ಶನಿವಾರ, ಜನವರಿ 18, 2020
26 °C

16 ಜನವರಿ 2012 ಅನಾವರಣ ಅಂಕಣದ ಬಗ್ಗೆ ಪ್ರತಿಕ್ರಿಯೆ-1

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೇಖನ ಅದ್ಭುತವಾಗಿ ಮೂಡಿಬಂದಿದ್ದು ಅನೇಕ ಕಹಿ ಮತ್ತು ವಾಸ್ತವಿಕ ಸತ್ಯಗಳನ್ನು ಓದುಗರ ಮುಂದಿಟ್ಟಿದೆ. ಈಗಾಗಲೇ ತಮ್ಮ ವಿಚಾರ ಮತ್ತು ಕೃತಿಗಳ ಮೂಲಕ ದೇಶದ ಮನೆಮಾತಾಗಿರುವ ಅನೇಕ ಧೀಮಂತ ವ್ಯಕ್ತಿಗಳನ್ನು ಸರಿಯಾಗಿ ಓದದೆ ತಿಳಿದುಕೊಳ್ಳದೆ ಅವರನ್ನು ತಮ್ಮ ರಾಜಕೀಯ ಹಿತಾಸಕ್ತಿಗೆ ಅನೇಕ ಸಂಘಟನೆಗಳು ಬಳಸಿಕೊಳ್ಳುತ್ತಿವೆ.ತನ್ನ ಅಂಗಭಾಗವಾದ ಎಬಿವಿಪಿಯ ಮೂಲಕ ಬಿಜೆಪಿಯು ಇತ್ತೀಚೆಗೆ ವಿವೇಕಾನಂದರನ್ನು ಹೀಗೆ ಅತಿಯಾಗಿ ಬಳಸಿಕೊಳ್ಳುತ್ತಿದ್ದು, ಚೋದ್ಯದ ಸಂಗತಿಯೆಂದರೆ ಭಗತ್ ಸಿಂಗರನ್ನೂ ಈ ವಿಚಾರದಲ್ಲಿ ಬಿಟ್ಟಿಲ್ಲ. ಎಡಪಂಥೀಯರನ್ನು ಉಗ್ರವಾಗಿ ವಿರೋಧಿಸುವ ಇದೇ ಹಿಂದುತ್ವದ ಪ್ರತಿಪಾದಕ ಭಗತ್ ಸಿಂಗ್ ಎಡಪಂಥೀಯ ವಿಚಾರಧಾರೆಗಳನ್ನು ಆಯ್ದು ಬದಿಗಿರಿಸಿ ಅವರನ್ನು ಕೂಡಾ ತಮ್ಮ ಬ್ರಾಂಡಿನ ಅಂಬಾಸಡರ್ ಆಗಿಯೇ ಬಿಂಬಿಸುತ್ತಿದ್ದು ಇದರ ಹಿಂದಿನ ಹುನ್ನಾರ ಅರ್ಥವಾಗದ ವಿಷಯವೇನೂ ಅಲ್ಲ.

ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು ದೇವರುಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆಎಂಬ ಒಂದೇ ಒಂದು ಸಾಲು ಸಾವಿರ ಪದಗಳಲ್ಲಿ ಹೇಳಬಹುದಾದುದನ್ನು ಹೇಳುವಂತಿದೆ. ಲೇಖನದ ಕೊನೆಯ ಭಾಗವಂತೂ ಅತ್ಯಂತ ಮನನೀಯವಾಗಿದೆ.

ಹಿಂದೂ ಧರ್ಮದ ಹುಳುಕುಗಳನ್ನು ಕೊಳಕುಗಳನ್ನು ಎಗ್ಗಿಲ್ಲದೆ ಝಾಡಿಸಿದ ವಿವೇಕಾನಂದರನ್ನು ಹಿಂದೂ ಮತಾಂಧರು ವಶಪಡಿಸಿಕೊಂಡಿರುವುದುನಿಜಕ್ಕೂ ಖೇದದ ಮತ್ತು ಅಷ್ಟೇ ತಮಾಷೆಯ ಸಂಗತಿ. ಲೇಖನ ಇಂತಹ ಅನೇಕ ಸಂಗತಿಗಳ ಮೂಲಕ ಅಪರೂಪದ ಮಾಹಿತಿಯನ್ನು ಒದಗಿಸಿದೆ. ಮಟ್ಟು ಅವರಿಗೆ ಅಭಿನಂದನೆಗಳು


 • ಶ್ರೀನಿವಾಸ ಕಾರ್ಕಳ

 

ಮಾನ್ಯರೇ, ಪ್ರಜಾವಾಣಿ ಪತ್ರಿಕೆಯಲ್ಲಿ ದಿನೇಶ್ ಸರ್ ಅವರು ಬರೆದಿರುವ ವಿವೇಕಾನಂದರ ಕುರಿತ ಲೇಖನ ತುಂಬಾ ಚೆನ್ನಾಗಿದೆ. ಒಬ್ಬ ಸಾಮಾನ್ಯ ಮನುಷ್ಯರಾಗಿ ನರೇಂದ್ರನಾಥ ಹೇಗೆ ವಿವೇಕಾನಂದರಾಗಿ ಬೆಳೆದರು ಎನ್ನುವುದು ನಮಗೆ ಸ್ಪೂರ್ತಿಯಾಗಿದೆ. ಕೆಲವು ಹಿಂದೂಗಳು ಅವರನ್ನ ತಮ್ಮ ಧರ್ಮದ ರಾಯಭಾರಿಯಾಗಿ ಬಿಂಬಿಸುತ್ತಿರುವವರಲ್ಲ ಅವರಿಗೆ ಈ ಲೇಖನ ಸರಿಯಾದ ಉತ್ತರ ಕೊಟ್ಟಿದೆ.


 • ಮೆಹಬೂಬ್ ಮಠದ ಅಲವಂಡಿ, ಶಿಕ್ಷಕರು, ಕೊಪ್ಪಳ

  ಮಾನ್ಯ ಸಂಪಾದಕರೆ,

  ಸ್ವಾಮಿ ವಿವೇಕಾನಂದ ಎಂಬ ಮನುಷ್ಯನನ್ನು ಹೀಗಿದ್ದರು ... ಲೇಖನ ಬರೆದ ದಿನೇಶ್ ಅಮೀನ್ ಮಟ್ಟುರವರಿಗೆ ಅಭಿನಂದನೆಗಳು.

