ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಾಮಗಾನ ಸಭಾ 15ನೇ ವಾರ್ಷಿಕ ಸಂಗೀತ ಉತ್ಸವ

Published 16 ಫೆಬ್ರುವರಿ 2024, 18:29 IST
Last Updated 16 ಫೆಬ್ರುವರಿ 2024, 18:29 IST
ಅಕ್ಷರ ಗಾತ್ರ

ಭಾರತೀಯ ಸಾಮಗಾನ ಸಭಾವು 15ನೇ ವಾರ್ಷಿಕ ‘ಕಾಶಿ ಸ್ವರ ಶಂಕರ ಸಂಗೀತ ಉತ್ಸವ’ವನ್ನು ಆಯೋಜಿಸಿದೆ. ಇದು ಭಾರತೀಯ ಸಂಗೀತ ನಾದ ಯಾತ್ರೆಯಾಗಿದೆ. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿವೃತ್ತ ಡೆಪ್ಯುಟಿ ಗವರ್ನರ್‌ ಶ್ಯಾಮಲಾ ಗೋಪಿನಾಥ್‌, ಐಜಿಎನ್‌ಸಿಎಯ ಪ್ರಾದೇಶಿಕ ನಿರ್ದೇಶಕ ಡಿ. ಮಹೇಂದ್ರ ಅವರು ಭಾಗವಹಿಸಲಿದ್ದಾರೆ.

ಫೆ. 22ರಂದು: 4.45ರಿಂದ ಕಾಶಿ ಸ್ವರ ಶಂಕರ, ಕಾಶಿ ರಾಮೇಶ್ವರಂ: ಸುಬುಧೇಂದ್ರ ರಾವ್‌, ಸುಮಾ ಸುಧೀಂದ್ರ. ಕಾಶಿ ದರ್ಬಾರ್‌; ಮಹೇಶ್‌ ಕಾಳೆ. 

23ರಂದು: 4.45ರಿಂದ ಬನರಾಸಿ ಘರಾಣ ಕುರಿತು ವೈಶಾಲಿ ಅವರಿಂದ ಉಪನ್ಯಾಸ . ಕಾಶಿ ಸಂತವಾಣಿ – ಸಂಪ್ರದಾಯಿಕ ಭಜನೆಗಳು: ಸೂರ್ಯಗಾಯತ್ರಿ, ಕಾಶಿಯಾತ್ರೆ: ಸಂದೀಪ್‌ ನಾರಾಯಣ

24ರಂದು: 4.45ರಿಂದ ಕಾಶಿ ಡಮರು: ಜಗದೀಶ ಕುರ್ತಕೋಟಿ ಮತ್ತು ತಂಡದಿಂದ. ಕಾಶಿ ಧನ್ವಂತರಿ:ಅನಿರ್ಬನ್‌ ರಾಯ್‌. ಸಂಸ್ಕೃತ ಕಾಶಿ: ರಾಮಕೃಷ್ಣ ಮೂರ್ತಿ.

25ರಂದು:  ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ: 12ನೇ ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ  ಪ್ರದಾನ ಕಾರ್ಯಕ್ರಮ ನಡೆಯಲಿದೆ.  ಪಿಟೀಲು ವಿದ್ವಾಂಸರಾದ ಮೈಸೂರು ನಾಗರಾಜ್‌ ಮತ್ತು ಮೈಸೂರು ಮಂಜುನಾಥ್‌ ಅವರಿಗೆ ಮಾತಂಗ ಪ್ರಶಸ್ತಿ ನೀಡಲಾಗುವುದು. 

ಕಾರ್ಯಕ್ರಮ ನಡೆಯುವ ಸ್ಥಳ: ಚೌಡಯ್ಯ ಸ್ಮಾರಕ ಭವನ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT