ಸೋಮವಾರ, ಜೂನ್ 21, 2021
21 °C
ಚುನಾವಣಾ ಅಕ್ರಮ ತಡೆಗೆ ಕ್ರಮ: ಎಸ್‌ಪಿ ಸುಧೀರ್‌ಕುಮಾರ್‌ ರೆಡ್ಡಿ

‘16 ಚೆಕ್‌ಪೋಸ್ಟ್‌, ಹೆಚ್ಚಿನ ನಿಗಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಗಾಗಿ ಪೊಲೀಸ್‌ ಇಲಾಖೆ ಜಿಲ್ಲೆಯಲ್ಲಿ 16 ಚೆಕ್‌ಪೋಸ್ಟ್‌ಗಳನ್ನು ಗುರುತಿಸಿದ್ದು, ಗಸ್ತು ಚುರುಕುಗೊಳಿಸಲು ನಿರ್ಧರಿಸಿದೆ.



ಆಯ್ದ ಕಡೆ ಈಗಾಗಲೇ ಗಸ್ತು ಚುರುಕುಗೊಳಿಸಲಾಗುತ್ತಿದೆ. ಜಿಲ್ಲೆ­ಯಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ ಆಧರಿಸಿ ಸುಗಮ ಚುನಾವಣೆಗಾಗಿ ಬಂದೊಬಸ್ತ್‌ ನಿಯೋಜಿಸಲು ನಿರ್ಧರಿಸಲಾಗಿದೆ.



ಬುಧವಾರ  ಸುದ್ದಿಗಾರರ ಜೊತೆ ಮಾತನಾಡಿದ ಪೊಲೀಸ್‌ ವರಿಷ್ಠಾಧಿ­ಕಾರಿ ಸುಧೀರ್‌ಕುಮಾರ್‌ ರೆಡ್ಡಿ, ‘ಜಿಲ್ಲೆಯಲ್ಲಿ ಈಗಾಗಲೇ ಎರಡು ಮೀಸಲು ಪಡೆ ಪೊಲೀಸ್ ತುಕಡಿ ಇದೆ. ಇದರ ಜೊತೆಗೆ ಹೆಚ್ಚುವರಿ ಮೀಸಲು ಪಡೆಯನ್ನು ನಿರೀಕ್ಷಿಸಲಾಗಿದೆ’ ಎಂದರು.



ಜಿಲ್ಲಾ ಪೊಲೀಸ್‌ ಪಡೆ, ಕೆಎಸ್‌ಆರ್‌ಪಿ, ಡಿಎಆರ್‌, ಗೃಹರಕ್ಷಕ ದಳದ 350 ಮಂದಿ ಸೇರಿದಂತೆ ಸುಮಾರು 1,600 ಪೊಲೀಸ್‌ ಸಿಬ್ಬಂದಿ ಚುನಾವಣಾ ಸಂದರ್ಭದಲ್ಲಿ ಸೇವೆಗೆ ಲಭ್ಯರಿರುತ್ತಾರೆ ಎಂದು ತಿಳಿಸಿದರು.



ಪಿಸ್ತೂಲ್‌ ಹಾಜರಿಗೆ ಸೂಚನೆ: ಜಿಲ್ಲೆ­ಯಲ್ಲಿ ಲೈಸೆನ್ಸ್‌ ಪಡೆದು ಬಳಸುತ್ತಿರುವ ಪಿಸ್ತೂಲ್‌ಗಳನ್ನು ಸಂಬಂಧಿಸಿದ ಪೊಲೀಸ್‌ ಠಾಣೆಗಳಲ್ಲಿ ಹಾಜರು ಪಡಿ­ಸಬೇಕು ಎಂದು ಈಗಾ­ಗಲೇ ಸೂಚಿ­ಸ­ಲಾಗಿದೆ. ಬಹು­ತೇಕ ಬುಧ­ವಾ­ರದ ಒಳಗೆ ಈ ಪ್ರಕ್ರಿಯೆ ಪೂರ್ಣ­ಗೊಳ್ಳಬಹುದು ಎಂದರು.



900 ಮಂದಿ ಗುರುತು: ಜಿಲ್ಲೆ­ಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಸಮಾಜದಲ್ಲಿ ಅಶಾಂತಿ ಮೂಡಿಸ­ಬಹುದು ಎಂದು ಸುಮಾರು 900 ಮಂದಿಯನ್ನು ಗುರುತಿಸಲಾಗಿದೆ.  ಇವ­ರಿಂದ ಯಾ­ವುದೇ ಅಹಿತಕರ ಚಟುವಟಿಕೆ­ಗ­ಳಲ್ಲಿ ಭಾಗ­ವಹಿ­ಸು­ವುದಿಲ್ಲ ಎಂದು ಮುಚ್ಚಳಿಕೆ ಪತ್ರ, ಖಾತರಿ ಪಡೆಯ­ಲಾಗುತ್ತಿದೆ.  ಚುನಾವಣೆ ಅವಧಿ­ಯಲ್ಲೂ ಈ ಎಲ್ಲರ ಮೇಲೂ ಇಲಾಖೆ ನಿಗಾ ವಹಿಸಲಿದೆ ಎಂದು ಹೇಳಿದರು.



ಮತದಾನ ಮಹತ್ವ– ಜಾಗೃತಿ:  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ಆಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣವನ್ನು ಶೇ 10 ರಿಂದ 15ರಷ್ಟು ಹೆಚ್ಚಿಸುವ ಗುರಿಯೊಂದಿಗೆ ಮತದಾನದ ಮಹತ್ವ ಕುರಿತ ಜಾಗೃತಿ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಗುರುವಾರ ಚಾಲನೆ ನೀಡಲಿದೆ.



ಸ್ವೀಪ್‌ ಹೆಸರಿನಲ್ಲಿ ನಡೆಯುವ  ಜಾಗೃತಿ ಕಾರ್ಯಕ್ರಮಕ್ಕೆ ಮಾ. 13ರಂದು ಮಧ್ಯಾಹ್ನ 1 ಗಂಟೆಗೆ ಬಿ.ವಿ.­ಭೂಮರೆಡ್ಡಿ ಮಹಾ­ವಿದ್ಯಾಲಯ­ದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇ­ಒ ಚಾಲನೆ ನೀಡು­ವರು.



ಮತದಾನದ ಪ್ರಮಾಣ ಹೆಚ್ಚಿ­ಸುವುದು, ಅದ­ರಲ್ಲೂ ಪ್ರಮುಖ­ವಾಗಿ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಕೇಂದ್ರಗಳಲ್ಲಿ ಪ್ರಮಾಣ ಹೆಚ್ಚಿಸುವುದು, ಮಹಿಳೆಯರ ಮತದಾನದ ಪ್ರಮಾಣ ಹೆಚ್ಚಿಸುವುದು, ಮತದಾನದಿಂದ ಹೊರಗುಳಿದ ಸಮು­ದಾಯಗಳಿಗೆ ಮತದಾನದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡುವುದು ಇದರ ಉದ್ದೇಶ ಎಂದು ಹೇಳಿಕೆ ತಿಳಿಸಿದೆ.



ಮಹಿಳೆ, ಯು­ವಕರು, ದುರ್ಬಲ ವರ್ಗ, ಅಂಗ­ವಿಕ­ಲರು, ಅಸಂಘ­ಟಿತ ವಲಯದ ಕಾರ್ಮಿಕರು, ಕೊ­ಳೆ­­ಗೇರಿ ಪ್ರದೇಶ­ದಲ್ಲಿ ಇರುವವರು ಬಗ್ಗೆ ಈ ಕಾರ್ಯ­ಕ್ರಮದಡಿ ಹೆಚ್ಚಿನ ಒತ್ತು ನೀಡ­ಲಾಗುತ್ತದೆ.



ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು, ವಿವಿಧ ಸ್ಪರ್ಧೆ ಹಾಗೂ ಜಾಥಾ ಅಯೋಜಿಸುವುದು; ವಿವಿಧ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು, ಕರಪತ್ರ, ಭಿತ್ತಿಪತ್ರ, ಕರಪತ್ರ ಹಾಕುವುದು ಮತ್ತಿತರ ಕಾರ್ಯಕ್ರಮಗಳನ್ನು ಕೈಗೊಳ್ಳ­ಲಾಗುವುದು ಎಂದು  ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.