ಸೋಮವಾರ, ಜನವರಿ 20, 2020
29 °C

‘ಸ್ನೇಹ ಸಂಬಂಧದ ಪರಂಪರೆ ಕರಗುತ್ತಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗುರು ಮತ್ತು ಶಿಷ್ಯರ ನಡುವೆ ಇರಬೇಕಾದ ಸ್ನೇಹ ಸಂಬಂಧದ ಪರಂಪರೆ ಕರಗುತ್ತಿದೆ’ ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು ಪ್ರೊ.ಬಿ.ಆರ್.ರಾಮಚಂದ್ರೇಗೌಡ ಟ್ರಸ್ಟ್‌ ಸಹಯೋಗದೊಂದಿಗೆ ನಗರ­ದಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.‘ಉತ್ತಮ ಮಾರ್ಗದರ್ಶನ ನೀಡುವ ಶಿಕ್ಷಕರಿದ್ದರೆ ಮಾತ್ರ ಶಿಷ್ಯರ ಭವಿಷ್ಯ ಉದ್ಧಾರವಾಗಲು ಸಾಧ್ಯ. ಇದಕ್ಕೆ ನಾನೇ ಸ್ಪಷ್ಟ ಉದಾಹರಣೆ’ ಎಂದು ಹೇಳಿದರು.

‘ಸರ್ಕಾರಿ ಕಲಾ ಕಾಲೇಜಿನಲ್ಲಿ ಓದು­ತ್ತಿ­ದ್ದಾಗ ಪ್ರೊ.ರಾಮಚಂದ್ರಗೌಡ ಅವರು ನನಗೆ ಶಿಕ್ಷಕರಾಗದಿದ್ದರೆ, ಜೀವನದಲ್ಲಿ ಮುಂದೆ ಬರಲು ಸಾಧ್ಯ­ವಾ­­ಗುತ್ತಿರಲಿಲ್ಲ’ ಎಂದು ನೆನಪಿಸಿಕೊಂಡರು.‘ಗುರಿ, ಆಸಕ್ತಿ ಹಾಗೂ ಅಧ್ಯಯನದ ಜತೆಯಲ್ಲಿ ಗುರುವಿನ ಆರ್ಶೀವಾದವು ಮುಖ್ಯವಾಗುತ್ತದೆ. ಹೊಸ ಪೀಳಿಗೆ­ಯಲ್ಲಿ ಗುರುವಿನೆಡೆಗೆ ಇರಬೇಕಾದ ಭಕ್ತಿ ಭಾವ ಕುಸಿಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.ಕರ್ನಾಟಕ ಮಾಧ್ಯಮ ಅಕಾ­ಡೆಮಿ­ಯ ಅಧ್ಯಕ್ಷ ಎಂ.ಎ.ಪೊನ್ನಪ್ಪ, ‘ಕನ್ನಡ ಹಾಗೂ ಬದುಕು ಕಟ್ಟುವ ಕಾಯಕ­ವನ್ನು ರಾಮಚಂದ್ರೇಗೌಡರಿಂದ ಕಲಿತೆ. ಅವರು ಹೃದಯಶ್ರೀಮಂತಿಕೆಯಿಂದಲೇ ನೂರಾರು ಶಿಷ್ಯಪಡೆಯನ್ನು ಅವರು ಆಕರ್ಷಿಸಿದ್ದರು’ ಎಂದು ನೆನಪಿಸಿಕೊಂಡರು.ರಾಮಕೃಷ್ಣ –ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು.

ಪ್ರತಿಕ್ರಿಯಿಸಿ (+)