ಯಾದಗಿರಿ: ಬೇಸಿಗೆ, ಬರದ ಛಾಯೆಯಲ್ಲಿ ಜಿಲ್ಲೆ ನರಳುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಬೋರ್ವೆಲ್, ಬಾವಿಗಳಿಂದ ನೀರು ತರಲು ಜನರ ಹರಸಾಹಸ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ನೀರಿನ ಕರ ವಸೂಲಿಯೂ ಆಮೆ ಗತಿಯಲ್ಲಿ ನಡೆಯುತ್ತಿದ್ದು, ಒಂದೊಂದು ತಾಲ್ಲೂಕಿನಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿದುಕೊಂಡಿದೆ.

ಈಗಾಗಲೇ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಂದ ನೀರಿನ ತೆರಿಗೆ ವಸೂಲಾತಿಯೂ ನಿಧಾನಗತಿಯಲ್ಲಿ ಆಗುತ್ತಿದ್ದು, ಯಾದಗಿರಿ ತಾಲ್ಲೂಕು ಪಂಚಾಯಿತಿಯೂ ಇದಕ್ಕೆ ಹೊರತಾಗಿಲ್ಲ. ಬರೋಬ್ಬರಿ ರೂ.2.90 ಕೋಟಿ ನೀರಿನ ತೆರಿಗೆ ಬಾಕಿ ಉಳಿದಿದ್ದು, ಅಧಿಕಾರಿಗಳಿಗೆ ದಿಕ್ಕು ತೋಚದಂತಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ ಒಟ್ಟು 39 ಗ್ರಾಮ ಪಂಚಾಯಿತಿಗಳಿದ್ದು, ಒಂದೊಂದು ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠವೆಂದರೂ ರೂ.5 ಲಕ್ಷದಷ್ಟು ಬಾಕಿ ಉಳಿದುಕೊಂಡಿದೆ. 2011 ರ ಮಾರ್ಚ್ ಅಂತ್ಯಕ್ಕೆ ಒಟ್ಟು ರೂ.2.59 ಕೋಟಿ ಬಾಕಿ ಉಳಿದಿತ್ತು. ಅಲ್ಲಿಂದ ಇಲ್ಲಿಯವರೆಗೆ ಮತ್ತೆ ರೂ.68 ಲಕ್ಷ ನೀರಿನ ತೆರಿಗೆ ಆಗಿದೆ. ಒಟ್ಟಾರೆ ರೂ.3.27 ಕೋಟಿ ನೀರಿನ ತೆರಿಗೆ ಬಾಕಿ ಉಳಿದಿದ್ದು, ಇದರಲ್ಲಿ ಕೇವಲ ರೂ.36.96 ಲಕ್ಷ ಮಾತ್ರ ವಸೂಲಿ ಆಗಿದೆ.

ಚಂಡ್ರಕಿಯಲ್ಲಿ ಅತಿ ಹೆಚ್ಚು: ತಾಲ್ಲೂಕಿನ ಚಂಡ್ರಕಿ ಗ್ರಾಮ ಪಂಚಾಯಿತಿಯಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿದಿದೆ. ಒಟ್ಟು ರೂ.21.21 ಲಕ್ಷ ತೆರಿಗೆ ಬಾಕಿ ಉಳಿದೆ. ಎರಡನೇ ಸ್ಥಾನದಲ್ಲಿ ಕಡೇಚೂರು ಗ್ರಾಮ ಪಂಚಾಯಿತಿ ಇದ್ದು, ರೂ.17.59 ಲಕ್ಷ ಬಾಕಿ ಉಳಿಸಿಕೊಳ್ಳಲಾಗಿದೆ. ಮೂರನೇ ಸ್ಥಾನದಲ್ಲಿ ಠಾಣಗುಂದಿ ಗ್ರಾಮ ಪಂಚಾಯಿತಿ ಇದ್ದು, ಒಟ್ಟು ರೂ.17.28 ಲಕ್ಷ ನೀರಿನ ತೆರಿಗೆ ಬಾಕಿ ಇದೆ.

ಪ್ರಮುಖವಾಗಿ ಅಜಲಾಪುರ ಗ್ರಾಮ ಪಂಚಾಯಿತಿಯಲ್ಲಿ ರೂ.13.31 ಲಕ್ಷ, ಮೋಟ್ನಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರೂ.12.56 ಲಕ್ಷ, ಮಲ್ಹಾರ ಗ್ರಾಮ ಪಂಚಾಯಿತಿಯಲ್ಲಿ ರೂ.11.69 ಲಕ್ಷ, ಕೊಂಕಲ್ ಗ್ರಾಮ ಪಂಚಾಯಿತಿಯಲ್ಲಿ ರೂ.10.95 ಲಕ್ಷ, ಕಿಲ್ಲನಕೇರಾ ಗ್ರಾಮ ಪಂಚಾಯಿತಿಯಲ್ಲಿ ರೂ.10.54 ಲಕ್ಷ ನೀರಿನ ತೆರಿಗೆ ಬಾಕಿ ಉಳಿದಿದೆ.

