ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನುಹುರಿ ಜಾರೀತು ಜೋಕೆ...

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆನ್ನುಹುರಿ ಜಾರುವಿಕೆ ಎಂಬುದು ಬೆನ್ನು ಹುರಿಯನ್ನು ಬಾಧಿಸುವ ಒಂದು ವೈದ್ಯಕೀಯ ಸ್ಥಿತಿ. ಇದರಲ್ಲಿ ಬೆನ್ನುಹುರಿಯಲ್ಲಿರುವ ಇಂಟರ್ ವರ್ಟಿಬ್ರಲ್ ಡಿಸ್ಕ್‌ನಲ್ಲಿ  ಒಂದು ಹೊರ ತಂತು ವೃತ್ತ (outer fibrous ring) ಹರಿದು ಅದರ ಒಳಗಡೆ ಇರುವ ಮೆದುವಾದ ಮಧ್ಯ ಭಾಗವು ಉಬ್ಬಿ ಹೊರ ಬರುತ್ತದೆ. ಡಿಸ್ಕ್ ಹರ್ನಿಯೇಷನ್ ವಯಸ್ಸಿಗೆ ಸಂಬಂಧಿಸಿದ ಸವೆಯುವಿಕೆ, ಆಘಾತ, ಅಪಘಾತ, ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರ ಎತ್ತುವುದು, ಹೆಚ್ಚಿನ ಕೆಲಸ ಮಾಡಿ ಆಯಾಸಗೊಳ್ಳುವುದು ಮೂಲ ಕಾರಣಗಳಾಗಿರುತ್ತವೆ. ಸಣ್ಣ ಅಥವಾ ಡಿಸ್ಕ್‌ (ಬೆನ್ನುಹುರಿ ನಡುವಿನ ಮೃದ್ವಸ್ಥಿಯ ಪದರ) ಜಾರುವಿಕೆ ಕೆಲ ವಾರಗಳಲ್ಲಿ ಗುಣವಾಗುತ್ತದೆ. ಆದರೆ ಪ್ರಮುಖ ಡಿಸ್ಕ್ ಜಾರುವಿಕೆಗೆ ತೀವ್ರ ಚಿಕಿತ್ಸಾ ವಿಧಾನಗಳ ಅಗತ್ಯವಿರುತ್ತದೆ. 

ರೋಗಲಕ್ಷಣ
ಬೆನ್ನುಹುರಿ ಜಾರುವಿಕೆ ಲಕ್ಷಣಗಳು ಜಾರುವಿಕೆಯ ಸ್ಥಾನದ ಮೇಲೆ ಅವಲಂಬಿತವಾಗಿರುತ್ತವೆ. ಮೃದು ಅಂಗಾಂಶಗಳು ಒಳಗೊಂಡಿರುವುದರ ಮೇಲೆ ಅವಲಂಬಿಸಿರುತ್ತದೆ. ಟಿಶ್ಶು ಗಾಯಗೊಂಡಾಗ ಸ್ವಲ್ಪ ನೋವು ಅಥವಾ ನೋವು ಕಾಣಿಸಿಕೊಳ್ಳದೆಯೇ ಇರಬಹುದು.

ನರದ ಮೂಲವು ಸಂಕುಚಿತಗೊಂಡರೆ (nerve root compression) ಕುತ್ತಿಗೆ, ಬೆನ್ನು ಅಥವಾ ಸೊಂಟದಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ತೊಡೆ, ಮಂಡಿ, ಪಾದಗಳಲ್ಲಿ ಸ್ಪಷ್ಟವಾದ ನೋವು ಕಾಣಿಸುವುದರಿಂದ ಬೆನ್ನುಹುರಿ ಜಾರುವಿಕೆ ಲಕ್ಷಣ ತತ್ ಕ್ಷಣಕ್ಕೆ ಪತ್ತೆ ಆಗುವುದಿಲ್ಲ. ಸಂವೇದನಾ ಪರಿವರ್ತನೆಗಳಾದ ಮರಗಟ್ಟುವಿಕೆ, ಜುಮ್ಮೆನಿಸು ವುದು, ಮಾಂಸಖಂಡಗಳ ದೌರ್ಬಲ್ಯ, ಸೂಕ್ತವಲ್ಲದ ಸಂವೇದನೆ ಹಾಗು ಸ್ಪಂದನ ಇತರ ಲಕ್ಷಣಗಳು.

