ಮಂಡ್ಯ: ಕೆಆರ್ಎಸ್ (ಕೃಷ್ಣರಾಜಸಾಗರ) ಅಣೆಕಟ್ಟೆಯ ನೀರಿನ ಮಟ್ಟವು 62.92 ಅಡಿಗೆ ಕುಸಿದಿದ್ದು, ಇದು ದಶಕದಲ್ಲಿಯೇ ಅತೀ ಕಡಿಮೆ ಮಟ್ಟವಾಗಿದೆ. ನೀರಿನ ಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣತೊಡಗಿವೆ.

2003ರಲ್ಲಿ 66.51, 2007ರಲ್ಲಿ 68.90 ಅಡಿಗೆ ಇಳಿದಿದ್ದು ಬಿಟ್ಟರೆ, ಉಳಿದ ಅವಧಿಯಲ್ಲಿ 70 ಅಡಿಗಿಂತ ಕೆಳಗೆ ಇಳಿದಿರಲಿಲ್ಲ. 2013ರ ಜೂನ್ 12ಕ್ಕೆ 63 ಅಡಿಗಿಂತಲೂ ಕಡಿಮೆ ದಾಖಲಾಗಿದೆ. ಮುಂಗಾರು ಮಳೆ ಆರಂಭವಾದರೂ ನೀರಿನ ಒಳ ಒಳಹರಿವಿನ ಪ್ರಮಾಣ ಹೆಚ್ಚದಿರುವುದು ಆತಂಕಕ್ಕೆ ಕಾರಣವಾಗಿದೆ.

ಅಣೆಕಟ್ಟೆಯ ನೀರಿನಮಟ್ಟ 62.92 ಅಡಿ ದಾಖಲಾಗಿದ್ದು, ಒಳಹರಿವು 277 ಕ್ಯೂಸೆಕ್ ಇದ್ದು, ಹೊರಹರಿವು 764 ಕ್ಯೂಸೆಕ್ ಇದೆ. ಕಳೆದ ವರ್ಷ ನೀರಿನ ಮಟ್ಟವು 72.28 ಅಡಿ ಇತ್ತು. ಒಳಹರಿವು 211 ಕ್ಯೂಸೆಕ್ ಇದ್ದರೆ, ಹೊರಹರಿವು 204 ಕ್ಯೂಸೆಕ್ ಇತ್ತು.

ಅಣೆಕಟ್ಟೆಯಲ್ಲಿ ಈಗ ಬಳಸಲು ಸಾಧ್ಯವಾಗುವ ನೀರಿನ ಪ್ರಮಾಣವು ಕೇವಲ 0.07 ಟಿಎಂಸಿ ಅಡಿ ಇದೆ. ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ನಗರಗಳಿಗೆ ಒಂದು ವಾರ ಕಾಲ ಮಾತ್ರ ಕುಡಿಯುವ ನೀರನ್ನು ಪೂರೈಸಬಹುದಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.

ಕೆಆರ್ಎಸ್ ಅಣೆಕಟ್ಟೆಯ ಒಡಲು ತುಂಬಬೇಕಾದರೆ ಕೇರಳ ರಾಜ್ಯದ ವೈನಾಡು ಹಾಗೂ ರಾಜ್ಯದ ಕೊಡಗಿನಲ್ಲಿ ಮಳೆಯಾಗಬೇಕು. ಅಲ್ಲಿಯೂ ಮುಂಗಾರು ದುರ್ಬಲವಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಜೂನ್ ಅಂತ್ಯಕ್ಕೆ ಜಿಲ್ಲೆಯ ರೈತರುಭತ್ತದ ಒಟ್ಟಲು ಮಾಡಬೇಕಿತ್ತು. ಜುಲೈ ಮೂರನೇ ವಾರದಿಂದ ಭದ ನಾಟಿ ಆಗಬೇಕು. ಕಬ್ಬಿನ ನಾಟಿಯೂ ಈ ತಿಂಗಳಲ್ಲಿಯೇ ಆರಂಭವಾಗಬೇಕು. ಈ ಚಟುವಟಿಕೆಗಳು ಆರಂಭವಾಗಿಲ್ಲ. ಅಣೆಕಟ್ಟೆಯ ನೀರಿನ ಮಟ್ಟವು ಜಿಲ್ಲೆಯ ರೈತ ಸಮೂಹವನ್ನು ಆತಂಕಕ್ಕೆ ದೂಡಿದೆ.

ಅಂಕಿ-ಸಂಖ್ಯೆಯಲ್ಲಿ ಮಳೆ ಉತ್ತಮ: ಅಂಕಿ-ಸಂಖ್ಯೆಗಳ ಪ್ರಕಾರ ಜಿಲ್ಲೆಯಲ್ಲಿ ಮಳೆ ಉತ್ತಮವಾಗಿದೆ. ಆದರೆ, ಅದು ಎಲ್ಲೆಡೆಯೂ ಸಮನಾಗಿ ಹಂಚಿಕೆಯಾಗಿಲ್ಲ. ಪರಿಣಾಮ ಬಿತ್ತನೆ ಚಟುವಟಿಕೆಯೂ ಚುರುಕು ಪಡೆದುಕೊಂಡಿಲ್ಲ.
ವಾಡಿಕೆ ಪ್ರಕಾರ ಜೂನ್ 10ರವರೆಗೆ 198 ಮಿ.ಮೀ. ಮಳೆಯಾಗಬೇಕಿತ್ತು. 215 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 173.8 ಮಿ.ಮೀ. ಮಳೆಯಾಗಿತ್ತು.

ಪೂಜೆ, ಹೋಮ: ಮಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ಮೌಖಿಕ ಸೂಚನೆಯ ಮೇರೆ ಮೂರು ದಿನಗಳ ಹಿಂದೆ ಮುಜರಾಯಿ ಇಲಾಖೆಯ ದೇವಸ್ಥಾನದಲ್ಲಿ ಪೂಜೆ, ಕೆಲವೆಡೆ ಹೋಮ ಮಾಡಲಾಗಿದೆ.

ಎರಡು ವರ್ಷಗಳಿಂದ ಜಿಲ್ಲೆಯ ಏಳೂ ತಾಲ್ಲೂಕುಗಳು ಬರಪೀಡಿತ ಪಟ್ಟಿಯಲ್ಲಿ ಇವೆ. ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ತೀವ್ರವಾಗಿದ್ದು, 38 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

`ಅಣೆಕಟ್ಟೆಯಲ್ಲಿ ನೀರಿನ ಕೊರತೆಯಿಂದ ಭತ್ತದ ಬೆಳೆಹಾಕಲಾಗಲಿಲ್ಲ. ಕಬ್ಬು ಬೆಳೆಯಲಾಗುವುದಿಲ್ಲ. ಸಾಲ, ಕಂದಾಯ ವಸೂಲಾತಿಯನ್ನು ಈ ವರ್ಷ ಮಾಡಬಾರದು. ಜೀವನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಉದ್ಯೋಗ ಅವಕಾಶ ಸೃಷ್ಟಿಸಬೇಕು' ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೊಣಸಾಲೆ ನರಸರಾಜು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.