   

  ಸ್ವಾಮಿ ವಿವೇಕಾನಂದರನ್ನು ಕುರಿತಾದ ಕೆಲ ಸಂಗತಿಗಳನ್ನೂ ನಿಮ್ಮ ಗಮನಕ್ಕೆ ತರುತ್ತೇನೆ.  (
  ) ೨೪ ನೇ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿದ್ದ ಅವರಿಗೆ ಜೀವಾನಾನುಭವ , ಸಮಾಜದ ಸಂಕೀರ್ಣತೆ ಮತ್ತು ವ್ಯಕ್ತಿಗಳ ಸ್ವಭಾವದ ಅರಿವಿನ ಕೊರತೆಯಿದ್ದಿತು. ಆದ್ದರಿಂದ ಅವರು ಭಾರತೀಯ ಸಮಾಜವನ್ನು ವೇದೋಪನಿಷತ್ತುಗಳೊಂದಿಗೆ ಸಮೀಕರಿಸಿದರು. ಇದಕ್ಕೆ ಸೆಡ್ಡು ಹೊಡೆದಂತೆ ಇದರ ಪ್ರಭಾವಕ್ಕೊಳಗಾಗದೇ ನಿಂತಿರುವ ಜಾನಪದ ಜನಜೀವನ ಇವರ ಅರಿವಿಗೆ ಬರಲಿಲ್ಲ.  ಭಕ್ತಿಪಂಥ/ಚಳುವಳಿಗಳನ್ನು ವೇದೋಪನಿಷತ್ತುಗಳ ಮುಂದುವರಿಕೆಯಾಗಿ ಕಂಡರೇ ಹೊರತು ಅವುಗಳ ಹಿನ್ನೆಲೆಯಲ್ಲಿರುವ ತಾತ್ವಿಕ ಸಂಘರ್ಷ ಕಾಣಲಿಲ್ಲ.

   

  (
  ) ಸ್ವಾಮಿಗಳು ಕರ್ನಾಟಕದಲ್ಲಿ ಸಹ ಸಂಚರಿಸಿದ್ದರು. ಬೆಳಗಾವಿಯಲ್ಲಿ ಕೆಲದಿನ ತಂಗಿದ್ದರು. ಮೈಸೂರಿನ ಅರಮನೆಯಲ್ಲಿ ರಾಜರನ್ನು ಭೇಟಿಯಾದರು.  ಪವಹಾರಿಬಾಬಾರಂತಹ ಅಜ್ಞಾತರ ಬಗ್ಗೆ ಹೇಳುವ ಸ್ವಾಮಿಗಳು ೧೨ ನೆ ಶತಮಾನದ ಶರಣ ಚಳುವಳಿಯನ್ನು ಅರಿಯಲು ಹೋಗಲಿಲ್ಲ. ಅಥವಾ ತಿಳಿದಿದ್ದರೂ ಶರಣರು ಸಂಸಾರ ತ್ಯಾಗವನ್ನು ಮತ್ತು ವೇದೋನಿಷತ್ತುಗಳ ಪಾರಮ್ಯವನ್ನು ತಿರಸ್ಕರಿಸಿದ್ದರಿಂದಲೋ ಏನೋ ಅವರ ಬಗ್ಗೆ ಎಲ್ಲಿಯೂ ಚಕಾರವೆತ್ತಲಿಲ್ಲ. ತಾವು ಪ್ರತಿಪಾದಿಸುತ್ತಿದ್ದ ಜಾತಿವಿನಾಶ , ಕ್ರಿಯಾಶೀಲತೆ (=ಕಾಯಕ) ಪರಿಕಲ್ಪನೆ ಶರಣರಲ್ಲಿ ಹೇಗೆ ಸಾಕಾರ ರೂಪ ತಳೆದಿದ್ದಿತು ಎನ್ನುವುದು ಮನ ಸೆಳೆಯಲಿಲ್ಲ. () ಸ್ವಾಮಿಗಳನ್ನು ಇಬ್ಬಂದಿತನ ಕಾಡುತ್ತಿತ್ತು. ಭಾರತೀಯರ ಬಡತನ , ಕುರುಡು ನಂಬಿಕೆ , ಅನಕ್ಷರತೆ , ಮೇಲು-ಕೀಳುಗಳಿಗೆ ಅವರ ಅಂತಕರಣ ಮಿಡಿಯುತ್ತಿತ್ತು.  ಇದನ್ನು ಪಾಶ್ಚಾತ್ಯರ ಸಾಧನೆಗಳೊಂದಿಗೆ ಹೋಲಿಸಿ ಖಿನ್ನರಾಗುತ್ತಿದ್ದರು. ಭಾರತೀಯರು ಅವರಂತೆ ಆಗಬೇಕೆಂದು ಬಯಸುತ್ತಿದ್ದರು. ಆದರೆ ಮರು ಕ್ಷಣವೇ ಯುರೋಪಿನಲ್ಲಿ ಕರ್ಮ ಸಿದ್ಧಾಂತದ ಬಗೆಗೆ ಗಂಟೆಗಳ ಕಾಲ ಭಾಷಣ ಮಾಡುತ್ತಿದ್ದರು. ತಾವು ಪ್ರತಿಪಾದಿಸುತ್ತಿದ್ದ ಕರ್ಮ ಸಿದ್ಧಾಂತದ ಹಿನ್ನೆಲೆಯಲ್ಲಿ ಭಾರತೀಯರ ಸ್ಥಿತಿಗತಿಗಳನ್ನು ವಿವರಿಸಲು ಅಂತರಂಗದಲ್ಲಿ ವಿಫಲರಾಗಿದ್ದರು.

