ಭಾನುವಾರ, ಏಪ್ರಿಲ್ 11, 2021
25 °C

2ನೇ ರಾಜಧಾನಿ: 30ರಂದು ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದಾವಣಗೆರೆಯನ್ನು ರಾಜ್ಯದ 2ನೇ ರಾಜಧಾನಿ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಜೂನ್ 30ರಂದು ಎಲ್ಲ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ಶನಿವಾರ ಶಿವಯೋಗಿ ಮಂದಿರದಲ್ಲಿ ಏರ್ಪಡಿಸಿದ್ದ `ದಾವಣಗೆರೆ 2ನೇ ರಾಜಧಾನಿ ಹೋರಾಟ ಸಮಿತಿ~ ಸಭೆಯಲ್ಲಿ ನಿರ್ಧರಿಸಲಾಯಿತು.

3ನೇ ಹಂತದ ಹೋರಾಟದ ಕಾರ್ಯಕ್ರಮವಾಗಿ, ಮೆರವಣಿಗೆ ನಡೆಸಲಾಗುವುದು. ಸಮಿತಿಯ ಪದಾಧಿಕಾರಿಗಳು, ರೈತ ಪರ, ಕನ್ನಡಪರ, ವಿದ್ಯಾರ್ಥಿ, ವಕೀಲರು, ಮಹಿಳಾ ಸಂಘಟನೆಗಳು, ನಗರಪಾಲಿಕೆಯ ಹಾಲಿ, ಮಾಜಿ ಸದಸ್ಯರು, ಮೇಯರ್‌ಗಳು ಪಾಲ್ಗೊಳ್ಳುವಂತೆ ಕೋರಬೇಕು. ಜನರನ್ನು ಸಂಘಟಿಸಲು ಭಾರಿ ಪ್ರಮಾಣದಲ್ಲಿ ಕರಪತ್ರಗಳನ್ನು ಮುದ್ರಿಸಿ ನಗರ ಮತ್ತು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಹಂಚಲು ಹಾಗೂ ಪಕ್ಕದ ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಕೊಪ್ಪಳ, ಧಾರವಾಡ, ವಿಜಾಪುರ, ಬೀದರ್, ಕಾರವಾರ ಮತ್ತು ಗುಲ್ಬರ್ಗ ಜಿಲ್ಲೆಗಳ ಪ್ರಮುಖರನ್ನು ಕರೆತರಲು ತೀರ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ, ಕರಿಕುಂಟೆ ವೀರಭದ್ರಪ್ಪ, ಮಹಾದೇವಮ್ಮ, ಕೆ.ಜಿ. ಶರಣಪ್ಪ, ಅರುಣ್‌ಕುಮಾರ್ ಕುರುಡಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.