ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಒಂದು ಉದ್ದೇಶವಿರುತ್ತದೆ. ಹಾಗೆಯೇ ಪ್ರತಿಯೊಬ್ಬರೂ ಮಾಡುವ ಕೆಲಸಗಳಿಗೆ ಒಂದು ಹಿನ್ನೆಲೆ ಇರುವುದು. ಹುಟ್ಟು ಮತ್ತು ಸಾವು – ಈ ಎರಡು ಬಿಂದುಗಳ ನಡುವೆ ನಡೆಯುವ ಎಲ್ಲಾ ಘಟನೆಗಳಿಗೂ ನಮ್ಮ ಪೂರ್ವಾರ್ಜಿತ ಕರ್ಮವೇ ಕಾರಣವಾಗಿರುವುದು. ನಮ್ಮ ಪೂರ್ವಪುಣ್ಯ ಉತ್ತಮವಾಗಿದ್ದರೆ ಈ ಜನ್ಮದ ನಮ್ಮ ಆಗುಹೋಗುಗಳೂ ಉತ್ತಮವಾಗಿಯೇ ಇರುವುವು. ಅವರವರ ಕರ್ಮಕ್ಕೆ ಅನುಸಾರವಾಗಿ ಸುಖ-ದುಃಖಗಳೂ ಸಾಗರದಲೆಯಂತೆ ಬಂದುಹೋಗುತ್ತಿರುವುವು. ಯಾರಿಗೇ ಆಗಲಿ, ಜೀವನದಲ್ಲಿ ಕೇವಲ ಸುಖವೋ ಅಥವಾ ಕೇವಲ ದುಃಖವೋ ಇರುವುದಿಲ್ಲ. ‘ಕಾಲಾಯ ತಸ್ಮೈ ನಮಃ’ ಎನ್ನುವಂತೆ ಸಮಯ ಬಂದಾಗ ಎಲ್ಲವೂ ಬಂದು ಹೋಗುವುವು. ಹಾಗಾಗಿ ‘ಕಾಲ’ ಎನ್ನುವುದು ತುಂಬ ಮುಖ್ಯ ಪಾತ್ರವನ್ನು ವಹಿಸುವುದು ನಮ್ಮ ಜೀವನದಲ್ಲಿ. ಸಂಕಷ್ಟ ಒದಗಿದಾಗ, ಈ ಕಷ್ಟದ ದಿನಗಳು ಇನ್ನೆಷ್ಟು ದಿನ ಎಂದು ಲೆಕ್ಕ ಹಾಕುವುದು ಮನಸ್ಸು. ಕಷ್ಟದ ಈ ದಿನಗಳಿಗೆ ಕಾರಣವೇನು? ಮತ್ತೆ ಸುಖದ ‘ಕಾಲ’ ಯಾವಾಗ ಬರುವುದು? ಇಂಥ ಪ್ರಶ್ನೆಗಳಿಗೆ ಉತ್ತರ ತಿಳಿಸುವ ಶಾಸ್ತ್ರವೇ ಜ್ಯೋತಿಷಶಾಸ್ತ್ರ. ಕಾಲವನ್ನು ತಿಳಿಸುವ ಕಾಲಜ್ಞಾನಶಾಸ್ತ್ರವೇ ಜ್ಯೋತಿಷ್ಯವಾಗಿದೆ.

ನಮ್ಮ ಜೀವನದ ಗತಿಯನ್ನು ತಿಳಿಸುವ ದಿಕ್ಸೂಚಿಯೇ ಜ್ಯೋತಿಷವಾಗಿದೆ. ನಮ್ಮ ಜೀವನಕ್ಕೆ ಬೆಳಕು ನೀಡುವ ಶಾಸ್ತ್ರವಾದ್ದರಿಂದ ಇದನ್ನು ‘ದೀಪಶಾಸ್ತ್ರ’ ಎಂದೂ ಇದನ್ನು ಕರೆಯುವೆವು. ಭೂಮಿಯ ಮೇಲಿರುವ ನಾವು, ಎಲ್ಲಕ್ಕೂ ಅಂದರೆ, ಹಬ್ಬ-ಹರಿದಿನಗಳಿಗೆ, ವ್ಯವಸಾಯ, ವ್ಯವಹಾರಗಳಿಗೆ ಆಕಾಶದಲ್ಲಿರುವ ಆಕಾಶಕಾಯಗಳ ಚಲನವಲನಗಳನ್ನೇ ಅನುಸರಿಸುವೆವು. ಹಬ್ಬಗಳಿಗೆಲ್ಲಾ ಸೂರ್ಯ-ಚಂದ್ರರನ್ನು ಅನುಸರಿಸಿದರೆ, ರೈತ ತನ್ನ ದಿನನಿತ್ಯದ ಕಾರ್ಯಗಳಲ್ಲಿ ಒಂದಾದ ಬೀಜಬಿತ್ತನೆಯನ್ನು ಮಳೆನಕ್ಷತ್ರಗಳನ್ನು ನೋಡಿಯೇ ಮಾಡುವನು. ಬ್ರಹ್ಮಾಂಡದಲ್ಲಿರುವ ನಕ್ಷತ್ರ, ಗ್ರಹ, ಉಪಗ್ರಹಗಳ ಪ್ರಭಾವವು ಭೂಮಿಯಲ್ಲಿರುವ ಮನುಷ್ಯರ ಮೇಲೆ ಪರಿಣಾಮ ಬೀರುವುದು. ಜನನದಿಂದ ಮರಣದವರೆಗೆ ನಡೆಯುವ ಎಲ್ಲ ಘಟನೆಗಳನ್ನು ವಿವರಿಸುವ ಭೂಪಟವೇ ಜಾತಕವಾಗಿದೆ. ನಮ್ಮ ಗುಣ, ಸ್ವಭಾವ, ನಡತೆಗಳನ್ನು ನಮಗೇ ಪರಿಚಯಿಸುವ ವಿಶಿಷ್ಟ ಜ್ಞಾನವಾಗಿದೆ, ಈ ಜ್ಯೋತಿಷಶಾಸ್ತ್ರ.