ಡಿಸ್ಕ್ ಜಾರುವಿಕೆಯು ಸೊಂಟದ ಭಾಗದಲ್ಲಾದರೆ ನೋವು ಸೊಂಟದಿಂದ ತೊಡೆಯ ಹಿಂದಿನ ಭಾಗಕ್ಕೆ ಪಸರಿಸಿ ನೋವಿನ ಅನುಭವವನ್ನು ಕೊಡಬಹುದು. ಮಾಂಸಖಂಡ ಸೆಳೆತದಿಂದ ಮಾಂಸ ಖಂಡ ನೋವಿನ ಅನುಭವ ಆಗಾಗ ಇರಬಹುದು ಆದರೆ ಡಿಸ್ಕ್ ಜಾರುವಿಕೆಯಿಂದ ಅನುಭವಿಸುವ ನೋವು ಸತತವಾಗಿ ಅಥವಾ ಒಂದು ನಿರ್ದಿಷ್ಟ ನಿಲುವಿನಲ್ಲಿ ಕಾಣಿಸಿಕೊಳ್ಳ ಬಹುದು. ಹೊರ ಬಂದಿರುವ ಮೃದು ಟಿಶ್ಯು ಅಥವ ನರಗಳ ಮೇಲೆ ಒತ್ತಡ ಹೇರದಿದ್ದರೆ ರೋಗ ಚಿಹ್ನೆಗಳು ಕಂಡುಬರುವುದಿಲ್ಲ. ಡಿಸ್ಕ್ ಜಾರುವಿಕೆಯು ಸೊಂಟದ ಭಾಗದಲ್ಲಿದ್ದರೆ ಪಸರಿಸುವ ನೋವು  ಕಂಡುಬರಬಹುದು. ಈ ತರಹದ ನೋವುಗಳು ಪಾದ ಅಥವ ತೊಡೆ ಸಂದುಗಳಲ್ಲಿ ಕಂಡುಬರಬಹುದು.

ಸಾಮಾನ್ಯವಾಗಿ, ರೋಗ ಚಿಹ್ನೆಗಳು ದೇಹದ ಒಂದು ಬದಿಯಲ್ಲಿ (ಎಡ ಅಥವ ಬಲ ಭಾಗ) ಕಂಡುಬರುತ್ತದೆ. ಕೆಲವೊಮ್ಮೆ ಡಿಸ್ಕ್ ಜಾರುವಿಕೆಯು ತೀವ್ರತರವಾಗಿದ್ದರೆ, ನರಗಳ ಮೇಲೆ ಒತ್ತಡ ಹೆಚ್ಚಾಗಿ ದೇಹದ ಎರಡು ಬದಿಯಲ್ಲಿ ಕಂಡುಬರಬಹುದು.

ಡಿಸ್ಕ್ ಜಾರುವಿಕೆಗೆ ಕಾರಣಗಳು 
(Intervertebral disc) ಅಂತರ ಬೆನ್ನು ಮೂಳೆಯ ಡಿಸ್ಕ್ ಸವೆಯುವುದೆ ಒಂದು ಪ್ರಮುಖ ಕಾರಣವಾಗಿರುತ್ತದೆ. ಡಿಸ್ಕ್ ಸವೆಯುವುದು ಸಹಜವಾಗಿ ವೃದ್ಧಾಪ್ಯದಲ್ಲಿ. ಅಂತರ ಬೆನ್ನು ಮೂಳೆಯು ಸವೆಯುತ್ತಿರುವಾಗ ಡಿಸ್ಕ್‌ ಒಳಗಿರುವ ಮೃದು ಅಂಗಾಂಶಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಒಳಗಿರುವ ನ್ಯೂಕ್ಲಿಯಸ್ ತಂತು ಮತ್ತು ತೀವ್ರತೆಗೆ (fibrous and stiffness) ಒಳಗಾಗಿ ಹೆಚ್ಚಿನ ಭಾರ ಅಥವ ಒತ್ತಡ ಸಹಿಸಲು ಅಶಕ್ತವಾಗುತ್ತದೆ. ಹೀಗೆ ಬೆನ್ನುಹುರಿ ಜಾರುವಿಕೆ ಎಂಬ ಸ್ಥಿತಿಯು ನಿಧಾನವಾಗಿ ಕಾಣಿಸಿಕೊಳ್ಳುತ್ತದೆ. ಬೆನ್ನುಹುರಿ ಜಾರುವಿಕೆ ನಿರಂತರ ಕುಳಿತುಕೊಳ್ಳುವ, ಬಾಗಿ ನಿಲ್ಲುವ, ಹೆಚ್ಚು ಕೆಲಸ ಮಾಡುವಾಗ, ಚಾಲನೆ, ಹೆಚ್ಚಿನ ಕೆಲಸ ಮಾಡದೆಯು ಇದ್ದಾಗ ಬರಬಹುದು.
ಆದರೆ, ಭಾರವಾದ ವಸ್ತುಗಳನ್ನು ಸತತವಾಗಿ ಎತ್ತಿ ಕೆಲಸ ಮಾಡುವವರಿಗೂ ಡಿಸ್ಕ್ ಜಾರುವಿಕೆ ಆಗಬಹುದು. ಸ್ವಲ್ಪ ಬೆನ್ನು ನೋವು ಅಥವಾ ದೀರ್ಘಾವಧಿಯ ಬೆನ್ನು ಆಯಾಸವಾಗುವ ಲಕ್ಷಣಗಳನ್ನು ಅಲಕ್ಶ್ಯ ಮಾಡಬಾರದು. 

ಬೆನ್ನು ಹುರಿ ನೇರವಿದ್ದಾಗ (ನಿಂತಿರುವಾಗ ಅಥವ ಮಲಗಿದ್ದಾಗ) ಅಂತರ ಬೆನ್ನುಮೂಳೆ (intervertebral disc) ಗಳ ನಡುವೆ ಇರುವ ಒತ್ತಡ ಸರಿಸಮಾನವಾಗಿ ವಿತರಣೆ ಆಗಿರುತ್ತದೆ. ಆದ್ದರಿಂದ ಕೆಲಸ ಮಾಡುವಾಗ ಬಹಳ ಎಚ್ಚರ ವಹಿಸಬೇಕು.

ಚಿಕಿತ್ಸಾ ವಿಧಾನ: ಡಿಸ್ಕ್ ಜಾರುವಿಕೆಯು 75% ಗಿಂತ ಕಡಿಮೆ ಇದ್ದರೆ ಪ್ರಕೃತಿ ಚಿಕಿತ್ಸಾ ವಿಧಾನಗಳು, ಆಕ್ಯುಪಂಚರ್, ಹರ್ಬೋಥೆರಪಿ, ಜಲ ಚಿಕಿತ್ಸೆ, ಆಹಾರ ಚಿಕಿತ್ಸೆ, ಪ್ಯಾಕ್ ಮತ್ತು ಪೌಲ್ಟಿಸ್, ಮಣ್ಣಿನ ಚಿಕಿತ್ಸೆ, ಯೋಗಾಭ್ಯಾಸ, ಪ್ರಾಣಾಯಾಮ, ಜೀವನ ಶೈಲಿಯ ಬದಲಾವಣೆಗಳ ಮೂಲಕ ಶಸ್ತ್ರ ಚಿಕಿತ್ಸೆ ಇಲ್ಲದೆಯೆ ಗುಣಹೊಂದಬಹುದು. ಆದರೆ ಇದಕ್ಕೆ ಎಕ್ಸರೇ, ಎಂಆರ್ಐ ಮುಂತಾದ ಅವಶ್ಯಕ ವರದಿಗಳನ್ನು ಪರಿಶೀಲಿಸಿ ಚಿಕಿತ್ಸೆ  ಮಾಡಲು ಸಾಧ್ಯ.