ನೀರಿಲ್ಲದಿದ್ದರೂ ತೆರಿಗೆ: ಒಂದೆಡೆ ತಾಲ್ಲೂಕು ಪಂಚಾಯಿತಿ ದಾಖಲೆಗಳ ಪ್ರಕಾರ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ತೆರಿಗೆ ಬಾಕಿ ಬೃಹದಾಕಾರವಾಗಿ ಬೆಳೆಯುತ್ತಿದ್ದು, ನೀರನ್ನೇ ಕೊಡದೇ ಇದ್ದ ಮೇಲೆ ತೆರಿಗೆ ಪಾವತಿಸುವುದು ಎಲ್ಲಿಂದ ಬಂತು ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.

ನಳದಲ್ಲಿ ನೀರು ಹರಿಯದಿದ್ದರೂ, ಗ್ರಾಮ ಪಂಚಾಯಿತಿಗಳ ದಾಖಲೆಗಳಲ್ಲಿ ನೀರಿನ ತೆರಿಗೆ ಮಾತ್ರ ಏರುತ್ತಲೇ ಹೋಗುತ್ತದೆ. ಜನರು ನಿತ್ಯವೂ ದೂರದಿಂದ ಕೊಡ ಹೊತ್ತು ನೀರು ತರುವುದು ಅನಿವಾರ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಸಿಗದೇ ಇದ್ದರೂ ತೆರಿಗೆ ಕಟ್ಟುವ ಅನಿವಾರ್ಯತೆಯನ್ನು ಗ್ರಾಮಸ್ಥರು ಎದುರಿಸುವಂತಾಗಿದೆ ಎಂದು ಗ್ರಾಮೀಣ ಜನರು ಹೇಳುತ್ತಿದ್ದಾರೆ.

ಹಳ್ಳಿ ಮಂದಿ ಒಂದ ದಿನಾನೂ ಮನ್ಯಾಗಿನ ನಳದ್ಲೆ ನೀರ ತುಂಬಿದ್ದ ನಮಗ ಗೊತ್ತಿಲ್ಲ. ಹಿಂಗಿದ್ರು, ನೀರಿನ ಟ್ಯಾಕ್ಸ್ ಕಟ್ಟಬೇಕ ಅಂತ ಪಂಚಾಯಿತಿ ಜನಾ ಹೇಳ್ತಾರ. ಅಲ್ರಿ ನಮಗ ನೀರ ಸಿಕ್ಕಿಲ್ಲ. ಸಿಗದೇ ಇರೋ ಸೌಲಭ್ಯಕ್ಕ ಟ್ಯಾಕ್ಸ್ ಕಟ್ಟ ಅಂದ್ರ ಎಲ್ಲಿ ನ್ಯಾಯರಿ ಎಂದು ಹಳಿಗೇರಾದ ದೇವಿಂದ್ರಪ್ಪ ಪ್ರಶ್ನಿಸುತ್ತಾರೆ.

ಗ್ರಾಮೀಣ ಪ್ರದೇಶದ ಜನರಿಗೆ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದ ಗ್ರಾಮಗಳ ಜನರು ಕೆರೆ, ಹಳ್ಳ, ಬಾವಿ, ಬೋರವೆಲ್ಗಳಿಂದ ನೀರು ತಂದು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾರೆ. ನೀರು ಕೊಡಿ ಎಂದು ದುಂಬಾಲು ಬಿದ್ದರೂ, ಕಿವಿಗೆ ಹಾಕಿಕೊಳ್ಳದ ಅಧಿಕಾರಿಗಳು, ನೀರಿನ ತೆರಿಗೆ ವಸೂಲಿ ಮಾಡಲು ಯಾವ ನೈತಿಕತೆಯಿಂದ ಬರುತ್ತಾರೆ ಎಂಬ ಪ್ರಶ್ನೆಯನ್ನು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಯುವ ವಿಭಾಗದ ತಾಲ್ಲೂಕು ಘಟಕ ಅಧ್ಯಕ್ಷ ನಿಂಗು ಜಡಿ ಪ್ರಶ್ನಿಸುತ್ತಾರೆ.

ಪಂಚಾಯಿತಿಗಳಿಗೆ ತೆರಿಗೆ ಕೊಡಬೇಕು ನಿಜ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ. ಆದರೆ ಸೌಲಭ್ಯವನ್ನೇ ಕೊಡದೇ ಕೇವಲ ತೆರಿಗೆ ನೀಡಿ ಎಂದರೆ ಅದು ಸರಿಯಲ್ಲ. ಜನರು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದ್ದು, ನೀರು ಕೊಡದೇ ತೆರಿಗೆ ವಸೂಲಿ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳುತ್ತಾರೆ.

ಅತ್ತ ನೀರನ್ನು ಕೊಡದೇ, ಇತ್ತ ತೆರಿಗೆಯ ಭಾರವನ್ನು ಹೆಚ್ಚಿಸುತ್ತಿರುವ ಅಧಿಕಾರಿಗಳು ಮಾತ್ರ ದಾಖಲೆಗಳನ್ನು ಮಂಡಿಸಿ, ಸುಮ್ಮನಾಗುತ್ತಿದ್ದು, ಇದಕ್ಕೊಂದು ಪರಿಹಾರ ಕಲ್ಪಿಸುವ ಅವಶ್ಯಕತೆ ಇದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.