ಜ್ಯೋತಿಷಶಾಸ್ತ್ರವನ್ನು ವಿವರವಾಗಿ ತಿಳಿಯುವ ಪ್ರಯತ್ನ ಮಾಡೋಣ. ಮೊದಲಿಗೆ, ಈ ಜ್ಯೋತಿಷಶಾಸ್ತ್ರದ ಮೂಲವು ಎಲ್ಲಿ ಇದೆ ಎಂದು ನೋಡೋಣ.

ಸಮಾಜಮುಖಿಗಳಾಗಿ ನಮ್ಮನ್ನು ಉದ್ಧರಿಸಲು ಬಂದ ಹರಿದಾಸರುಗಳೇನೋ ಒಂದೇ ಮಾತಿನಲ್ಲಿ ‘ಸಕಲ ಗ್ರಹಬಲ ನೀನೆ ಸರಸಿಜಾಕ್ಷ’ ಎಂದು ಹೇಳಿಬಿಟ್ಟರು. ಹೀಗೆ ಹೇಳುತ್ತಾ ಬದುಕಿನ ಸಮಗ್ರತೆಯನ್ನು ಭಗವಂತನಿಗೆ ಒಪ್ಪಿಸಿ ನೆಮ್ಮದಿಯ ಸೂತ್ರವನ್ನೇನೋ ಹಾಕಿಕೊಟ್ಟರು. ಗ್ರಹಗಳ ಬಲವನ್ನು ತಿಳಿಸುವ ಜ್ಯೋತಿಷ್ಯವು ವೇದಾಂಗವಾಗಿದೆ ಎಂದು ತಿಳಿದು ಬರುವುದು. ವೇದದ ಅಧ್ಯಯನದ ದೃಷ್ಟಿಯಿಂದ, ಜ್ಯೋತಿಷ್ಯದ ಅಧ್ಯಯನ ಬಹಳ ಮುಖ್ಯವಾಗುವುದು. ವೇದದ ಇತರ ಅಂಗಗಳಾದ ಶಿಕ್ಷಾ, ವ್ಯಾಕರಣ, ಛಂದಸ್ಸು, ಕಲ್ಪ, ನಿರುಕ್ತ - ಇವೆಲ್ಲವೂ ಶಬ್ದಶಾಸ್ತ್ರದ ಮೇಲೆ ಹೊರಟಿದೆ. ಆದರೆ ಕಾಲದ ಮೇಲಿನ ನಿಯಮಗಳನ್ನು ಪ್ರಕೃತಿಯಲ್ಲಿ ನಾವು ಹೇಗೆ ಅರ್ಥೈಸಿಕೊಳ್ಳಬೇಕು? ಕಾಲ ಹೇಗೆ ನಮ್ಮನ್ನು ನಿರ್ಧರಿಸುವುದು? ಇಂಥವುಗಳನ್ನೆಲ್ಲಾ ಜ್ಯೋತಿಷವೇ ನಮಗೆ ತಿಳಿಸುವುದು. ಉದಾಹರಣೆಗೆ, ‘ಕಾಲ ಕೂಡಿ ಬರಬೇಕು’, ‘ಯೋಗವಿರಬೇಕು’ – ಎಂದೆಲ್ಲಾ ಹೇಳುವೆವು ಅಲ್ಲವೇ? ಆ ಕಾಲ ಬರುವುದೆಂದು – ಎಂದು ಹೇಳಬೇಕಾದರೆ ಜ್ಯೋತಿಷವೇ ಬೇಕು.

