ಗುರುವಾರ , ಮೇ 6, 2021
24 °C

11 ಅಡಿ ವಿಶೇಷ ಪೆನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಸಾಮಾಜಿಕ ಕಾರ್ಯ ಕರ್ತ ಅಣ್ಣಾ ಹಜಾರೆ ಅವರಿಗೆ ಸಮರ್ಪಿ ಸುವ ಉದ್ದೇಶದಿಂದ ಕಲಾವಿದರ ಬಳಗವೊಂದು ಇದೀಗ 11 ಅಡಿ ಎತ್ತರದ ವಿಶೇಷ ಪೆನ್ ರೂಪಿಸಿದ್ದಾರೆ.8 ಅಂಗುಲ ದಪ್ಪ ಹಾಗೂ 12 ಕೆ.ಜಿ. ತೂಕವಿರುವ ಈ ಬೃಹತ್ ಲೇಖನಿಯನ್ನು ಜನಲೋಕಪಾಲ ಮಸೂದೆ ಅನು ಮೋದನೆಗೆ ಸಹಿ ಹಾಕಲು ಬಳಸಬೇಕು ಎಂಬುದು ಕಲಾವಿದರ ಬಯಕೆ. ಉಪಯೋಗ ಮಾಡಿದಂತಹ 1300 ಪೆನ್ನುಗಳು, ತ್ಯಾಜ್ಯ, ಪಿವಿಸಿ ಪೈಪ್, ವಿದ್ಯುತ್ ತಂತಿ, ಪ್ಲಾಸ್ಟಿಕ್, ಹರಿದ ವಾಹನದ ಸೀಟ್ ಕವರ್ ಬಳಸಿ ಈ ವಿಶೇಷ ಪೆನ್ ನಿರ್ಮಿಸಲಾಗಿದೆ.ನಗರದ ನಾಗವಾರ ವರ್ತುಲ ರಸ್ತೆಯ ಲುಂಬಿನಿ ಗಾರ್ಡನ್ ಮತ್ತು ಮಾನ್ಯತಾ ಟೆಕ್ ಪಾರ್ಕ್ ನಡುವ ಣವಿರುವ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ವಿಶಿಷ್ಟ ಪೆನ್ ಆಕರ್ಷಣೀಯ. `ಆರ್ಟ್ ಮ್ಯಾನ್ಫೋ-2011~ ಮೇಳ ದಲ್ಲಿ ಅತಿದೊಡ್ಡ ಪೆನ್ ಗಮನ ಸೆಳೆಯಲಿದೆ.ಸೆ. 18ರವರೆಗೆ ಮೇಳ ನಡೆಯಲಿದ್ದು, ಬೆಳಿಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ. ಈ ಕಲಾ ಮೇಳದಲ್ಲಿ ವಿಸ್ಮಯಕಾರಿ ಕಲಾಕೃತಿಗಳು ನಾಗರಿಕ ರನ್ನು ಚಕಿತ ಗೊಳಿಸುತ್ತಿದ್ದು, ಅತಿ ದೊಡ್ಡ ಲೇಖನಿ ವಿಶೇಷ ಗಮನಸೆಳೆಯುತ್ತಿದೆ.ತ್ಯಾಜ್ಯ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ಕಲಾವಿದರು ಆಧುನಿಕ ವಾಸ್ತು ಶಿಲ್ಪ ಕಲೆಗೆ ಹೊಸ ಆಯಾಮ ನೀಡಿದ್ದಾರೆ. ಜನಲೋಕಪಾಲ್ ಮಸೂದೆ ಅನು ಮೋದನೆಗೆ ಸಹಿ ಹಾಕುವ ಉದ್ದೇಶ ದಿಂದ ಅಣ್ಣಾ ಹಜಾರೆ ಹಾಗೂ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಈ ಲೇಖನಿ ಸಮರ್ಪಿಸಲು ನಿರ್ಧರಿಸಲಾಗಿದೆ ಎಂದು ಕಲಾವಿದ ಎಂ.ರಾಮು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.