   

  (
  ) ನಾಯಕರು ಮೊದಲು ಬಂದು ನಂತರ ಅವರಿಂದ ಬದಲಾವಣೆಗಳು ಬರುವುವೆಂದು ನಂಬಿದ್ದರು. ಭಾರತದ ಸ್ವಾತಂತ್ರ ಸಂಗ್ರಾಮದ ಕುರಿತಾದ ಪ್ರಶ್ನೆಗೆ ‘ಯುವಕರೆಲ್ಲಿ?’ ಎಂದು ಗರ್ಜಿಸಿದ್ದರು. ಆದರೆ ಸನ್ನಿವೇಶಗಳು , ಅದರ ಒತ್ತಡಗಳು ನಾಯಕರನ್ನು ಸೃಜಿಸುತ್ತವೆ ಎಂದು ಅವರಿಗೆ ಮನದಟ್ಟಾಗಿರಲಿಲ್ಲ. ಗಾಂಧಿ ಬಂದು ನಾಯಕರೆಲ್ಲಿ ಎಂದು ಕೇಳಲಿಲ್ಲ. ಆತ ಒಮ್ಮೆಲೆ ತನಗೆ ತಾನೇ ನಾಯಕ ಮತ್ತು ಅನುಯಾಯಿಯಾದ.

   

  (
  ) ಭಾರತೀಯ ಜೀವನ ಆಧ್ಯಾತ್ಮದ ಹಿನ್ನೆಲೆಯಲ್ಲಿ ಸಾಗುವುದು ಎಂದು ಅವರು ಭಾವಿಸಿದ್ದರು. ಪುರಾಣಗಳಲ್ಲಿನ ಜನಕರಂತಹ ರಾಜರುಗಳೇ ಅವರ ಕಣ್ಣೆದುರು ಬರುತ್ತಿದ್ದರು. ಆದರೆ ಭಾರತದ ಅಧೋಗತಿಗೆ ಕಾರಣವಾದ ಅಂಶಗಳನ್ನು ಆಧ್ಯಾತ್ಮದ ಪತನದಲ್ಲಿ ಹುಡುಕುತ್ತಿದ್ದರು. ತ್ಯಾಗ ಮತ್ತು ಆಧ್ಯಾತ್ಮ ಭಾರತೀಯರ ಸಹಜ ಗುಣಗಳೆನ್ನುವುದು ಅವರ ಬಲವಾದ ನಂಬಿಕೆಯಾಗಿದ್ದಿತು. ಆದರೆ ಇದಕ್ಕೆ ಯಾವ ಸಮರ್ಥನೆಗಳು ಸಹ ಇರಲಿಲ್ಲ.

   

  (
  ) ಸ್ವಾಮಿ ವಿವೇಕಾನಂದರು ಹಿಂದು ಧರ್ಮದ ವೀರ ಸಂನ್ಯಾಸಿಯೆಂದು ಹೊರಗೆ ಕಾಣುವುರಾದರು ಅವರ ನಿಜವಾದ ಅಂತರಂಗದಲ್ಲಿ ಭಾರತದ ದುಸ್ಥಿತಿಯ ವಿರುದ್ಧ ಸಿಡಿದೆದ್ದ ವ್ಯಕ್ತಿಯೊಬ್ಬನಿದ್ದ. ಸ್ವಾಮಿಗಳು ಭಾರತದ ಸಮಾಜವನ್ನು ಆಧ್ಯಾತ್ಮದ ಪರಿಕಲ್ಪನೆಯಲ್ಲಿ ಗ್ರಹಿಸಿದ್ದರಿಂದಲೇ ಅವರು ಗತಿಸಿ ೧೧೦ ವರ್ಷಗಳಾದರೂ ಅವರ ಪ್ರಭಾವ ವ್ಯಾಪಕವಾಗದೆ ಒಂದು ನಿರ್ದಿಷ್ಟ ದೃಷ್ಟಿಕೋನ ಹೊಂದಿರುವರಲ್ಲಿ ಮಾತ್ರ ಉಳಿದುಕೊಂಡಿದೆ. ಅವರ ಚಿಂತನೆಗಳ ಅಸ್ಪಷ್ಟತೆಯಿಂದ ಅವರನ್ನು ಹಿಂದು ಸಮಾಜವನ್ನು ಬದಲಾಯಿಸಲು ಯತ್ನಿಸಿದ ಸುಧಾರಕನಿಗಿಂತಲು ವೇದೋಪನಿಷತ್ತುಗಳನ್ನು ಪ್ರಚಾರ ಮಾಡಿದ ಸಂನ್ಯಾಸಿಯಾಗಿ ಪರಿಗಣಿಸುವಂತಾಗಿದೆ.

  - ಎನ್.ಶಂಕರಪ್ಪ ತೋರಣಗಲ್ಲು (೮೧೯೭೨೩೬೯೭೧)

  ಬಿ.. (ಸಿವಿಲ್) , ಎಂ.. (ರಚನೆಗಳು ) B.E (Civil) ., M.E (Structures)

  ವಿಜಯನಗರ, ಬೆಂಗಳೂರು


 • Sir 16/01/2012 vivekananda~s published article is wounderful 


 • ದಂಡಿನಶಿವರ ತುಮ್ಮೇಗೌಡ 

  SIR

  VERY MUCH THANKFUL TO MR DINESH AMIN MATTU~S ARTICLE TITLED "VIVEKANANDARU HEEGIDDARU" REALLY OPENED UP (ANAAVARANA) A LOT OF INFORMATION WHICH MOST OF US ARE UNAWARE. PEOPLE WHO DEIFY HIM SHOULD GO THROUGH THIS ARTICLE TO KNOW OF REAL VIVEKANANDA WHO ADVOCATED HUMANARIGHTS & PROTECTION OF INDIVIDUAL DIGNITY WHICH MUST BE PROTECTED AT ANY COST. WE WLCOME MORE OF THIS KIND OF ARTICLES.

  - KASHINATH SAMBHAPUR, HOSPET


 • Hi Dinesh,

  Really good article on swami vivekanand.

  I was not knowing that they used to eat meat, smoking and all. All i was knowing that he was a swamiji so may be he was like other hindu swamiji who dont eat meat neither smokes.

  Yeah one thing i liked most is we should not make such people as gods n keep on worshiping them, Better to consider them as normal humans and we should worship their knowledge, dedication. then only we normal humans can also try to achieve something.

  Felt really happy about article.

  - Basavaraj Lingashettra


 • Yes i read your article today in prajavani it was excellent.you are true, today people are trying to make vivekananda as ~swami ~of course may be. But no one is dare enough to say the reality. one require the courage and one must be rational.Wonderful you did fantastic job.I used to read lot about vivekananda but i never knew these aspects.it is equally important to know ones weakness along with their strength...carryon


 • Regards

  - chandrashekar, Advocate

ಸ್ವಾಮಿ ವಿವೇಕಾನಂದ ಅವರ ಕುರಿತ ದಿನೇಶ್ ಅಮಿನಮಟ್ಟು ಅವರ ಲೇಖನ ಬಹುತೇಕ ಜನರಮಟ್ಟಿಗೆ ಹೊಸದಾಗಿದೆ. ಈ ಲೇಖನ ಎಲ್ಲರಿಗೂ ತಲುಪಬೇಕು. ಈ ಕುರಿತು ಎಡ-ಬಲ ಪೂರ್ವಗ್ರಹಪಿಡಿತರಲ್ಲದವರಿಂದ ಮೂರ್ನಾಲ್ಕು ದಿನ ಪತ್ರಿಕೆಯಲ್ಲಿ ಚರ್ಚೆಗೆ ವೇದಿಕೆ ಒದಗಿಸಿದರೆ ಸತ್ಯ ತಿಳಿಯಲು ಸಹಕಾರಿ ಆಗುತ್ತದೆ.

ಈ ಲೇಖನ ಓದಿ ನಂಬುವುದು ಹೇಗೆ... ಎಂಬ ಪ್ರಶ್ನೇ ಮನದಲ್ಲಿ ಮೂಡುತ್ತಿದೆ. ಏಕೆಂದರೆ ಇಷ್ಟು ದಿನ ನಮ್ಮನ್ನು ನಂಬಿಸಿದ್ದ ಜನ, ನಾವು ಓದಿದ ಲೇಖನಗಳು, ಪುಸ್ತಕಗಳು, ಪಠ್ಯ ಪುಸ್ತಕದಲ್ಲಿ ಎಲ್ಲ ಕಡೆ ಏಕಮುಖವಾಗಿ ವಿವೇಕಾನಂದ ಅವರನ್ನು ಚಿತ್ರಿಸಲಾಗಿತ್ತು. ಅದನ್ನೇ ನಾವು ಇಷ್ಟು ದಿನ ಓದಿ, ತಿಳಿದುಕೊಂಡು ನಂಬಿಕೊಂಡು ಬಂದಿದ್ದೇವೆ. ಕತ್ತಲಲ್ಲಿ ಗೊಗ್ಗ ಎಂಬ ಭಯ ಎಷ್ಟು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದಿಯೋ ಅಷ್ಟೇ ಗಟ್ಟಿಯಾಗಿ ವಿವೇಕಾನಂದರ ಕುರಿತು ನಮ್ಮಲ್ಲಿ ಒಂದು ನಂಬಿಕೆ ಗಟ್ಟಿಯಾಗಿ ಬೇರೂರಿದೆ. ಅದು ಸುಳ್ಳು ಎಂಬುದು ಈಗ ಸ್ವಲ್ಪ ಸ್ಪಷ್ಟವಾಗಿದೆ. ಆದರೆ ಇನ್ನೂ ಪೂರ್ಣ ಕತ್ತಲಿನಿಂದ ಹೊರಬರಬೇಕಾಗಿದೆ.

ಸ್ವಾಮಿ ವಿವೇಕಾನಂದ ಅವರು ಕೂಡ ನಮ್ಮಂತೆ ಮನುಷ್ಯರು, ಅವರು ದೇವರ ಅನುಗ್ರಹವಿಲ್ಲದೇ ಸಾಮಾನ್ಯ ಮನುಷ್ಯನಂತೆ ಸಾಧನೆಗೈದ ಮಹಾನ್ ವ್ಯಕ್ತಿ. ನಾವು ಕೂಡ ಸಾಧನೆ ಮಾಡಬಹುದು ಎಂಬ ಅಮಿನ್ಮಟ್ಟು ಅವರ ಲೇಖನ ಸಾಂದಭರ್ಿಕವಾಗಿದೆ. ಅದು ಇನ್ನೂ ಹೆಚ್ಚು ಜನರಿಗೆ ತಲುಪುವಂತಾಗಲು ವಿತಂಡವಾದಿಗಳಲ್ಲದವರಿಂದ ಒಂದೆರಡು ದಿನಗಳ ಕಾಲ ಲೇಖನಗಳ ಮೂಲಕ ಚಚರ್ೆಗೆ ಅವಕಾಶ ಕಲ್ಪಿಸಿದರೆ ನಮ್ಮಂತ ಸಾವಿರಾರು ಜನರಿಗೆ ಹೆಚ್ಚು ಸಹಕಾರಿ ಆಗುತ್ತದೆ.


 • .ಮಹೇಶ್ಬಾಬು, ಚಿತ್ರದುರ್ಗ

ಮಾನ್ಯ ಸ೦ಪಾದಕರಿಗೆ,

ವ೦ದನೆಗಳು. ತಾರೀಖು ೧೬-೦೧-೨೦೧೨ ನೇ ಸೋಮವಾರದ "ಆನಾವರಣ" ಅ೦ಕಣದಲ್ಲಿ ಶ್ರೀಯುತ ದಿನೇಶ್ ಆಮಿನ್ ಮಟ್ಟು ಅವರು ಸ್ವಾಮಿ ವಿವೇಕಾನನ೦ದರ ಅಪರಿಚಿತ ಮುಖವೊ೦ದನ್ನು ಅನಾವರಣ ಗೊಳಿಸಿದ್ದಾರೆ. .ರೋಗಿಷ್ಠ ನಾದ, ನಮ್ಮ ನಿಮ್ಮ೦ತೆ ಒಬ್ಬ ಸಾಧಾರಣ ಮನುಷ್ಯನಾಗಿದ್ದ ನರೇ೦ದ್ರನಾಥ್ ಎಲ್ಲ ಧರ್ಮಗ್ರ೦ಥಗಳನ್ನೂ ಅಧ್ಯಯನ ಮಾಡಿ, ಧರ್ಮದ ನಿಜವಾದ ತತ್ವಗಳ ಸಾರವನ್ನು ಹೀರಿ ಶಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿ೦ದು ಧರ್ಮದ ತತ್ವಗಳನ್ನು ಎತ್ತಿ ಹಿಡಿದ ಧೀಮ೦ತನಾಗಿ ಎತ್ತರವನೇರಿದ್ದು ಅವರಲ್ಲಿದ್ದ ಇಚ್ಛಾಶಕ್ತಿ, ಕ್ರಿಯಾಶೀಲತೆ ಮತ್ತು ಅಧ್ಯಯನ ಶೀಲತೆ ಗಳಿ೦ದ. ದಿನೇಶ್ ಆಮಿನ್ ಮಟ್ಟು ರವರು ತಮ್ಮ ಲೇಖನವನ್ನು ಮುಗಿಸುತ್ತ " ಯಃಕಶ್ಚಿತ್ ಮನುಷ್ಯನೊಬ್ಬ ಇ೦ತಹ ಸಾಧನೆ ಮಾಡಲು ಸಾಧ್ಯವೇ? ಖ೦ಡಿತಾ ಸಾಧ್ಯ, ಅದಕ್ಕಾಗಿ ಆತ "ವಿವೇಕಾನ೦ದ" ಆಗಿರಬೇಕು " ಎ೦ದು ಬರೆದಿರುವುದು ವಿವೇಕಾನ೦ದರ ವ್ಯಕ್ತಿತ್ವವನ್ನು ಇನ್ನಷ್ಟು ಪ್ರಖರಗೊಳಿಸಿದೆ.

