ಶನಿವಾರ, ಜನವರಿ 18, 2020
19 °C

‘ಮಕ್ಕಳ ಶಿಕ್ಷಣ ಹಕ್ಕು ಆಯುಧವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ:  ಮಕ್ಕಳ ಶಿಕ್ಷಣ ಹಕ್ಕು ಶೋಷಣೆಯ ವಿರುದ್ಧ ಆಯುಧ­ವಾಗ­ಬೇಕು ಎಂದು ತಾಲ್ಲೂಕಿನ ಕ್ಷೇತ್ರ

ಸಂಪನ್ಮೂಲ ಕೇಂದ್ರದ ಸಮನ್ವಯಾ­ಧಿಕಾರಿ ವೆಂಕಟೇಶ್ ತಿಳಿಸಿದರು.ತಾಲ್ಲೂಕಿನಲ್ಲಿ ನಡೆಯುವ ಸಮುದಾಯ ಜಾಗೃತಿ ಶಿಬಿರವನ್ನು ಈಚೆಗೆ ನಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು. ಈಗ ಆರ್‌ಟಿಇ ಕಾಯ್ದೆಯ ರೂಪದಲ್ಲಿ  ಜಾರಿಗೆ ಬಂದಿರುವ ಈ ಮಕ್ಕಳ ಹಕ್ಕು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತದೆ ಎಂದರು.ಪ್ರಜ್ಞಾ ಟ್ರಸ್ಟ್‌ನ ಯೋಜನಾ ನಿರ್ದೇಶಕ ಎನ್. ನಾಗರಾಜ್ ಮಾತ­ನಾಡಿ ಕಲಾತಂಡವು ಸಮುದಾಯಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಹೇಳಿದರು.ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲವ್ಯಕ್ತಿ ಮಂಜುನಾಥರೆಡ್ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಜರಿದ್ದರು. ತಂಡದಲ್ಲಿ ಸಂಯೋಜಕಿ- ರೂಪಾ, ಕಲಾವಿದರಾದ ಎಚ್.ಸಿ. ನರಸಿಂಹಮೂರ್ತಿ, ಕೆ. ನರಸಿಂಹ­ಮೂರ್ತಿ, ಕಿರಣ್, ಜಯಲಕ್ಷ್ಮಿ, ನಾರಾ­ಯಣಸ್ವಾಮಿ, ಗಾಯತ್ರಿ ಇದ್ದರು.

ಪ್ರತಿಕ್ರಿಯಿಸಿ (+)