ಶನಿವಾರ, ಜೂನ್ 19, 2021
23 °C

‘ಸಹಕಾರ ಚಳವಳಿಗೆ ರಾಜ್ಯದ ಕೊಡುಗೆ ಅಪಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ದೇಶದ ಸಹಕಾರಿ ರಂಗದಲ್ಲಿ ಗುಜರಾತ, ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲಿ ಸಹ ಗಣನೀಯ ಸಾಧನೆ ಮಾಡಲಾಗಿದೆ, ಮುಂದಿನ ದಿನಮಾನದಲ್ಲಿ ಈ ರಂಗಕ್ಕೆ ಹೊಸ ರೂಪವನ್ನು ಕೊಡಲು ಆಮೂಲಾಗ್ರ ಬದಲಾವಣೆ ಮಾಡಲಾಗುವುದು ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ ಹೇಳಿದರು.ಅವರು ಪಟ್ಟಣದ ವಿಬಿಸಿ ಪ್ರೌಢಶಾಲೆ ಆವರಣದಲ್ಲಿ ಇತ್ತೀಚೆಗೆ ನಡೆದ ದಿ. ಕರ್ನಾಟಕ ಕೋ ಆಪ್‌ ಬ್ಯಾಂಕಿನ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ­ದರು. ರಾಜ್ಯದಲ್ಲಿ 37 ವಿವಿಧ ಬಗೆಯ ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳು ಗ್ರಾಮೀಣ ಹಾಗೂ ಪಟ್ಟಣದ ಲಕ್ಷಾಂತರ ಜನರ ಬಾಳು ಬೆಳಗಿಸುವಲ್ಲಿ ಅರ್ಥಪೂರ್ಣ ಕೆಲಸ ಮಾಡಿವೆ. ಬರದ ನಾಡಿನಲ್ಲಿಯೂ ಸಹಕಾರಿ ತತ್ವ ಟಿಸಿಲೊಡೆದು ಹೆಮ್ಮರವಾಗಿ ಬೆಳೆದಿರುವದು ಹೆಮ್ಮೆಯ ಸಂಗತಿ ಎಂದರು.ರಾಜ್ಯದಲ್ಲಿ 28 ಮಹಿಳಾ ಸಹಕಾರಿ ಬ್ಯಾಂಕುಗಳು ಸೇರಿದಂತೆ ಒಟ್ಟು 269 ಸಹಕಾರ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿವೆ. ಇವು ನಿರುದ್ಯೋಗಿಗಳಿಗೆ ಸಾಲ ನೀಡುವ ಜೊತೆಗೆ ಅವರ ಪ್ರಗತಿ, ಸಾಲ ಮರುಪಾವತಿ ಬಗ್ಗೆ ಗಮನ ಹರಿಸಬೇಕು. ಗ್ರಾಮೀಣ ಪ್ರದೇಶಕ್ಕೆ ಮಾತ್ರ ಇದ್ದ ಯಶಸ್ವಿನಿ ಯೋಜನೆಯನ್ನು ಪಟ್ಟಣದ 70 ಲಕ್ಷ ಜನತೆಗೂ ವಿಸ್ತರಿ­ಸಲು ಕ್ರಮ ಕೈಕೊಳ್ಳಲಾಗಿದೆ. ಪ.ಜಾತಿ, ಪ.ಪಂಗಡದ ಜನರಿಗೆ ಸರ್ಕಾರವೇ ಕಂತು ಪಾವತಿಸಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದೆ ಎಂದು ವಿವರಿಸಿದರು.ಶಾಸಕ ಸಿ.ಎಸ್. ನಾಡಗೌಡ ಮಾತ­ನಾಡಿ, ಹಿರಿಯರು ದೂರದೃಷ್ಟಿ­ಯಿಂದ ಸ್ಥಾಪಿಸಿದ ಬ್ಯಾಂಕಿನಲ್ಲಿ ವೈಮನಸ್ಸಿನ ರಾಜಕೀಯ ಮಾಡದೇ ಈ ಭಾಗದ ಅಭಿವೃದ್ಧಿಗೆ ಎಲ್ಲ ನಿರ್ದೇಶಕರೂ ದುಡಿದಿದ್ದಾರೆ. ಅವರ ಸಹಕಾರ, ಸಹಭಾಗಿತ್ವ ಮತ್ತು ಸದುದ್ದೇಶದ ಫಲವಾಗಿ ಬ್ಯಾಂಕ್‌ ಅಭಿವೃದ್ಧಿಯಲ್ಲಿ ಮುನ್ನಡೆಯಲು ಸಾಧ್ಯವಾಗಿದೆ ಎಂದು ಪ್ರಶಂಸಿಸಿದರು.ಸಂಸದ ರಮೇಶ ಜಿಗಜಿಣಗಿ, ಸಹಕಾರಿ ಸಂಘಗಳ ಜಂಟಿ ನಿಬಂಧಕ ಶಿವಾ ಕುಲಕರ್ಣಿ, ಉಪನಿಬಂಧಕ ಎನ್.ಎಸ್.ಹಣಗಿ, ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ಕೆ.ಕೆ. ಸುರೇಂದ್ರನಾಥ, ಉಪಾಧ್ಯಕ್ಷ ಪ್ರಭುರಾಜ ಕಲಬುರ್ಗಿ, ನಿರ್ದೇಶಕರಾದ ಚನ್ನಪ್ಪ ಕಂಠಿ, ಬಸನಗೌಡ ಪಾಟೀಲ, ಶಾಂತಪ್ಪ ಕಮತ, ಹನುಮಂತರಾಯ ಬಿರಾದಾರ, ಜಿ.ಎಸ್. ಓಸ್ವಾಲ್, ಬಸವರಾಜ  ಸುಕಾಲಿ, ವೀರಪ್ಪ ರೇವಡಿ, ಪ್ರಭು ಹೊಕ್ರಾಣಿ, ಚಿದಾ­ನಂದ ಸೀತಿಮನಿ,  ಶಕುಂತಲಾ ಹಿರೇಮಠ, ಸಹಾಯಕ ವ್ಯವಸ್ಥಾಪಕ ಆರ್‌.ಜಿ.ಮೋಟಗಿ ಉಪಸ್ಥಿ­ತ­ರಿದ್ದರು. ಎಚ್‌.ಕೆ. ನಾಗನೂರ ಪ್ರಾರ್ಥಿ­ಸಿ­ದರು. ಬ್ಯಾಂಕ್‌ ಅಧ್ಯಕ್ಷ ಸಂಗನಗೌಡ ಬಿರಾದಾರ ಸ್ವಾಗತಿಸಿದರು. ಐ.ಬಿ. ಹಿರೇಮಠ, ಸುಮಂಗಲಾ ಕೋಳೂರ, ಸವಿತಾ ಮುಪ್ಪಯ್ಯ­ನಮಠ ನಿರೂಪಿಸಿ­ದರು. ಪ್ರಧಾನ ವ್ಯವಸ್ಥಾ­ಪಕ ಎಸ್‌.ವಿ. ಮುಪ್ಪಯ್ಯನಮಠ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.