ಸ್ವಾಮಿ ವಿವೇಕಾನ೦ದರ ವ್ಯಕ್ತಿತ್ವವನ್ನು "ಅನಾವರಣ" ಗೊಳಿಸಿದ ದಿನೇಶ್ ಆಮಿನ್ ಮಟ್ಟು ಅವರಿಗೆ ನನ್ನ ಹ್ರುತ್ಪೂರ್ವಕ ಅಭಿನ೦ದನೆಗಳು.


 • ಮೇಗರವಳ್ಳಿ ರಮೇಶ್.

Sir 

Todays column Anavarana about Vivekananda is a wonderful depiction of the masked facts about the well adored personality.  This article goes a long way in making the citizens more rational and inquisitive.  Many thanks to Mr. Dinesh Ammin mattu and my very special compliments to the editorial team for being so bold and objective in their Journalistic commitment.

 I am proud to be a reader of Prajavani.

 Thumakuru Chandrakantha

ಸೋಮವಾರದ ತಮ್ಮ "ಅನಾವರಣ" ಲೇಖನ ಉತ್ತಮ ಮತ್ತು ಸ್ವಾರಸ್ಯಕರವಾದುದ್ದಾಗಿತ್ತು.ಸ್ವಾಮಿ ವಿವೇಕಾನ೦ದರ ಪ್ರಾಬಲ್ಯ ಮತ್ತು ಅವರ ದೌರ್ಬಲ್ಯ ಎರಡನ್ನೂ ಸ೦ಕ್ಷಿಪ್ತ ಮತ್ತು ಪರಿಣಾಮಕಾರಿ
ಯಾಗಿ ಒರೆಗೆ ಹಚ್ಚಿದ್ದು ಕುತೂಹಲವನ್ನು೦ಟು ಮಾಡಿತ್ತು.ತನ್ನಲ್ಲಿರುವ ದೌರ್ಬಲ್ಯವನ್ನು ಮೆಟ್ಟಿ ನಿ೦ತು,ಸಫಲತೆಯ ಉತ್ತು೦ಗಕ್ಕೇರಿ ಎಲ್ಲಾ ಮನುಕುಲಕ್ಕೇಆದರ್ಶ ಪ್ರಾಯರಾದ ವಿವೇಕಾನ೦ದರ ಜೀವನ ನಮಗೆಲ್ಲರಿಗೂ ದಾರಿದೀಪವಾಗಿದೆ.ಒ೦ದು ಸ೦ಗತಿಯ ಎರಡೂ ಮುಖಗಳನ್ನು ನೋಡುವ,ಅರ್ಥೈಸುವ ಮತ್ತು ವಿಷ್ಲೇಶಿಸುವ ತಮ್ಮಲೇಖನ "ಅನಾವರಣ" ಕೇವಲ ಸಾಪ್ತಾಹಿಕವಾಗಿರದ್ದೆ, ದೈನಿಕವಾಗಿದ್ದರೆ ಎಷ್ಟು ಚೆನ್ನ ಎ೦ದು ಹಲವಾರು ಬಾರಿ ಅನಿಸಿದ್ದೂ ಇದೆ. "ಅನಾವರಣ" ಒ೦ದು ಸ೦ಗ್ರಹಯೋಗ್ಯ ಲೇಖನ ಖ೦ಡಿತವಾಗಿಯೂ ಹೌದು.ತಮ್ಮ "ಅನಾವರಣ" ಪುಸ್ತಕ ರೂಪದಲ್ಲಿ ಪ್ರಕಟವಾಗಿದೆಯೇ ಎ೦ಬುದನ್ನು ದಯವಿಟ್ಟು ತಿಳಿಸಿ.


ನಿಮ್ಮ ಅಭಿಮಾನಿ.

- ರವಿಸಾಗರ್.

ವಿವೇಕಾನಂದರು ಹುಟ್ಟಿ 149 ವರ್ಷಗಳ ನಂತರ, ಸತ್ತು 110 ವರ್ಷಗಳ ನಂತರ ಅವರ ಜೀವನದ ಮತ್ತೊಂದು ಮುಖವನ್ನು ಅನಾವರಣ ಮಾಡಿರುವ ಶ್ರೀ ದಿನೇಶ್ಅಮೀನ್ಮಟ್ಟುರವರ ಕಳಕಳಿ ಮೊದಲಿನಿಂದಲೂ ಅವರನ್ನು ಬಲ್ಲವರಿಗೆ ಅರ್ಥವಾಗುವಂಥದ್ದೇ.

