ಸೋಮವಾರ, ಜನವರಿ 20, 2020
22 °C
ಬಿಜೆಪಿ ಘೋಷ ವಾಕ್ಯ ಸಿದ್ಧ

‘ಪ್ರಧಾನಿಯಾಗಿ ನರೇಂದ್ರ ಮೋದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವ ಬಿಜೆಪಿ, ‘ಪ್ರಧಾನಿ­ಯಾಗಿ ಮೋದಿ’ ಘೋಷ ವಾಕ್ಯ­ದೊಂದಿಗೆ ಲೋಕ­ಸಭಾ ಚುನಾವಣೆ­ಯನ್ನು ಎದುರಿ­ಸಲು  ನಿರ್ಧರಿಸಿದೆ.ಮಂಗಳವಾರ ನಡೆದ ಬಿಜೆಪಿ ಆಡಳಿತದಲ್ಲಿರುವ ಐದು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮತ್ತು ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಒಂದು ಓಟು, ಒಂದು ನೋಟು: ಚುನಾವಣಾ ಪ್ರಚಾರ­ಕಾರ್ಯಕ್ಕೆ ‘ಒಂದು ಓಟು, ಒಂದು ನೋಟು’ ಎಂಬ ಮತ್ತೊಂದು ಘೋಷ ವಾಕ್ಯ­ವನ್ನೂ ಬಿಜೆಪಿ ಸಿದ್ಧಪಡಿಸಿದೆ. ಪಕ್ಷದ ಬೂತ್‌ ಮಟ್ಟದ ಕಾರ್ಯ­ಕರ್ತರು ಕನಿಷ್ಠ ₨10ರಿಂದ ಗರಿಷ್ಠ ₨1,000 ವರೆಗೆ ದೇಣಿಗೆಯನ್ನು ಶ್ರೀ­ಸಾಮಾನ್ಯ­ರಿಂದ ಸಂಗ್ರಹಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್‌ ಹೇಳಿದರು.ಮತದಾರರನ್ನು ಚುನಾವಣಾ ಪ್ರಚಾರ ವೆಚ್ಚದಲ್ಲಿ ಪಾಲುದಾರನ್ನಾಗಿ ಮಾಡಿಕೊಳ್ಳಲು ಬಿಜೆಪಿ ಈ ಕಾರ್ಯ­ತಂತ್ರ ರೂಪಿಸಿದೆ. ಇಂತಹದ್ದೇ ಕಾರ್ಯ­ತಂತ್ರವನ್ನು ದೆಹಲಿ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು ಮಾಡಿತ್ತು.

ಪ್ರತಿಕ್ರಿಯಿಸಿ (+)