ರಾಹುಲ್ ಗಾಂಧಿಯವರ ಜಾತಕ ಕುಂಡಲಿಯಲ್ಲಿ ಪರಮೋಚ್ಚ ಶಕ್ತಿಯನ್ನು ಶನೈಶ್ಚರ ಸ್ವಾಮಿ ಒದಗಿಸಿ ಕೊಡಬೇಕು. ಜೊತೆಗೆ ರಾಹುವಾದರೂ ಅವರಿಗೆ ಶಕ್ತಿಯ ಮೂಲವಾಗಬೇಕು. ಆದರೆ ಶನಿ ಗ್ರಹವು ಕುಂಡಲಿಯಲ್ಲಿ ಗರಿಷ್ಠ ಮಟ್ಟದ ದುರ್ಬಲತೆ ಪಡೆದಿದೆ ಎಂಬುದು ರಾಹುಲರ ಜಾತಕ ಪರಿಶೀಲನೆ ನಡೆಸಿದಾಗ ಕುಂಡಲಿಯಲ್ಲಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಎಲ್ಲಾ ರೀತಿಯ ಸಂಪನ್ನ, ಶಕ್ತಿ ಹಾಗೂ ದಿವ್ಯವನ್ನು ತುಂಬಬೇಕಾದ ಶನಿಗ್ರಹ, ಮಂಗಳ ಗ್ರಹದ ಮನೆಯಾದ ಮೇಷ ರಾಶಿಯಲ್ಲಿ ಕುಳಿತಿರುವುದು ತೀರಾ ದುರ್ಬಲ ಅಂಶವಾಗಿದೆ. ಜೊತೆಗೆ ರಾಹು ಗ್ರಹವು ಎದುರಾಳಿಯನ್ನು ಕಂಗೆಡಿಸುವ ವಿಚಾರದಲ್ಲಿ ಬಲ ಪಡೆಯುವಂತಾಗಬೇಕು.
.ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಂತೆ ಚಂದ್ರಗ್ರಹ: ಜ್ಯೋತಿಷ ಹೇಳೋದೇನು? .
ಹಾಗೆಯೇ ಮೇಲ್ನೋಟಕ್ಕೆ ದೊಡ್ಡ ಶಕ್ತಿಯ ಮೊತ್ತ ಹೊತ್ತಂತೆ ಕಾಣುವ ಸೂರ್ಯ ಗ್ರಹ ಕೂಡಾ ಶನಿ ಗ್ರಹ ದೃಷ್ಟಿಯಿಂದಾಗಿ ಚಡಪಡಿಕೆ ಎದುರಿಸುತ್ತಿದೆ. ಸೂರ್ಯನ ಸಂಬಂಧವಾದ ವಿಚಾರಗಳು ಅವರ ಬದುಕಿನ ಎಳವೆಯಲ್ಲಿಯೇ ಕಂಡ ಅಜ್ಜಿ, ತಂದೆ ಹಾಗೂ ಚಿಕ್ಕಪ್ಪ ಸಂಜಯ್ಗಾಂಧಿ ಅವರ ಸಾವುಗಳ ಸೂತ್ರದಲ್ಲಿ ಕೆಲವು ಕಗ್ಗಂಟುಗಳನ್ನು ಸೃಷ್ಟಿಸಿವೆ. ಶುಕ್ರ ಗ್ರಹ ವಿಚಾರದಲ್ಲಿ ಕೆಲವು ಸಂಪನ್ನ ಅಂಶಗಳು ಹದಗೆಟ್ಟಿರುವುದರಿಂದ ಒಳಿತು ತರುವ ಸ್ತ್ರೀ ಸ್ವರೂಪಿಯ ಶಕ್ತಿ ರಾಹುಲರಿಗೆ ದೊರಕಬೇಕು. ದಕ್ಷಿಣ ಭಾರತದಲ್ಲಿನ ಕಡಲ ತೀರದ ಶಿವ ಹಾಗೂ ಗಣಪತಿ ಒಗ್ಗೂಡಿದ ಶಕ್ತಿ ಕೇಂದ್ರದ ಆರಾಧನ ಫಲ ಇಲ್ಲಿ ಮುಖ್ಯ.

