ಬುಧವಾರ, ಜೂನ್ 23, 2021
30 °C

₨10 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: ‘ಕಿತ್ತೂರು ವಿಧಾನಸಭೆ ಕ್ಷೇತ್ರವ್ಯಾಪ್ತಿಯಲ್ಲಿ ಬರುವ 21.41ಕಿ.ಮೀ. ಉದ್ದದ ಸಿಂಧನೂರು–ಹೆಮ್ಮಡಗ ರಾಜ್ಯ ಹೆದ್ದಾರಿ ಅಭಿವೃದ್ಧಿ ಯನ್ನು ₨10ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಶಾಸಕ ಡಿ.ಬಿ. ಇನಾಮದಾರ ಪ್ರಕಟಿಸಿದರು.ಇಲ್ಲಿಗೆ ಸಮೀಪದ ಇಟಗಿ ಕ್ರಾಸ್‌ನಲ್ಲಿ ಈಚೆಗೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಪತ್ರಕರ್ತ ರೊಂ­ದಿಗೆ ಮಾತನಾಡಿದ ಅವರು, ‘ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₨ 15ಕೋಟಿ ಅಂದಾಜು ವೆಚ್ಚದ ವಿವಿಧ ಕಾಮಗಾ­ರಿಗಳಿಗೆ ಈಗಾಗಲೇ ಮಂಜೂ ರಾತಿ ಪಡೆಯಲಾಗಿದೆ’ ಎಂದು ತಿಳಿಸಿದರು.‘₨7.5ಕೋಟಿ ವೆಚ್ಚದ ಎಂ. ಕೆ. ಹುಬ್ಬಳ್ಳಿ–ಬೈಲವಾಡ ರಸ್ತೆ, ₨ 2.2ಕೋಟಿಯ ಪಾರಿಶ್ವಾಡ–ಎಂ. ಕೆ. ಹುಬ್ಬಳ್ಳಿ ರಸ್ತೆ, ₨2 ಕೋಟಿಯ ಕಕ್ಕೇರಿ–ದೇವರ ಶೀಗಿಹಳ್ಳಿ ರಸ್ತೆ,  ₨ 80 ಲಕ್ಷ ವೆಚ್ಚದ ಖೋದಾನಪುರ– ಖಾನಾಪುರ ರಸ್ತೆ, ₨1.2 ಕೋಟಿ ವೆಚ್ಚದಲ್ಲಿ ಕಿತ್ತೂರು –ಸಂಗೊಳ್ಳಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.‘ಕಿತ್ತೂರು–ಸಂಗೊಳ್ಳಿ ರಸ್ತೆಗೆ ಪ್ರವಾ ಸೋದ್ಯಮ ಇಲಾಖೆಯಿಂದಲೂ ₨ 1.10 ಕೋಟಿ ಮಂಜೂರಾಗಿದೆ. ಕಿತ್ತೂರಲ್ಲಿ ಲೋಕೋಪಯೋಗಿ ಇಲಾಖೆ ಸಿಬ್ಬಂದಿಗೆ ₨ 80ಲಕ್ಷ ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣಕ್ಕೆ ಮತ್ತು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಡೊಂಬರ ಕೊಪ್ಪ ಪ್ರವಾಸಿ ಮಂದಿರದಲ್ಲಿ ಹೆಚ್ಚುವರಿ ಕೋಣೆ ನಿರ್ಮಿಸಲು ಮಂಜೂರಾತಿ ದೊರಕಿದೆ’ ಎಂದು ಹೇಳಿದರು.‘₨23.90 ಲಕ್ಷ  ವೆಚ್ಚದಲ್ಲಿ ಕೊಂಡವಾಡ ಚೌಕ್‌ದಿಂದ ಬೋವಿ ಮಾರ್ಗವಾಗಿ ಸೋಮವಾರ ಪೇಟೆಗೆ ಕೂಡುವ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ದೇಗುಲಹಳ್ಳಿ ಗ್ರಾಮ ದಲ್ಲಿ ಎಸ್ಟಿ ಕಾಲನಿಗೆ ₨ 7 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ತಿಗಡೊಳ್ಳಿ ಗ್ರಾಮದ ಎಸ್.ಟಿ ಕಾಲೊನಿಯಲ್ಲಿ ₨ 10 ಲಕ್ಷ  ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಸಹ ಕೈಗೆತ್ತಿ ಕೊಳ್ಳಲಾಗಿದೆ’ ಎಂದರು.