ಸೋಮವಾರ, ಮಾರ್ಚ್ 1, 2021
24 °C
ಚಿಕ್ಕಮಗಳೂರಿನಲ್ಲಿ ಮಠ, ಮಂದಿರಗಳಿಗೆ ಪ್ರವೀಣ್ ತೊಗಾಡಿಯಾ ಭೇಟಿ

‘ರಾಜ್ಯ ಸರ್ಕಾರದಿಂದ ದೊಡ್ಡ ಅಪರಾಧ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಜ್ಯ ಸರ್ಕಾರದಿಂದ ದೊಡ್ಡ ಅಪರಾಧ’

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಕಾರ್ಯಾ ಧ್ಯಕ್ಷ ಪ್ರವೀಣ್‌ ತೊಗಾಡಿಯಾ ಅವರ ವಿರುದ್ಧ ಅಪಾಯಕಾರಿ ಭಾಷಣ, ಪ್ರಚೋದನಾಕಾರಿ ಭಾಷಣದ ಸುಳ್ಳು ಆರೋಪ ಹೊರಿಸುತ್ತಿರುವ ರಾಜ್ಯ ಸರ್ಕಾರ ದೊಡ್ಡ ಅಪರಾಧ ಎಸಗಿದೆ ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಂಘಟನಾ ಕಾರ್ಯದರ್ಶಿ ಗೋಪಾಲ್‌ ಆರೋಪಿಸಿದರು.ನಗರದಲ್ಲಿ ಗುರುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದಾ ಹಿಂದೂಗಳಿಗೆ ನಿರ್ಬಂಧ ಹೇರುತ್ತಿದೆ. ಕಳೆದ ವರ್ಷ ಪ್ರವೀಣ್ ತೊಗಾಡಿಯಾ ಅವರು ರಾಜ್ಯದ 8 ಕಡೆಗಳಲ್ಲಿ ಭಾಷಣ ಮಾಡಿದ್ದಾರೆ. ಅಲ್ಲಿ ಎಲ್ಲಿಯೂ ಅವರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಆದರೂ ಸಹ ಅವರ ವಿರುದ್ಧ ಉದ್ದೇಶಪೂರ್ವಕ ಸುಳ್ಳು ಆಪಾದನೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.‘ತೊಗಾಡಿಯಾ ಅವರಿಗೆ ದೇಶದ ಉದ್ದಗಲಕ್ಕೂ ಪ್ರಯಾಣಿಸಲು ಅವಕಾಶ ವಿದ್ದರೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲು ಸಹ ಅವಕಾಶ ನೀಡಲಿಲ್ಲ. ರಾಜ್ಯದ ಅಡ್ವೋಕೇಟ್ ಜನರಲ್ ಸರ್ಕಾರದ ಒತ್ತಡದಿಂದ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡು ತ್ತಿದ್ದಾರೆ. ಇದನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ’ ಎಂದರು.‘ತೊಗಾಡಿಯಾ ಅವರು ಪ್ರಚೋ ದನಕಾರಿ ಭಾಷಣ ಮಾಡುವುದಿಲ್ಲ ವೆನ್ನುವುದು ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ತಿಳಿದಿದೆ. ಆದರೆ, ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಅವರು ನಿರ್ಬಂಧ ಹೇರುತ್ತಿದ್ದಾರೆ’ ಎಂದು ಆರೋಪಿಸಿದರು.ನಾವು ದೇಶದ ಹಿತರಕ್ಷಣೆ ಬಗ್ಗೆ ಮಾತನಾಡಿದರೆ ತಪ್ಪೇನು? ನೂರು ಕೋಟಿ ಹಿಂದೂಗಳಿರುವ ದೇಶದಲ್ಲಿ ಅವರ ಭಾವನೆಗಳ ಪ್ರಕಾರ ಗೋಹತ್ಯೆ ಆಗಬಾರದು. ಆದರೆ, ರಾಜ್ಯದ ಮುಖ್ಯಮಂತ್ರಿಗಳೇ ಸ್ವತಃ ಗೋಮಾಂಸ ಸೇವಿಸುವುದಾಗಿ ಹೇಳಿಕೆ ನೀಡುತ್ತಿರು ವುದರಲ್ಲಿ ಹಿಂದೂಗಳ ವಿಚಾರದಲ್ಲಿ ಅವರಿಗಿರುವ ಧೋರಣೆ ಎಂಥದ್ದೆನ್ನು ವುದು ಬಹಿರಂಗವಾಗಿದೆ ಎಂದರು.‘ದೇಶದಿಂದ ಗೋಮಾಂಸ ರಫ್ತಾಗುವುದು ನಿಲ್ಲಬೇಕು. ನಮ್ಮ ರಾಷ್ಟ್ರ ಮಾಂಸ ಮಾರಾಟ ಮಾಡುವ ದೇಶ ಆಗಬಾರದು. ಅದರ ಬದಲು ಸಾಫ್ಟ್‌ ವೇರ್ ಜ್ಞಾನ ಮಾರುವ ದೇಶವಾಗ ಬೇಕು’ ಎಂದು ಆಶಯ ವ್ಯಕ್ತಪಡಿಸಿದರು.ಸ್ವಾಮೀಜಿಯಿಂದ ಆಶೀರ್ವಾದ