ವಿವೇಕಾನಂದರ ಬಾಲ್ಯ ಅಥವಾ ಅವರು ಪ್ರಭುದ್ಧರಾಗುವುದಕ್ಕೆ ಮುಂಚಿನ ಜೀವನಗಾಥೆಯನ್ನೇ ವೈಭವೀಕರಿಸಿ(?) ಬರೆದಿರುವುದರ ಹಿಂದಿನ ಹುನ್ನಾರವೂ ಅರ್ಥವಾಗುವಂತದ್ದೇ. ಭಾರತದ ಇತಿಹಾಸದಲ್ಲಿ ಸಾಧನೆ ಮಾಡಿದ ಸಾಧಕರೂ ಇದ್ದಾರೆ, ಜತೆಗೆ ಅವರ ದೌರ್ಬಲ್ಯಗಳನ್ನೇ(ಇದ್ದರೆ!) ವೈಭವೀಕರಿಸಿ ಪ್ರಚುರಪಡಿಸುವ ಮತ್ತೊಂದು ವರ್ಗವು ಇದ್ದೇಇದೆ. ಇತಿಹಾಸದಲ್ಲಿ ಸಾಧನೆ ಮಾಡಿದ ಬಹುತೇಕರು ಹುಟ್ಟಿನಿಂದಲೇ ಯಾರೂ ವೀರರೂ ಅಲ್ಲ, ಶೂರರೂ ಅಲ್ಲ, ಜ್ಞಾನಿಗಳೂ ಅಲ್ಲ.

 

ಜೀವನದ ವಿವಿಧ ಘಟ್ಟಗಳನ್ನು ದಾಟಿ ಸಾಧಕರಾಗಿ ಮೆರೆದವರೇ. ಬೇಟೆ ಮಾಡುತ್ತಿದ್ದ ವಾಲ್ಮೀಕಿ ಇರಬಹುದು, ವೇಶ್ಯೆಯ ಸಂಘ ಮಾಡಿದ ಕಾಳಿದಾಸನಿರಬಹುದು. ಅಷ್ಟೇಕೆ, ಬಾಲ್ಯದಲ್ಲಿ ಕಳ್ಳತನ ಮಾಡಿದ್ದೆ, ಧೂಮಪಾನ ಮಾಡಿದ್ದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡುನಂತರ ಮಹಾತ್ಮನಾದ ಗಾಂಧಿ ಇರಬಹುದು.

 

ಎಲ್ಲರೂ ಜೀವನದ ವಿವಿಧ ಮಜಲುಗಳನ್ನು ದಾಟಿ ಸಾಧನೆ ಮಾಡಿದವರೇ. ಇಂತಹ ಸಾಧಕರುಗಳಿಗೆ ಆಯಾ ಸಂದರ್ಭಗಳಲ್ಲಿ ಸಿಕ್ಕ ಪ್ರೇರಣೆ, ಸ್ಪೂತರ್ಿ, ಮಾರ್ಗದರ್ಶನ ಅವರ ಸಾಧನೆಗೆ ಕಾರಣವಿರಬಹುದು. ಇದು ಹಿಂದಿನಿಂದ ಇಂದಿಗೂ ನಡೆದುಕೊಂಡು ಬರುತ್ತಲೇ ಇದೆ.

 

ಅದೇ ರೀತಿ ವಿವೇಕಾನಂದರ ಜೀವನದಲ್ಲಿಯೂ ಕೆಲವು ಘಟನೆಗಳು ಆಗಿದ್ದಿರಬಹುದು. ಆದರೆ ಮಹನೀಯರು ಮಾಡಿದ ಸಾಧನೆಗಿಂತ ಅವರುಗಳು ಮಾಡಿದ ಯಾವುದೋ ಕೃತ್ಯಗಳಿಗೆ (ಮಾಡಿದ್ದಾರೋ ಇಲ್ಲವೋ?) ಹೆಚ್ಚು ಪ್ರಚಾರ ಕೊಡುವುದು ಸರಿಯೇ? ಇದು ದಿನೇಶ್ ಅಮೀನ್ಮಟ್ಟುರವರು ಉತ್ತರಿಸಬೇಕಾಗಿರುವ ಮೊದಲನೇ ಪ್ರಶ್ನೆ.

ಇನ್ನು ವಿವೇಕಾನಂದರ ಬಗ್ಗೆ ಅವರು ಬರೆದಿರುವ ಬಹುತೇಕ ವಾಕ್ಯಗಳು ಅವರ ಮೇಲಿನ ಆರೋಪಗಳಂತೆಯೇ ಇದೆ. ಶೂದ್ರನಾಗಿ ಸನ್ಯಾಸಿಯಾದರೆಂದು ಹೇಳುವ ಅವರು ಶೂದ್ರರು ಸನ್ಯಾಸಿಯಾಗಬಾರದೆ?, ಸನಾತನಿಗಳು ಅವರದ್ದೇ ಆದ ಕಾರಣದಿಂದ ದ್ವೇಷಿಸುತ್ತಾರೆಂಬ ಮಾತ್ರಕ್ಕೆ ಮ್ಲೇಚ್ಚರ ಮನೆಯಲ್ಲಿ ವಿವೇಕಾನಂದರು ಊಟ ಮಾಡಿದ್ದು ದೊಡ್ಡ ಸಂಗತಿಯೇ?, ಹಿಂದೂ ಧರ್ಮದ ಮೂಢನಂಬಿಕೆ, ಢಾಂಬಿಕತನಗಳ ಬಗೆಗೆ ಠೀಕಿಸಿ ಸಮಾಜವನ್ನು ಜಾಗೃತ ಮಾಡಿದ್ದಕ್ಕೆ ಅವರು ಹಿಂದು ವಿರೋಧಿಯೇ?, ಹಸಿದವನಿಗೆ ಬೋಧನೆ ಹಿಡಿಸುವುದಿಲ್ಲ, ಬೌದ್ಧಿಕ ಜ್ಞಾನಾರ್ಜನೆಗೆ ಶಾರೀರಿಕ ಬಲವೂ ಬೇಕು ಎಂದು ಪ್ರತಿಪಾದಿಸಿದ್ದು, ಸಾಮರಸ್ಯದ ಬದುಕಿಗಾಗಿ ಭಂಗಿಗಳ ಜೊತೆ ಕೂತು ಊಟ ಮಾಡಬಲ್ಲೆ ಎಂದು ಮಹಾರಾಜರಿಗೆ ಹೇಳಿದ್ದು, ಕ್ರಿಸ್ತನ ಗುಣಗಳನ್ನು ಗೌರವಿಸಿದ್ದು ದಿನೇಶ್ರವರ ದೃಷ್ಟಿಯಲ್ಲಿ ತಪ್ಪಾಗಿದೆ. ಏಕೆಂದರೆ ವಿವೇಕಾನಂದರು ಹಿಂದೂ ಸನ್ಯಾಸಿ. ವಿವೇಕಾನಂದರು ಹಿಂದೂ ಸನ್ಯಾಸಿಗಳಾಗಿಲ್ಲದಿದ್ದರೆ ಈ ಮಾತು ಅವರಿಂದ ಬರುತ್ತಿತ್ತೇ?.

ಹಿಂದೂ ಧರ್ಮದ ಬ್ರಾಂಡ್ ಅಂಬಾಸಿಡರ್ ಎಂದು ವಿವೇಕಾನಂದರನ್ನು ಯಾರು ನಾಮಕರಣ ಮಾಡಿದ್ದಾರೆ? ಹಿಂದೂ ಧರ್ಮಕ್ಕೆ ಹಿಂದೂಧರ್ಮವೇ ಅಂಬಾಸಿಡರ್. ಯಾವುದೇ ಒಳಿತಾದ ಬದಲಾವಣೆಯನ್ನು ಸದಾ ಸ್ವೀಕರಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ.ಹಿಂದುವೇ ಅಲ್ಲದ ನಿವೇದಿತಾರನ್ನು
, ಹಿಂದುವೇ ಆದ ವಿವೇಕಾನಂದರನ್ನು ಸಮಾಜ ಒಪ್ಪಿಕೊಂಡಿದೆ, ಅಪ್ಪಿಕೊಂಡಿದೆ ಎಂಬ ಸಾಮಾನ್ಯ ಸಂಗತಿ ದಿನೇಶ್ರವರಿಗೆ ಅರಿವಿಲ್ಲದೆ ಇರಬಹುದು. ಇನ್ನು ಬುದ್ಧ, ಬಸವರನ್ನಾಗಲಿ, ವಿವೇಕಾನಂದ, ನಾರಾಯಣ ಗುರುಗಳನ್ನಾಗಲಿ ಅವರ ನಿಜವಾದ ಬದುಕನ್ನು ಅರಿತೇ ಜನತೆ ದೇವರನ್ನಾಗಿ ಮಾಡಿದ್ದಾರೆ. ಅವರ ಚಿಂತನೆಗಳು ಹುದುಗಿಹೋಗಿದ್ದರೆ ಬಸವ ಬುದ್ದರಾಗಲೀ, ವಿವೇಕಾನಂದ ನಾರಾಯಣಗುರುಗಳಾಗಲೀ ಹುಟ್ಟಿ ಹಲವಾರು ವರ್ಷಗಳಾದರೂ, ಸತ್ತು ನೂರಾರು ವರ್ಷಗಳಾದರೂ ಇನ್ನೂ ಅವರ ಹೆಸರು ಭಾರತೀಯ ಜನಮಾನಸದಲ್ಲಿ ಹೇಗೆ ಉಳಿಯುತ್ತಿತ್ತು? ದಿನೇಶ್ರವರೇ ಉತ್ತರಿಸಬೇಕು.

ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಖಾಸಗಿ ಬದುಕು ಎಂಬುದಿರುತ್ತದೆ. ಅದಕ್ಕೆ ಸಾಕಷ್ಟು ಆಧಾರಗಳಿರಬಹುದು. ಈ ಬದುಕಿನ ಬಗ್ಗೆ ನಿಜ ಸುಳ್ಳುಗಳು ಸೃಷ್ಟಿಯಾಗಿರಬಹುದು ಆದರೆ ಆ ವ್ಯಕ್ತಿಗಳ ಸಾಧನೆಗಿಂತ ಅವರ ಖಾಸಗಿ ಜೀವನಕ್ಕೆ ಅನಗತ್ಯ ಪ್ರಚಾರ ಕೊಡುವುದು ಅವಶ್ಯಕವೇ? ಅಥವಾ ಆ ಮಹಾನ್ ವ್ಯಕ್ತಿಗಳ ಖಾಸಗಿ ಬದುಕಿನ ವೈರುಧ್ಯಗಳ ನಡುವೆಯೂ ಮಾಡಿದ ಸಾಧನೆ ದೊಡ್ಡದಲ್ಲವೇ?. ಈ ಬಗ್ಗೆ ಪ್ರಜ್ಞಾವಂತರು ಚಿಂತಿಸಲೇಬೇಕಾಗಿದೆ.

ವಿವೇಕಾನಂದರು ಶಾಲಾ ಕಾಲೇಜುಗಳಲ್ಲಿ ಪಡೆದ ಅಂಕಗಳನ್ನು ದಿನೇಶ್ರವರು ಸಂಶೋದನೆ ಮಾಡಿ ಪ್ರಚುರಪಡಿಸಿದ್ದಾರೆ. ಅವರಿಗಿದ್ದ ಖಾಯಿಲೆಯನ್ನು ಕಂಡುಹಿಡಿದು ಅದರ ಮೇಲೆ ಬೆಳಕು ಚೆಲ್ಲಿದ್ದಾರೆ. ದಾಯಾದಿಗಳು ಆಸ್ತಿ ಕಬಳಿಸಿದ ಕಾರಣದಿಂದಾಗಿ ಇಡೀ ಸಂಸಾರದ ಹೊಣೆ ಹೊತ್ತು ಅನೇಕ ದಿನ ಉಪವಾಸ ಇದ್ದುದನ್ನು ಉಲ್ಲೇಖಿಸಿದ್ದಾರೆ.ಇದೆಲ್ಲದರ ನಡುವೆ ಹೆತ್ತ ತಾಯಿಗಿಂತ ಸಮಾಜ ಮುಖ್ಯ ಎಂದು ಸಮಾಜ ಸುಧಾರಣೆಗಾಗಿ ಸನ್ಯಾಸತ್ವ ತೆಗೆದುಕೊಂಡ ಬಗೆಗೂ ಬರೆದಿದ್ದಾರೆ. ಇವೆಲ್ಲವುಗಳ ನಡುವೆ ಬೆಳೆದ ನರೇಂದ್ರನಾಥ ವಿವೇಕಾನಂದ ಆಗಿದ್ದನ್ನು ದಿನೇಶ್ರವರು ಒಪ್ಪಿಕೊಂಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಕಡಿಮೆ ಅಂಕ ತೆಗೆದುಕೊಂಡ, ಹುಟ್ಟಿನಿಂದಲೇ ರೋಗಿಯಾಗಿದ್ದ, ಅವರಿವರ ಮನೆಯಲ್ಲಿ ಊಟ ಮಾಡುತಿದ್ದ, ಮೂವತ್ತೊಂದು ರೋಗಗಳಿಂದ ಬಳಲುತ್ತಿದ್ದ ವಿವೇಕಾನಂದರು ಜಗತ್ತಿನ ಎಲ್ಲಾ ಧರ್ಮಗಳನ್ನೂ ಅಧ್ಯಯನ ಮಾಡಿದ್ದರು, ಸಾವಿರಾರು ಶಿಷ್ಯರನ್ನು ಹೊಂದಿದ್ದರು, ರಾಮಕೃಷ್ಣ ಮಿಷನ್ ಸಂಘಟನೆಯನ್ನು ಬೃಹದಾಕಾರವಾಗಿ ಬೆಳೆಸಿದರು ಎಂದು ದಿನೇಶ್ ಒಪ್ಪಿಕೊಂಡಿದ್ದಾರೆ, ಇದೇ ದಿನೇಶ್ರವರು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ಸಂಗತಿ. ಹಾಗೂ ಸಮಾಧಾನದ ಸಂಗತಿಯೂ ಹೌದು.

ಇನ್ನು ಅಂಕಗಳನ್ನು ಕಡಿಮೆ ಪಡೆಯುವ, ಹುಟ್ಟು ರೋಗಿಯಾಗಿದ್ದ, ಹಲವು ಖಾಯಿಲೆಗಳು ಇವೆ ಎಂದು ಹೇಳುವ ವಿವೇಕಾನಂದರಿಗೆ ವಿಶಾಲವಾದ ಎದೆ, ಬಲಿಷ್ಟವಾದ ತೋಳುಗಳು, ಕಾಂತಿಯುತವಾದ ಕಣ್ಣುಗಳು ಇದ್ದವು ಎಂಬ ಸಂಗತಿಯ ಬಗ್ಗೆ ಮಾತ್ರ ದಿನೇಶ್ರವರು ಏಕೆ ವ್ಯಂಗವಾಡುತ್ತಾರೆ?

 

ವಿವೇಕಾನಂದರ ಬಗೆಗಿನ ಅನೇಕ ಸಂಗತಿಗಳು ದಿನೇಶ್ರವರಿಗೆ ಈಗ ಗೊತ್ತಾಗಿರಬಹುದು. ವ್ಯಕ್ತಿಯ ದೌರ್ಬಲ್ಯಗಳಿಗೆ, ಆ ವ್ಯಕ್ತಿಯ ವೈಯುಕ್ತಿಕ ಬದುಕಿನ ಘಟನೆಗಳಿಗೆ ನೀಡಬೇಕಾಗಿರುವ ಪ್ರಚಾರಕ್ಕಿಂತ ಅದೇ ವ್ಯಕ್ತಿಗಳು ಅವರ ಬದುಕಿನ ವೈಯಕ್ತಿಕ ದೌರ್ಬಲ್ಯಗಳನ್ನೆಲ್ಲಾ ಮೀರಿ, ಅವರಿಗಿರುವ ರೋಗರುಜಿನಗಳನ್ನೆಲ್ಲಾ ಮೆಟ್ಟಿ ಸಮಾಜದ ಹಿತಕ್ಕಾಗಿ ತಮ್ಮನ್ನು ತಾವು ಸಮಪರ್ಿಸಿಕೊಂಡರಲ್ಲಾ! ಆ ಸಂಗತಿಗೆ ಹೆಚ್ಚಿನ ಪ್ರಚಾರ, ಗೌರವ, ಮಾನ್ಯತೆ ನೀಡಬೇಕಾಗಿದೆ. ಭಾರತ ಸೇರಿದಂತೆ ಇಡೀ ವಿಶ್ವವು ವಿವೇಕಾನಂದರನ್ನು ನೋಡುತ್ತಿರುವುದು ಈ ದೃಷ್ಟಿಯಿಂದಲೇ. ಅದ್ಕಕಾಗಿಯೇ ಅವರು ಇಂದಿಗೂ ಪೂಜ್ಯ, ಇಂದಿಗೂ ಮಾನ್ಯ.

ಕಡೇ ಮಾತು: ವಿವೇಕಾನಂದರ ಬಗೆಗಿನ ಜೀವನದ ಮತ್ತೊಂದು ಮುಖವನ್ನು ಅನಾವರಣ ಮಾಡಿರುವ ದಿನೇಶ್ರವರು ಪ್ರಪಂಚದಲ್ಲಿ ಇದೇ ರೀತಿಯ ಅನೇಕ ಸಾಧಕರಿದ್ದಾರೆ. ಈ ಸಾಧಕರ ಸಾಧನೆಗಳಿಗಿಂತ ಅವರ ವೈಯಕ್ತಿಕ ಬದುಕನ್ನೇ ಪ್ರಚುರ ಪಡಿಸುವ ಕಾಯಕವನ್ನು ದಿನೇಶ್ರವರು ಮುಂದುವರೆಸಲಿ. ಏಕೆಂದರೆ ಸಾಧಕರ ಸಾಧನೆಯ ಚಚರ್ೆಗೆ ಹೆಚ್ಚಿನ ಅವಕಾಶ ಸಿಗುವುದೂ, ವಿವೇಕಾನಂದರ 150ನೇ ವರ್ಷದ ಜನ್ಮದಿನಾಚರಣೆಯ ಸಂದರ್ಭದಲ್ಲಿ ಮತ್ತಷ್ಠು ಜನರು ಅವರನ್ನು ಸ್ಮರಿಸುವಂತಾಗುವುದೂ ಇಂತಹ ಲೇಖನಗಳಿಂದಲೇ, ಧನ್ಯವಾದಗಳು.


 • ಬಿದರೆ ಪ್ರಕಾಶ್, ಸುವಿರಾಜ, ಬೈರವೇಶ್ವರ ಕಾಲೇಜು ಹಿಂಭಾಗ, ಸಿದ್ದಾರ್ಥನಗರ, ತುಮಕೂರು ತಾ.

 

ಪ್ರತಿಕ್ರಿಯಿಸಿ (+)