀಡಿವೆ. ಒಟ್ಟಾರೆಯಾಗಿ 16 ಪ್ರಕಾರದ ದೇವಾಲಯಗಳ ನ್ನಾಗಿ ವಿಂಗಡಿಸಲಾಗಿದೆ. ಏಕ, ದ್ವಿಮುಖ, ತ್ರಿಕೂಟ ಹಾಗೂ ಪಂಚಕೂಟ ಶೈಲಿಯ ದೇವಾಲಯಗಳ ಸಂಗಮ ಸ್ಥಳ ಗದಗ ಜಿಲ್ಲೆ ಪ್ರಚಲಿತವಾಗಿದ್ದ ಧರ್ಮ ಗಳನ್ನಾ ಧರಿಸಿ ಅವುಗಳ ಸಿದ್ಧಾಂತಗಳು ದೇವಾಲ ಯಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಂಡು ಬರುತ್ತದೆ ಎಂದರು.
ಗ್ರಾಮೀಣ ಬದುಕಿನ ಮುನ್ನೋಟದ ಕುರಿತು ಮಾತನಾಡಿದ ಡಾ.ಎ.ಶ್ರೀಧರ, ಬದಲಾಗುತ್ತಿರುವ ಜೀವನ ಶೈಲಿ ಹಾಗೂ ವಿಚಾರಧಾರೆಗಳ ಹಿನ್ನಲೆಯಲ್ಲಿ ಬರೀ ಕೃಷಿಯಿಂದ ಜೀವನ ಸಾಧ್ಯವೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ ಎಂದರು.

ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹನುಮಾಕ್ಷಿ ಗೋಗಿ ವರ್ಗ-ಧರ್ಮಗಳ ಸಂಘರ್ಷದ ಬಗ್ಗೆ ಐತಿಹಾಸಿಕ ಶಾಸನಗಳ ಉಲ್ಲೇಖಿಸಿ ಜೈನಧರ್ಮ, ಲಕ್ಕುಂಡಿಯ ದೇವಾಲಯ ಕುರಿತು ಸುದೀರ್ಘವಾಗಿ ಮಾತನಾಡಿದರು. ಡಾ.ಎಚ್. ಮಲ್ಲೇಶಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.