‘ನಬಾರ್ಡ ಯೋಜನೆಯಲ್ಲಿ ಸಿಂಧ ನೂರ-–ಹೆಮ್ಮಡಗ ರಸ್ತೆ ಮಧ್ಯೆ ಬರುವ ಕಾದ್ರೊಳ್ಳಿ ಬಳಿ ರೂ.1 ಕೋಟಿ ಹಾಗೂ ಕಿತ್ತೂರು–ಕುಲವಳ್ಳಿ ರಸ್ತೆ ಮಧ್ಯೆದಲ್ಲಿ ಯ ₨90 ಲಕ್ಷ ವೆಚ್ಚದ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿ ದ್ದು, ಇವೆಲ್ಲ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ’ ಎಂದು ಹೇಳಿದರು.ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ವಿರೂ ಪಾಕ್ಷ ಸಾಧುನವರ, ವಿಜಯ ಸಾಣಿಕೊಪ್ಪ, ಬೆಳಗಾವಿ ಲೋಕೋಪ ಯೋಗಿ ಇಲಾಖೆ ಅಧೀಕ್ಷಕ ಎಂಜಿನಿ ಯರ್‌ ಕುಂದರಗಿ, ಕಾರ್ಯನಿರ್ವಾಹಕ ಎಂಜಿನಿಯರ್‌ ವಿ.ಎನ್‌. ನಾಯಕ,  ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್.ಎಸ್. ಬಲೋಲ, ಕೆ.ಜಿ. ಕಡೇಲಿ, ಕಿತ್ತೂರು ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಸಂಜೀವ ಲೋಕಾಪುರ, ಶೇಖರ ಯರಗೊಪ್ಪ ಮತ್ತಿತರರು ಉಪಸ್ಥಿತರಿದ್ದರು.‘ಪರಿಸರ ಸಂರಕ್ಷಣೆ ಎಲ್ಲರ ಹೊಣೆ’

ಬೆಳಗಾವಿ: ‘ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಹೀಗಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಶ್ರಮಿಸಬೇಕು’ ಎಂದು ಪರಿಸರವಾದಿ ನಿರ್ಮಲಾ ಲಾಥಿ  ಹೇಳಿದರು.ಎಸ್.ಜೆ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಬೆಳಗಾವಿ ವಿಜ್ಞಾನ ಶಿಕ್ಷಣ ಸಂಘದ ಸಹಯೋ­ಗದಲ್ಲಿ ಇಲ್ಲಿನ ಎಸ್.ಜೆ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಬಾಲಕಿ­ಯರ ವಸತಿಗೃಹದ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ‘ಕಸದಿಂದ ಉದ್ಯಾನವನ ನಿರ್ಮಾಣ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶೈಲಾ ಪೈ ಅವರು, ‘ಗೃಹ ತ್ಯಾಜ್ಯ ನಿರ್ವಹಣೆ ಅತ್ಯಂತ ಸುಲಭವಾದದ್ದು. ಹೀಗಾಗಿ ಪ್ರತಿಯೊಬ್ಬರು ಕಲ್ಚರ್ ವಿಧಾನ ಬಳಸಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಈ ಮೂಲಕ ಸದೃಢ ಆರೋಗ್ಯ ಹೊಂದಬೇಕು’ ಎಂದರು.ರಾಜೇಶ್ವರಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಅಧ್ಯಕ್ಷ ಶಿವಕುಮಾರ ಸಂಬರಗಿಮಠ, ಪ್ರಾಚಾರ್ಯ ಎಸ್.ಎಸ್.ಸಾಲಿಮಠ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.