ಇದು ಸೂಕ್ತವಾಗಿ ಒದಗಿ ಬಂದರೆ ರಾಹುಲ್ ಅವರ ಮನೋಬಲದ ಸಿದ್ಧಿಗೆ ಅವಕಾಶ ಸಾಧ್ಯ. ಹೀಗಾಗಿ ಇದು ಒದಗಿ ಬರುವಂತಾಗಬೇಕು. ಏಕ ಸೂತ್ರದ ಸತ್ವವು ದಕ್ಷಿಣ ದಿಕ್ಕನ್ನು ಪರಿಗ್ರಹಿಸಿದ ದೇವಿಯ ರಕ್ಷಣೆಯ ಅನುಗ್ರಹವಾಗಿ ರಾಹುಲ್ ಗಾಂಧಿಯವರಿಗೆ ದೊರಕಬೇಕು. ಗ್ರಹಗಳ ಅಂತಃ ಶಕ್ತಿಯ ಜೀವಂತಿಕೆ ಗೋಚರವು ಫಲಾವಳಿಯ ಮೇಲೆಯೂ ಅವಲಂಬಿತವಾಗಿದೆ. ಇದಕ್ಕೆ ಶಕ್ತಿಯ ಅನುಷ್ಠಾನಗಳೂ ಬೇಕು.
.ಗುರು ಗ್ರಹ ಕಾರಕತ್ವ: ಧನಸ್ಸು, ಮೀನ ರಾಶಿಯ ಅಧಿಪತಿ ಗುಣಗಳ ಬಗ್ಗೆ ತಿಳಿದುಕೊಳ್ಳಿ.
ಕೆಲವು ಸಲ ಯಾವುದೋ ಅಲೌಕಿಕ ಶಕ್ತಿ ಶಬ್ದಗಳ ಮೂಲಕ ಹಿಡಿದಿಡಲಾಗದ ಸಶಕ್ತ ಸ್ಥಿತಿಯನ್ನು ಕೊಡಲು ತಾನಾಗಿಯೇ ಮುಂದಾಗುತ್ತದೆ. ಈ ಮುಂದಾಗುವಿಕೆಯ ಚಾಲನೆಯನ್ನು ರಾಹುಲ್ ಅವರ ಕುಂಡಲಿಯ ಶುಕ್ರ ಗ್ರಹ ಅಡಕಗೊಳಿಸಿಕೊಂಡಿದೆ. ಹೀಗಾಗಿ ಇದೊಂದು, ನಿಖರ ಅದೃಷ್ಟಕ್ಕೆ ಸಾತ್ ಕೊಡುವ ವಿಷಯವೇ ಆಗಿದೆ.

ಪಂಚಮ ಶನಿ ಕಾಟ

ಶನಿ ಮತ್ತು ಚಂದ್ರ ಗ್ರಹವು ಪೂರ್ತಿ ದುರ್ಬಲ ಗ್ರಹಗಳಾಗಿ ರಾಹುಲ್ ಗಾಂಧಿಯವರ ಜನ್ಮ ಕುಂಡಲಿಯಲ್ಲಿ ಇರುವುದರಿಂದ ವರ್ತಮಾನದಲ್ಲಿರುವ ಪಂಚಮ ಶನಿ ಕಾಟ ರಾಹುಲರಿಗೆ ಅನೇಕ ತಡೆಗಳನ್ನು ತರುತ್ತಿದೆ. ಕಳೆದ ವಿಧಾನಸಭಾ ಚುನಾವಣಾ ಕಾಲದ ಬಿಹಾರದಲ್ಲಿನ ದೊಡ್ಡದಾದ ಕಾಂಗ್ರೆಸ್ ಸೋಲಿಗೆ ಚಂದ್ರ ಗ್ರಹದ ದೌರ್ಬಲ್ಯವೇ ಮುಖ್ಯ ಕಾರಣ. ಒಳಿತನ್ನು ತರುವ ಶನಿ ಗ್ರಹದ ಜೊತೆಗಿನ ಸಂಘರ್ಷದಲ್ಲಿ ಚಂದ್ರನೇ ಪ್ರಮುಖ ಸಂಚುಕೋರ. ಸರ್ವತ್ರ ಸ್ವರೂಪದಲ್ಲಿ ಭಾರತೀಯರ ಮನೋ ಸ್ಥಿತಿಗೆ ಸರಿ ಹೊಂದದ ಹಳಿಗಳ ಮೇಲೆ ಓಡಬಾರದ ಕಾಲದಲ್ಲಿ ರಾಹುಲ್ ಗಾಂಧಿಯವರು ಓಡುವಂತೆ ಚಂದ್ರ ಪ್ರೇರೇಪಿಸುತ್ತಿದ್ದಾನೆ. ಇದು ಇವರ ಭವಿಷ್ಯದ ದೃಷ್ಟಿಯಿಂದ ಕಳವಳಕಾರಕ ವಿಚಾರವೇ ಆಗಿದೆ. ಈ ತಪ್ಪು ಹಳಿಗಳ ಮೇಲಿನ ಓಟದಿಂದಾಗಿ ಪೀಡಕನಾದ ರಾಹು ಗ್ರಹ ರಾಹುಲರನ್ನು ದುರ್ಬಲಗೊಳಿಸುತ್ತಿದೆ. ಕೇವಲ ಸ್ತುತಿ ಮಾಡುವ ಜನರನ್ನು ನೆಚ್ಚಿಕೊಳ್ಳದೇ ಪಕ್ಷದಲ್ಲಿಯೇ ಇರುವ ಹಲವಾರು ಇತರ ಚಾಣಾಕ್ಷರ ಸಲಹೆ, ಸೂಚನೆ ಸದ್ಯ ಬಹಳ ಮುಖ್ಯವಾಗಿದೆ. ಆಡುವ ಮಾತುಗಳ ಮೇಲಿನ ದಿಗ್ಬಲವನ್ನು ಬುಧನು ಕೊಡಬಹುದಾಗಿದೆ.
.ಶನಿಗ್ರಹ – ಉಂಗುರದ ನಡುವೆ ಹಾದುಹೋದ ಕ್ಯಾಸಿನಿ ವ್ಯೋಮನೌಕೆ.
ನೀಲಿ ಅಥವಾ ಗಿಳಿ ಹಸಿರು ಬಣ್ಣದ ಬಟ್ಟೆಗಳು ರಾಹುಲರಿಗೆ ಸೂಕ್ತ. ನೇರಳೆ ಬಣ್ಣ ಕೂಡಾ ಒಳಿತೇ. ಕಪ್ಪು ಬಣ್ಣ, ಮಾತಿನ ಜಾಣ್ಮೆಯನ್ನು ಸಂವರ್ಧಿಸಲು ಉತ್ತಮವಾಗಿದೆ. ಪ್ರೇರಣೆ ಬುಧ ಗ್ರಹದ ಮೂಲಕ ಸಿದ್ಧಿಸಿಕೊಳ್ಳಬಹುದಾಗಿದೆ. ರಾಹು ಗ್ರಹದ ತಾಪತ್ರಯಗಳು ಪಂಚಮ ಶನಿ ಕಾಟದ ವಿಷಮ ವಲಯಗಳನ್ನು ಸಂವರ್ಧಿಸಿ ರಾಹುಲರ ಪಾಲಿಗೆ ಮಾತಿನ ಹರಿತದಲ್ಲಿ ಇರಬೇಕಾದ ಸೂಕ್ಷ್ಮಗಳಿಗೆ ಧಕ್ಕೆ ತರುತ್ತಿದೆ. ಜನರು ರಾಜಕಾರಣಿಯ ವಿಚಾರದಲ್ಲಿ ಮಾತಿನ ಸೂಕ್ಷ್ಮವನ್ನು ಗಮನಿಸುತ್ತಾರೆ. ಹೀಗಾಗಿ ಮಾತಿನ ವಿಚಾರದಲ್ಲಿ ಭಾರತ ದೇಶದ ಜನ ಯೋಚಿಸುವತ್ತ ರಾಹುಲರು ತಮ್ಮ ಮಾತುಗಳನ್ನು ಕೇಂದ್ರೀಕರಿಸಲು ಚಂದ್ರನ ಶಕ್ತಿ ಸಾಕಷ್ಟು ಸಿಗುವಂತಾಗಬೇಕು.

