ಗುರುವಾರ , ಜನವರಿ 23, 2020
20 °C

‘ಲಿಟ್ಲ್‌ ಇಂಡಿಯಾ’ದಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಐಎಎನ್‌ಎಸ್‌): ಭಾರ­ತೀಯರೇ ಹೆಚ್ಚಾಗಿರುವ ಇಲ್ಲಿನ ಲಿಟ್ಲ್‌ ಇಂಡಿಯಾ ಪ್ರದೇಶದಲ್ಲಿ  ಭಾನು­ವಾರ ಸಂಭವಿಸಿದ ಅಪಘಾತ­ದಲ್ಲಿ ಭಾರತೀಯ­ನೊಬ್ಬ ಮೃತಪಟ್ಟ ಘಟನೆ ಖಂಡಿಸಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.40 ವರ್ಷದ ನಂತರ  ಇಷ್ಟು ತೀವ್ರ­ತೆಯ ಘಟನೆ ನಡೆದಿದ್ದು ಎರಡನೇ ಬಾರಿ ಎನ್ನಲಾಗಿದೆ. ಖಾಸಗಿ ಬಸ್‌ ಡಿಕ್ಕಿ ಹೊಡೆದು ಶಕ್ತಿವೇಲ್‌ ಎಂಬ  ವ್ಯಕ್ತಿ ಭಾನುವಾರ ಮೃತಪಟ್ಟಿದ್ದರು.ಶಾಪಿಂಗ್‌ ಮಳಿಗೆ ಇರುವ ಟೆಕ್ಕಾ ಕೇಂದ್ರದ ಬಳಿ ಅಪಘಾತ ಸಂಭವಿಸಿರು­ವುದು ಪ್ರತಿಭಟನೆ ಹಿಂಸಾ­ಚಾರಕ್ಕೆ ತಿರು­ಗಲು ಕಾರಣವಾಯಿತು. ಘಟನೆ ವೇಳೆ ಪ್ರತಿಭಟನಾಕಾರರು ಆಂಬುಲೆನ್ಸ್‌­ಗೆ ಬೆಂಕಿ ಹಚ್ಚಿದ್ದು, ಪೊಲೀಸ್‌ ವಾಹನ  ಹಾಗೂ ಅನೇಕ ಖಾಸಗಿ ವಾಹನಗಳನ್ನು ಜಖಂ­ಗೊಳಿಸಿ­ದ್ದಾರೆ.27 ಜನ ಬಂಧನ: ಗಲಭೆಯಲ್ಲಿ 10ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳು ಸೇರಿ­ದಂತೆ 18 ಮಂದಿ ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ 27ಕ್ಕೂ  ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)