ಆಕ್ಯುಪಂಚರ್ ಚಿಕಿತ್ಸಾ ಪದ್ಧತಿಯಿಂದ ಡಿಸ್ಕ್ ಜಾರಿರುವ ಜಾಗದಿಂದ ಅದರ ಸ್ವಸ್ಥಾನಕ್ಕೆ ತರಲು ಸಾಧ್ಯವಾಗುತ್ತದೆ ಹಾಗು ನರಗಳ ಒತ್ತಡವನ್ನು ಸಡಿಲಗೊಳಿಸಿ ರೋಗದ ಚಿಹ್ನೆಗಳನ್ನು ಕಡಿಮೆ ಮಾಡಬಹುದು. ಹರ್ಬೋಥೆರಪಿ ಮೂಲಕ ಬೆನ್ನುಹುರಿ ನರಗಳಿಗೆ ಹಾಗು ಬೆನ್ನಿನ ಸ್ನಾಯುಗಳಿಗೆ ಶಕ್ತಿ   ತುಂಬಬಹುದು. ನಿರ್ದಿಷ್ಟವಾದ ಯೋಗಾ ಭ್ಯಾಸಗಳು ಖಂಡಿತವಾಗಿ ಸಹಾಯ ಮಾಡುತ್ತದೆ. ಬೆನ್ನಿನ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ.

ಇದರ ಜೊತೆಗೆ ಮೇಲೆ ವಿವರಿಸಿರುವ ಇನ್ನಿತರ ಚಿಕಿತ್ಸಾ ಪದ್ಧತಿಗಳನ್ನು ವೈದ್ಯರ ಸಲಹೆಯಂತೆ ಮಾಡಿ ರೋಗವನ್ನು ಗುಣಪಡಿಸಿಕೊಳ್ಳಬಹುದು.

ಡಿಸ್ಕ್ ಜಾರುವಿಕೆಯ ನಿವಾರಣೆಯ ತಂತ್ರಗಳು (prevention techniques)
1. ವ್ಯಾಯಾಮ, ಯೋಗಾಸನ : ಬೆನ್ನಿನ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ ಹಾಗು ಯೋಗಾಸನಗಳನ್ನು ನಿತ್ಯ ಅಭ್ಯಾಸ ಮಾಡಬೇಕು. ಹೀಗೆ ಅಭ್ಯಾಸ ಮಾಡುವುದರಿಂದ ದೇಹದ ಒಟ್ಟಾರೆ ಶಕ್ತಿಯು ಹಾಗು ಎಲ್ಲಾ ಸ್ನಾಯುಗಳ ಶಕ್ತಿಯು ವೃದ್ಧಿಸುತ್ತದೆ. ಸೊಂಟದ ಭಾಗದ ಯೋಗಾಭ್ಯಾಸ ಬಹು ಮುಖ್ಯ ಪಾತ್ರ ನಿರ್ವಹಿಸುತ್ತದೆ. ಮರುಕಳಿಸುವ ಬೆನ್ನು ನೋವಿನಿಂದ ಬಳಲುವುದನ್ನು ತಡೆಗಟ್ಟುತ್ತದೆ.

2. ಒಳ್ಳೆಯ ನಿಲುವು ಅಥವ ಭಂಗಿಯನ್ನು ನಮ್ಮ ಜೀವನ ಶೈಲಿಯಲ್ಲಿ ಅಭ್ಯಾಸ ಮಾಡಿಕೊಳ್ಳಬೇಕು. ಹೀಗೆ ಅಭ್ಯಾಸ ಮಾಡುವುದರಿಂದ ಬೆನ್ನು ನೇರವಾಗಿದ್ದು, ಬೆನ್ನು ಹುರಿಯ ಮೇಲೆ ಬೀಳುವ ನಿರಂತರ ಒತ್ತಡವನ್ನು ಕಡಿಮೆ ಮಾಡುತ್ತದೆ. ಭಾರವಾದ ವಸ್ತುಗಳನ್ನು ಎತ್ತುವಾಗ ಜಾಗರೂಕತೆಯಿಂದ ಬೆನ್ನು ಅಥವ ಬೆನ್ನಿನ ಹುರಿಯ ಸ್ನಾಯುಗಳ ಮೇಲೆ ಹೆಚ್ಚು ಒತ್ತಡ ಬೀಳದಂತೆ ಎತ್ತಬೇಕು. ಶ್ರಮದಾಯಕ ವ್ಯಾಯಾಮ ಮಾಡುವಾಗ ಸರಿಯಾದ ಕಾರ್ಯವಿಧಾನ ಅನುಸರಿಸಬೇಕು. 

ಸರಿಯಾದ ಸಮಯದಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳದ್ದಿದ್ದರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ತಪ್ಪುವುದಿಲ್ಲ.
ಮಾಹಿತಿಗೆ: 9880918603/ dr.jyothi1977@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT