ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ (ಬಿಬಿಎಂಪಿ) 2011ರ ಜನಗಣತಿ ಪ್ರಕಾರವೇ ಮೀಸಲು ಪಟ್ಟಿ ಪ್ರಕಟಿಸಲು ನಾವು ಸಿದ್ಧ’ ಎಂದು ಸರ್ಕಾರ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ.

ಬಿಬಿಎಂಪಿಗೆ ಸೂಕ್ತ ಸಮಯದಲ್ಲಿ ಚುನಾವಣೆ ನಡೆಸುವಂತೆ ನಿರ್ದೇಶಿಸಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯ ಪೀಠದ ಆದೇಶದಲ್ಲಿ ಮೀಸಲಾತಿಗೆ ನ್ಯಾಯ ಸಿಕ್ಕಿಲ್ಲ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡ ಆಯೋಗದ ಸದಸ್ಯ ಕಾರ್ಯದರ್ಶಿ ರಿಟ್ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಎಸ್.ಚೌಹಾಣ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಹಾಜರಾದ ಹೆಚ್ಚು
ವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಶುಕ್ರವಾರ ಹೈಕೋರ್ಟ್ಗೆ ಈ ವಿವರಣೆ ನೀಡಿದರು.

ತಾಳ– ನೃತ್ಯ:  ‘ಸೂಕ್ತ ಸಮಯದಲ್ಲಿ ಚುನಾವಣೆ ನಡೆಸಲು ನೀವು ಸಿದ್ಧವಾಗಲಿಲ್ಲ. ಈ ಸಂಬಂಧ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಹೋದಿರಿ. ಅಲ್ಲಿಯೂ ನಿಮಗೆ ತೃಪ್ತಿ ಆಗಲಿಲ್ಲ. ಇದನ್ನೂ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಹೋಗಿ ಸಮಯಾವಕಾಶ ಪಡೆದಿರಿ. ಈಗ ನೋಡಿದರೆ ಮೀಸಲು ತಕರಾರಿನಲ್ಲಿ 2011ರ ಜನಗಣತಿ ಪ್ರ್ರಕಾರವೇ ಚುನಾವಣೆ ನಡೆಸುತ್ತೇವೆ ಎಂದು ಹೇಳುತ್ತಿದ್ದೀರಿ. ಯಾಕೆ ಹೀಗೇ..? ಎಲ್ಲದಕ್ಕೂ ನಾವು ತಾಳ ಹಾಕಬೇಕು, ನೀವು ಕುಣಿಯಬೇಕು... ಆಗಾಗ್ಗೆ ಹೊಸ ಹೊಸ ರಾಗಗಳನ್ನೂ ಹುಡುಕಬೇಕೇ... ಏನಿದು’ ಎಂದು ನ್ಯಾಯಮೂರ್ತಿ ಚೌಹಾಣ್ ಅವರು ಪೊನ್ನಣ್ಣ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪೊನ್ನಣ್ಣ, ‘ಇಲ್ಲ, ಇಲ್ಲ. ಅಂದು ನಾಗರತ್ನ ಅವರ ಪೀಠದ ಮುಂದೆ ವಿಚಾರಣೆ ನಡೆದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮೀಸಲು ಪಟ್ಟಿಯನ್ನು ಹೊಸ ಜನಗಣತಿ ಪ್ರಕಾರ ಸಿದ್ಧಪಡಿಸಲು ಕನಿಷ್ಠ ಮೂರ್ನಾಲ್ಕು ತಿಂಗಳಾದರೂ ಬೇಕು’ ಎಂದರು.

‘ಆದರೆ ಈಗ ಸಮಯ ಸಿಕ್ಕಿದೆ. ಹಾಗಾಗಿ ನಾವು 2011ರ ಜನಗಣತಿ ಪ್ರಕಾರವೇ ಹೊಸ ಮೀಸಲು ಪಟ್ಟಿ ಪ್ರಕಟಿಸಲು ಸಿದ್ಧವಿದ್ದೇವೆ. ಮತ್ತೆ ನಾವು ಹೊಸ ಅರ್ಜಿ ಹಾಕಿಕೊಂಡು ಏಕಸದಸ್ಯ ಪೀಠದ ಮುಂದೆ ಹೋಗುವ ಬದಲಿಗೆ ಇದೇ ಅರ್ಜಿದಾರರ ಮನವಿ ಅನುಸರಿಸಿ ಇಲ್ಲಿಯೇ ಈ ಅಂಶವನ್ನು ತಿದ್ದುಪಡಿ ಮಾಡಿ ನಿರ್ದೇಶನ ನೀಡಿ’ ಎಂದು ಪೊನ್ನಣ್ಣ ಮನವಿ ಮಾಡಿದರು.

ಇದನ್ನು ನಿರಾಕರಿಸಿದ ಚೌಹಾಣ್ ಅವರು, ‘ಇಲ್ಲ. ನೀವು ಪುನಃ ನಾಗರತ್ನ ಅವರ ಏಕಸದಸ್ಯ ಪೀಠದ ಮುಂದೆಯೇ ಹೋಗಿ ಹೊಸ ಅರ್ಜಿ ಸಲ್ಲಿಸಿ. ಅಂತೆಯೇ ನೀವು ಏನೆಲ್ಲಾ ತಯಾರಿ ನಡೆಸಿದ್ದೀರಿ ಎಂಬ ಬಗ್ಗೆ ಮುಚ್ಚಳಿಕೆ ಬರೆದುಕೊಡಿ’ ಎಂದು ಸೂಚಿಸಿ ಅರ್ಜಿ ವಿಲೇವಾರಿ ಮಾಡಿದರು. ಅರ್ಜಿದಾರರ ಪರ ಹಾಜರಾಗಿದ್ದ ಸುಪ್ರೀಂಕೋರ್ಟ್ನ ಹಿರಿಯ ವಕೀಲ ಗೋಪಾಲ ಸುಬ್ರಮಣಿಯನ್ ಅವರು, ‘2001 ಮತ್ತು 2011ರ ಜನಗಣತಿಗೆ ಸಾಕಷ್ಟು ಅಂತರವಿದೆ. 2013ರಲ್ಲಿ ಪ್ರಕಟವಾಗಿರುವ ಹೊಸ ಜನಗಣತಿ ಅನುಸಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಶೇ48ರಷ್ಟು ಹೆಚ್ಚಳವಾಗಿದೆ. ಒಂದು ವೇಳೆ 2001ರ ಜನಗಣತಿ ಆಧರಿಸಿ ಮೀಸಲು ಪ್ರಕಟಿಸಿದರೆ ಅದು ಸಂವಿಧಾನದ ಆಶಯಕ್ಕೆ ಅಪಚಾರ ಬಗೆದಂತಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯ ಚುನಾವಣಾ ಆಯೋಗದ ಪರ ವಕೀಲ ಕೆ.ಎನ್.ಫಣೀಂದ್ರ ಹಾಜರಾಗಿದ್ದರು.

ಕಾನೂನು ಪರಿಧಿಯಿಂದ ಆಚೆಗೆ ವರ್ತಿಸುವ ಯಾವುದೇ ಪ್ರಮೇಯ ರಾಜ್ಯ ಸರ್ಕಾರಕ್ಕಿಲ್ಲ. ಸರ್ಕಾರ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆಯುತ್ತಿದೆ
ಎ.ಎಸ್.ಪೊನ್ನಣ್ಣ, ಹೆಚ್ಚುವರಿ ಅಡ್ವೊಕೇಟ್ ಜನರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.