ಬುಧವಾರ, ಏಪ್ರಿಲ್ 21, 2021
30 °C

25 ಪುರಸಭೆ ಮೇಲ್ದರ್ಜೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಾಜ್ಯದ ಮೂರು ನಗರಸಭೆಗಳು ಹಾಗೂ 25 ಪುರಸಭೆಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ನಗರಾಭಿವೃದ್ಧಿ ಮತ್ತು ಕಾನೂನು ಸಚಿವ ಎಸ್. ಸುರೇಶಕುಮಾರ್ ಅವರು ಶನಿವಾರ ತಿಳಿಸಿದರು.ತುಮಕೂರು, ವಿಜಾಪುರ ಮತ್ತು ಶಿವಮೊಗ್ಗ ನಗರಸಭೆಗಳನ್ನು ಜನಸಂಖ್ಯೆ ಆಧಾರದಲ್ಲಿ ಮಹಾನಗರಪಾಲಿಕೆ ಮಾಡುವ ಚಿಂತನೆ ನಡೆದಿದೆ. 2011ರ ಜನಗಣತಿ ಮಾಹಿತಿ ಬಹಿರಂಗಗೊಂಡ ನಂತರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಜತೆಗೆ 25 ಪುರಸಭೆಗಳನ್ನು ನಗರಸಭೆಗಳನ್ನಾಗಿಸುವ ಪ್ರಸ್ತಾವವೂ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದೊಂದಿಗೆ ಸರ್ಕಾರ ಚರ್ಚೆ ನಡೆಸಿದೆ. ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ, ಮೀಸಲಾತಿ ನಿಗದಿಗೆ ಸಂಬಂಧಿಸಿದ ಪ್ರಕ್ರಿಯೆಯಿಂದಾಗಿ ಚುನಾವಣೆ ಘೋಷಣೆ ವಿಳಂಬವಾಗುವ ಸಾಧ್ಯತೆ ಇದೆ ಎಂದರು. ಸಚಿವಾಲಯಗಳನ್ನು `ಸಕಾಲ~ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಆಫ್ಘಾನಿಸ್ತಾನದ ನಿಯೋಗವೊಂದು ಈ ಯೋಜನೆಯನ್ನು ತಮ್ಮ ದೇಶದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸುತ್ತಿದೆ. ಬಾಂಗ್ಲಾದೇಶ ಕೂಡ ಯೋಜನೆಯ ಪಡೆದಿದೆ. ಒಟ್ಟು 265 ಸೇವೆಗಳನ್ನು ಯೋಜನೆಗೆ ಸೇರಿಸಲಾಗುವುದು  ಎಂದು ಸುರೇಶಕುಮಾರ್ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.