ಶುಕ್ರವಾರ, ಫೆಬ್ರವರಿ 26, 2021
30 °C

‘ರಾಜಕೀಯ ಪ್ರವೇಶ ಇಲ್ಲವೇ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಜಕೀಯ ಪ್ರವೇಶ ಇಲ್ಲವೇ ಇಲ್ಲ’

ಮುಂಬೈ (ಐಎಎನ್‌ಎಸ್‌): ‘ಭೂತ್‌­ನಾಥ್‌ ರಿಟರ್ನ್ಸ್‌’ ಚಿತ್ರದಲ್ಲಿ ಭೂತ­ವೊಂದು ಚುನಾವಣೆಗೆ ಸ್ಪರ್ಧಿಸುವ ಪಾತ್ರದಲ್ಲಿ ಬಾಲಿವುಡ್‌ ತಾರೆ ಅಮಿ­ತಾಭ್‌ ಬಚ್ಚನ್‌ ಕಾಣಿಸಿ­ಕೊಳ್ಳಲಿದ್ದಾರೆ. ಆದರೆ ನಿಜ ಜೀವನದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಚನೆ ‘ಬಿಗ್‌ ಬಿ’ಗೆ ಇಲ್ಲ.‘ನಾನು ರಾಜಕಾರಣಿಯಲ್ಲ, ರಾಜಕೀಯ­ ಪ್ರವೇಶಿಸುವುದೂ ಇಲ್ಲ’ ಎಂದು ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.1984ರಲ್ಲಿ ಅಲಹಾಬಾದ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಮಿತಾಭ್‌ ಅವರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎಚ್‌.ಎನ್‌. ಬಹುಗುಣ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದರು. ಆದರೆ ಸಂಸದನಾಗಿ ಮೂರು ವರ್ಷಗಳ ಅವಧಿ ಪೂರ್ಣಗೊಳಿಸಿದ ನಂತರ ಅವರು ಮತ್ತೆ ರಾಜಕಾರಣದತ್ತ ಮುಖ ಮಾಡಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.