ಶನಿವಾರ, ಮೇ 8, 2021
19 °C

16 ಲಕ್ಷ ನಗದು ವಶ: 54 ಜನರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಪಟ್ಟಣದ ದೇವನಹಳ್ಳಿ-ಸೂಲಿಬೆಲೆ ರಸ್ತೆಯಲ್ಲಿರುವ ಕೆ.ಆರ್.ಎಂ. ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ಪೊಲೀಸರು ಮಂಗಳವಾರ ಹಠಾತ್ ದಾಳಿ ನಡೆಸಿ 54 ಜನರನ್ನು ಬಂಧಿಸಿದ್ದು ಅವರಿಂದ ಸುಮಾರು 16 ಲಕ್ಷ ರೂಪಾಯಿಗಳಿಗೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆದಾಳಿ ವೇಳೆ ಜೂಜಾಟದಲ್ಲಿ ತೊಡಗಿದ್ದ 54 ಜನರನ್ನು ಬಂಧಿಸಲಾಗಿದ್ದು ಅವರ ಬಳಿಯಿದ್ದ  16 ಲಕ್ಷದ 7 ಸಾವಿರ ರೂಪಾಯಿಗಳ ಬೃಹತ್ ನಗದು ಹಣ ಮತ್ತು 40 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ಗ್ರಾಮಾಂತರ ಎಸ್.ಪಿ. ಪ್ರಕಾಶ್ ನೇತೃತ್ವದಲ್ಲಿ ಮಂಗಳವಾರ ಮಧ್ಯಾಹ್ನ ಈ ಕಾರ್ಯಾಚರಣೆ ನಡೆಸಲಾಯಿತು.ಬಂಧಿತರೆಲ್ಲರೂ ಹೆಚ್ಚಿನವರು ಆಂಧ್ರಪ್ರದೇಶ, ಹುಬ್ಬಳಿ, ಧಾರವಾಡ, ಬಳ್ಳಾರಿ, ಬಿಜಾಪುರ, ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರದ ಸುತ್ತಮುತ್ತಲಿನವರು ಎನ್ನಲಾಗಿದೆ.ಆಂಧ್ರಪ್ರದೇಶದ ಪುಲಿವೆಂದಲ ನಿವಾಸಿಗಳಾದ ನರಸಾ ರೆಡ್ಡಿ ಮತ್ತು ಶ್ರೀನಿವಾಸ್ ಮತ್ತು ದೇವನಹಳ್ಳಿ ನವೀನ್ ಎಂಬುವರು ಕಳೆದ ಒಂದು ತಿಂಗಳಿನಿಂದಲೂ ಇಲ್ಲಿ ಜೂಜು ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಚನ್ನರಾಯಪಟ್ಟಣ ಹೋಬಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಎಸ್.ಪಿ. ಪ್ರಕಾಶ್ ಸುದ್ದಿಗಾರರೊಂದಿಗೆ ಮಾತನಾಡಿ, `ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ.ಇಲ್ಲಿ ಒಂದು ತಿಂಗಳಿನಿಂದ ಅಂದರ್ ಬಾಹರ್ ಇಸ್ಪೀಟ್ ಆಟದ ಜೂಜು ನಡೆಯುತ್ತಿತ್ತು. ಇಬ್ಬರು ಡಿವೈಎಸ್‌ಪಿ, ನಾಲ್ವರು ಕ್ರೈಂ ಇನ್ಸ್‌ಪೆಕ್ಟರ್‌ಗಳು , 40  ಕಾನ್ಸ್‌ಟೇಬಲ್‌ತಂಡವು ಈ ಜೂಜು ಅಡ್ಡೆ ಮೇಲೆ ದಾಳಿ ನಡೆಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.