ಚಿಕ್ಕಮಗಳೂರು: ‘ಶ್ರೀ ಶಂಕರಾಚಾ ರ್ಯರ ದರ್ಶನ ಪಡೆಯಲು ಶೃಂಗೇರಿಗೆ ಭೇಟಿ ನೀಡಿದ್ದು, ಶಾರದಾ ಪೀಠದ ಭಾರತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದೇನೆ’  ಪ್ರವೀಣ್ ತೊಗಾಡಿಯಾ ತಿಳಿಸಿದರು.ನಗರದ ಆರ್‌ಎಸ್‌ಎಸ್ ಕಚೇರಿ ಸಮರ್ಪಣಾದಲ್ಲಿ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರ ಜತೆಗೆ ಸಮಾಲೋಚನೆ ನಡೆಸುವುದಕ್ಕೂ ಮೊದಲು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.‘ಶಾರದಾ ಪೀಠದ ಜತೆಗೆ ಆದಿಚುಂಚನಗಿರಿ ಶಾಖಾ ಮಠಕ್ಕೆ ಹೋಗಿ, ಗುಣನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ಚಿಕ್ಕಮಗಳೂರಿಗೆ ಬರುವ ಮಾರ್ಗ ಮಧ್ಯೆ ಹರಿಹರಪುರದ ಆದಿಶಂಕರಾಚಾರ್ಯರ ಮಠಕ್ಕೂ ಭೇಟಿ ನೀಡಿದೆ’ ಎಂದು ತಿಳಿಸಿದರು.

ಶೃಂಗೇರಿ ಶ್ರೀಗಳ ಭೇಟಿ ಸಂದರ್ಭ ದಲ್ಲಿ ಶ್ರೀಗಳು ಧರ್ಮಕ್ಕೆ ವಿಜಯವಾಗ ಲೆಂದು ಹರಸಿದರು ಎಂದು ತಿಳಿಸಿದರು.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕುರಿತು ಕೇಳಿದ ಪ್ರಶ್ನೆಗೆ, ಈ ಕುರಿತು ಈ ಹಿಂದೆಯೇ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದೇನೆ ಎಂದಷ್ಟೇ ಹೇಳಿದರು.ಸಂಜೆ ನಗರ ಪ್ರವೇಶಿಸಿದ ತೊಗಾಡಿಯ ಅವರು, ನಗರದ ಗವನಹಳ್ಳಿಯ ಕೇಶವ ರಾವ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಗೋಪಾಲ್‌ ಮಾತನಾಡಿ, ಶೃಂಗೇರಿ ಭಾರತಿ ತೀರ್ಥ ಸ್ವಾಮೀಜಿ ಗೋರಕ್ಷಣೆ ಕುರಿತು ತೊಗಾಡಿಯಾ ಅವರಲ್ಲಿ ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಕಾನೂ ನು ರೂಪಿಸುವ ಸಂಬಂಧ  ನರೇಂದ್ರ ಮೋದಿ ಅವರೊಂದಿಗೆ ಮಾತನಾಡು ವುದಾಗಿ ತಿಳಿಸಿದ್ದಾರೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.