ಗುರುವಾರ , ಮೇ 6, 2021
31 °C

44 ಸ್ಫೋಟಕ ನಿಷ್ಕ್ರಿಯಗೊಳಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ (ಐಎಎನ್‌ಎಸ್): ಜಾರ್ಖಂಡ್‌ನಲ್ಲಿ ಭಾನುವಾರದಂದು ಸ್ಫೋಟಗೊಳ್ಳುವಂತೆ ನಕ್ಸಲರು ನೆಲದಡಿಯಲ್ಲಿ ಹೂತಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನಗಳನ್ನು ಪೊಲೀಸರು ಮತ್ತು ಸಿಆರ್‌ಪಿಎಫ್ ಯೋಧರು ನಿಷ್ಕ್ರಿಯಗೊಳಿಸಿದ್ದಾರೆ.ಮಾವೊವಾದಿಗಳು 44 ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಿ ಬುಕಾರೊ ಜಿಲ್ಲೆಯ ಜುಮ್ರಾ ಬೆಟ್ಟದ ಸಮೀಪದ ಪುರ್ನಾಪಾಣಿ ಗ್ರಾಮದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಈ ಎಲ್ಲಾ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡು, ನಿಷ್ಕ್ರಿಯಗೊಳಿಸಿದ್ದಾರೆ.ರಕ್ಷಣಾ ವಾಹನಗಳನ್ನು ಗುರಿಯಾಗಿಟ್ಟುಕೊಂಡೇ  ಸ್ಫೋಟಕ ಸಾಧನಗಳನ್ನು 150 ಮೀಟರ್ ಉದ್ದದಲ್ಲಿ ಭೂಮಿಯ ಒಳಗೆ ಹುದುಗಿಸಲಾಗಿತ್ತು.

ಮಾವೊವಾದಿಗಳ ಬಂಧನ: ಮಾವೊವಾದಿಗಳ ವಿಭಾಗೀಯ ಕಮಾಂಡರ್ ಮತ್ತು ಆತನ ಸಹಚರನನ್ನು ಪೊಲೀಸರು ಭಾನುವಾರ ಬಂಧಿಸಿದ್ದು, ಅವರ ಬಳಿಯಿದ್ದ ಸ್ಫೋಟಕ ವಶಪಡಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.