ನಮ್ಮ ಒಳಿತಿಗಾಗಿ ನಮ್ಮ ಋಷಿಮುನಿಗಳು ನಮಗೆ ಅನೇಕ ಮಂತ್ರಗಳನ್ನು ನೀಡಿದ್ದಾರೆ; ಹೋಮ–ಹವನಗಳ ವಿಧಿಯನ್ನೂ ನೀಡಿದ್ದಾರೆ. ಎಲ್ಲವೂ ಇದ್ದರೂ ಮಾಡುವ ಸಮಯಪ್ರಜ್ಞೆ ತುಂಬಾ ಮುಖ್ಯ. ಒಂದು ಮಂತ್ರದ ಉಚ್ಚಾರಣೆ, ಸ್ವರನಿಷ್ಪತ್ತಿ, ಅದರಿಂದಾಗುವ ಪ್ರಭಾವ - ಇವುಗಳನ್ನೆಲ್ಲಾ ತಿಳಿದ ಮೇಲೆ ಅದನ್ನು ಯಾವ ಕಾಲದಲ್ಲಿ ಹೇಳಬೇಕು, ಯಾವ ಸಮಯದಲ್ಲಿ ಹೇಳಬೇಕು ಎನ್ನುವುದು ಮುಖ್ಯ. ಎಲ್ಲಾ ಸರಿಯಿದ್ದು ಹೇಳಿದ ಸಮಯವೇ ಸರಿಯಿಲ್ಲವೆಂದರೆ ವ್ಯರ್ಥವಲ್ಲವೇ? ಕೆಲವು ಮಂತ್ರ ಅಥವಾ ಶ್ಲೋಕಗಳನ್ನು ಪ್ರಾತಃಕಾಲದಲ್ಲೇ ಹೇಳಬೇಕು. ಇನ್ನು ಕೆಲವು ಮಂತ್ರಗಳನ್ನು ಸಂಧ್ಯಾಸಮಯದಲ್ಲೇ ಹೇಳಬೇಕು ಎಂದಿರುವುದು. ಹಾಗಾಗಿ ಅವುಗಳ ಪೂರ್ಣಫಲಗಳನ್ನು ಪಡೆಯಬೇಕಾದರೆ ಸಮಯವನ್ನು ಚೆನ್ನಾಗಿ ತಿಳಿದು ಅವುಗಳ ವಿನಿಯೋಗವನ್ನು ಮಾಡಬೇಕಾಗುವುದು.

ಹಾಗಾಗಿ ಒಂದು ಮಂತ್ರವನ್ನು ಸರಿಯಾದ ಸಮಯದಲ್ಲಿ ಹೇಳಿ, ಮಾಡಬೇಕಾದ ಹೋಮ–ಯಜ್ಞಗಳನ್ನು ಆಯಾ ಋತುವಿನಲ್ಲೇ ಮಾಡಬೇಕೆಂದರೆ ‘ಕಾಲ’ ಬಹಳ ಮುಖ್ಯವಾಗುವುದು. ಹಾಗಾಗಿ ಕಾಲಮಾನ ಪ್ರಮುಖ ಪಾತ್ರ ವಹಿಸುವುದು. ಕಾಲಸೂಚಕವಿಲ್ಲದೇ ಆಶೀರ್ವಾದವೂ ಇಲ್ಲ. ‘ಜೀವೇನ ಶರದಃ ಶತಂ’ ಎಂದಲ್ಲವೇ ಆಶೀರ್ವದಿಸುವುದು! ಇದರರ್ಥ- ‘ನೂರು ಸಂವತ್ಸರಗಳ ಕಾಲ ಸುಖವಾಗಿ ಕಳೆಯುವಂತಾಗಲಿ’ ಎನ್ನುವ ಈ ಹಾರೈಕೆಯಲ್ಲಿ ಕಾಲವಿದೆ. ‘ಶತಮಾನಂ ಭವತಿ ಶತಾಯುಃ’ ಎಂದರೂ ಕಾಲಸೂಚಕ ಬಂದಿತಲ್ಲವೇ? ಹೀಗೆ ಮಂತ್ರರೂಪದಲ್ಲಾಗಲೀ, ಆಶೀರ್ವಾದದ ರೂಪದಲ್ಲಾಗಲೀ ಕಾಲದ ಶಬ್ದವನ್ನು ಬಳಸಿಯೇ ಹೇಳುವುದು. ಕಾಲಮಾನವಿಲ್ಲದೇ ಯಾವುದೂ ನಡೆಯದು. ಹಾಗಾಗಿ ಈ ಕಾಲದ ನಿರ್ದೇಶನವನ್ನು ಸರಿಯಾಗಿ ತಿಳಿದುಕೊಳ್ಳುವ ಸಲುವಾಗಿ ವೇದದ ಅಂಗವಾಗಿ ಜ್ಯೋತಿಷಶಾಸ್ತ್ರ ಉದಯಿಸಿತು.

ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಜ್ಯೋತಿಷವು ವೇದಾಂಗವಾಗಿದೆ ಎಂದು ತಿಳಿದೆವು. ಮುಂದಿನ ಸರಣಿಯಲ್ಲಿ ಇದರ ಇನ್ನಷ್ಟು ಪ್ರಾಮುಖ್ಯವನ್ನು ವಿವರವಾಗಿ ತಿಳಿಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.