ಬುಧನ ಅನುಗ್ರಹ ಸಿದ್ಧಿ ಮತ್ತು ರಾಹುಲ್

ಬುಧ ಹಾಗೂ ಶುಕ್ರ ಗ್ರಹಗಳ ವಿಶಿಷ್ಟ ಶಕ್ತಿಯನ್ನು ಒಗ್ಗೂಡಿಸಿಕೊಳ್ಳುವಲ್ಲಿ ಶನಿ ಗ್ರಹ ಸದ್ಯ ವಿಫಲತೆಯನ್ನು ಪಡೆಯುತ್ತಿರುವುದರಿಂದಲೇ ರಾಹುಲ್ ಗಾಂಧಿ ತಲುಪಬೇಕಾದ ಗುರಿಯತ್ತ ಹಿಡಿತ ಸಂಪಾದಿಸುವಲ್ಲಿ ಅಡೆತಡೆಗಳಿವೆ. ಶುಕ್ರ ಗ್ರಹದ ರಾಜಯೋಗದ ಶಕ್ತಿ ರಾಹುಲ್ ಅವರ ಜಾತಕ ಕುಂಡಲಿಯಲ್ಲಿ ಎಷ್ಟು ಅದ್ಭುತವಾಗಿದೆ ಎಂದರೆ, ಎಲ್ಲದರ ಬಗೆಗೂ ಜನರ ಬಳಿ ರಾಹುಲ್ ಅವರು ತೆರೆದಿಟ್ಟ ಪುಸ್ತಕವಾಗಬೇಕು. ಸದ್ಯ ಅವರು ಎದುರಿಸಬೇಕಾದ ಎದುರಾಳಿಯು ಮೋದಿಯವರು ಎನ್ನುವುದು ರಾಹುಲ್ ನೆನಪಿಡಬೇಕು. ಯಾವ ವಿಚಾರವನ್ನು ಜನರ ಎದುರು ಇಟ್ಟು ಮೋದಿ ಗೆಲ್ಲುತ್ತಿದ್ದಾರೆಯೋ ಆ ವಿಚಾರದ ವಿರುದ್ಧ ದಿಕ್ಕುಗಳಲ್ಲಿನ ರಾಹುಲ್ ಯೋಚನೆ ಜನರೆದುರು ತೆರೆದಿಡುವಾಗ ಬಹಳಷ್ಟು ರೀತಿಯ ಬೌದ್ಧಿಕ ಮೇಲ್ಮೆ (ಬುಧ ಗ್ರಹದ ನೆರವು ಚೆನ್ನಾಗಿಯೇ ಇದೆ)ಗಳನ್ನು ತಾರ್ಕಿಕವಾಗಿ ತೆರೆದಿಡಲು ರಾಹುಲ್ ಅವರಿಗೆ ಸಾಧ್ಯವಾಗಬೇಕು ಎಂಬುದು ಸದ್ಯದ ಅವಶ್ಯಕತೆಯಾಗಿದೆ.

ಆದರೂ ರಾಹುಲ್ ಈ ನಿಟ್ಟಿನಲ್ಲಿ ವಿಳಂಬಿಸುತ್ತಿದ್ದಾರೇನೋ ಎಂಬುದು ಶನಿ ಗ್ರಹದ ನಿಮಿತ್ತದಿಂದ ಹೆಚ್ಚು ಸ್ಪಷ್ಟ. ಈ ವಿಳಂಬ ನೆರವೇರದಂತೆ ರಾಹುಲ್ ಮುಂದಾಗುವುದು ಸದ್ಯದ ಕಾಲ ಘಟ್ಟದಲ್ಲಿ ಕಷ್ಟವಿದೆ. ಶನಿ ಮತ್ತು ಚಂದ್ರ ಗ್ರಹಗಳ ತಿಕ್ಕಾಟದ ವೈಪರಿತ್ಯವು ಅಧಿಕವಾಗಿದೆ. ಹೀಗಾಗಿ ತೀರಾ ಹೊಸ ಬಗೆಯ ದಾರಿಯೊಂದನ್ನು ಕಾಲದ ