ಗುಲ್ಬರ್ಗ: 1952 ರಿಂದ 2009ರ ವರೆಗೆ ನಡೆದ 15 ಲೋಕಸಭಾ ಚುನಾ ವಣೆಗಳಲ್ಲಿ ಗುಲ್ಬರ್ಗ ಮತ ಕ್ಷೇತ್ರದಿಂದ 1996ರಲ್ಲಿ ದಾಖಲೆ 19 ಅಭ್ಯರ್ಥಿ ಗಳು ಕಣದಲ್ಲಿ ಉಳಿಯುವ ಮೂಲಕ ಚುನಾವಣೆ ಕಾವು ಹೆಚ್ಚಿಸಿದ್ದರು.

1952 ರಲ್ಲಿ 2, 1957ರಲ್ಲಿ 5, 1962ರಲ್ಲಿ 2, 1967 ಹಾಗೂ 1971ರಲ್ಲಿ 4, 1977ರಲ್ಲಿ 3, 1980ರಲ್ಲಿ 6, 1984ರಲ್ಲಿ 9, 1989ರಲ್ಲಿ 11, 1995ರಲ್ಲಿ 15, 1996ರಲ್ಲಿ 19, 1998ರಲ್ಲಿ 8, 1999ರಲ್ಲಿ 5, 2004ರಲ್ಲಿ 11 ಹಾಗೂ 2009ರಲ್ಲಿ 10 ಅಭ್ಯರ್ಥಿ ಗಳು ಅದೃಷ್ಟ ಬಯಸಿ ಕಣಕ್ಕೆ ಇಳಿದಿ ದ್ದರು. ಆದರೆ, ಇಬ್ಬರು–ಮೂವರು ಘಟಾನುಘಟಿಗಳನ್ನು ಹೊರತುಪಡಿಸಿ ದರೆ ಬಹುತೇಕರು ಪಕ್ಷೇತರ ಅಭ್ಯರ್ಥಿಗಳಾಗಿದ್ದರು.

ಏಕೈಕ ಮಹಿಳೆ: 1952 ರಿಂದ 2009ರ ವರೆಗೆ ನಡೆದ 15 ಲೋಕಸಭಾ ಚುನಾವಣೆಗಳಲ್ಲಿ ಗುಲ್ಬರ್ಗ ಮತ ಕ್ಷೇತ್ರದಲ್ಲಿ ಇದುವರೆಗೆ 112 ಅಭ್ಯರ್ಥಿ ಗಳು ಸ್ಪರ್ಧಿಸಿದ್ದಾರೆ. ಈ ಪೈಕಿ ಮಹಿಳಾ ಅಭ್ಯರ್ಥಿ ಇದ್ದದ್ದು ಒಬ್ಬರು ಮಾತ್ರ ಎಂಬುದು ಗಮನಾರ್ಹ. 1991ರಲ್ಲಿ ಸುಜಾತಾ ಪರಮೇಶ್ವರ ಜಾನೆ ಎಂಬ ಮಹಿಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 1,284 (ಶೇ 0.31) ಮತ ಪಡೆದು ಪರಾಭವಗೊಂಡಿದ್ದರು.
1991ರಲ್ಲಿ ಬಿಜೆಪಿ ಪ್ರವೇಶ: 1991ರಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಚುನಾವಣಾ ಕಣಕ್ಕೆ ಧುಮುಕಿತು.

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸವರಾಜ ಪಾಟೀಲ್ ಸೇಡಂ ಅವರು 1,20,268 ಮತ ಗಳನ್ನು ಪಡೆದು, ಕಾಂಗ್ರೆಸ್ನ ಬಿ.ಜಿ.ಜವಳಿ (1,82,351) ವಿರುದ್ಧ ಪರಾಭವಗೊಂಡಿದ್ದರು. ಅದೇ ರೀತಿ 1996ರಲ್ಲಿ ನಡೆದ ಚುನಾವಣೆಯಲ್ಲಿ ಬಸವರಾಜ ಪಾಟೀಲ್ ಸೇಡಂ ಅವರು 1,87,976 ಮತಗಳನ್ನು ಪಡೆದಿದ್ದರೂ, ಜನತಾ ಪಕ್ಷದ ಅಭ್ಯರ್ಥಿ ಖಮರುಲ್ ಇಸ್ಲಾಂ (2,03,521) ವಿರುದ್ಧ ಸೋಲು ಅನುಭವಿಸಿದ್ದರು. ಆದರೆ, 1991ರಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಬಿ.ಜಿ.ಜವಳಿ ಈ ಚುನಾವಣೆಯಲ್ಲಿ ಕೇವಲ 1,32,383 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದಿದ್ದರು.

ಬಿಜೆಪಿಗೆ ಒಲಿದ ಕ್ಷೇತ್ರ: 1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 3,28,982 ಮತಗಳನ್ನು ಪಡೆಯುವ ಮೂಲಕ ಬಸವರಾಜ ಪಾಟೀಲ್ ಸೇಡಂ ಅವರು ಗುಲ್ಬರ್ಗ ಮತ ಕ್ಷೇತ್ರದಲ್ಲಿ ‘ಕಮಲ’ವನ್ನು ಅರಳಿಸು ವಲ್ಲಿ ಯಶಸ್ವಿಯಾಗಿದ್ದರು. ಖಮರುಲ್ ಇಸ್ಲಾಂ ಅವರು 2ನೇ ಸ್ಥಾನ, ಬಿ.ಜಿ.ಜವಳಿ 3ನೇ ಸ್ಥಾನ ಪಡೆದಿದ್ದರು.

1999ರಲ್ಲಿ ಜೆಡಿಎಸ್ ಕಣಕ್ಕೆ: 1999ರಲ್ಲಿ ಜೆಡಿಎಸ್ ತನ್ನ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತು. ಮೊದಲ ಬಾರಿಗೆ ಸ್ಪರ್ಧಿಸಿದ್ದ ಮಲ್ಲೇಶಪ್ಪ ಯಾವೂರ ಅವರು 65,756 ಮತಗಳನ್ನು ಪಡೆದು ಕಾಂಗ್ರೆಸ್ನ ಇಕ್ಬಾಲ್ ಅಹಮ್ಮದ್ ಸರಡಗಿ (3,52,359) ವಿರುದ್ಧ ಸೋಲನುಭವಿಸಿದ್ದರು. 2004ರಲ್ಲಿ ವಿಠಲ ಹೇರೂರ (1,89,001), 2009ರಲ್ಲಿ ಬಾಬು ಹೊನ್ನ ನಾಯ್ಕ್ ಅವರು (27,130) ಜೆಡಿಎಸ್ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಪ್ರಚಾರ ಆರಂಭ: ಈ ಬಾರಿಯ ಚುನಾವಣೆಗೆ ‘ಅಖಾಡ’ ಈಗಷ್ಟೇ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಜೆಡಿಎಸ್, ಆಮ್ ಆದ್ಮಿ ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಒಂದೆರಡು ದಿನಗಳಲ್ಲಿ ಅಂತಿಮವಾ ಗಲಿದ್ದು, ಪ್ರಚಾರ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.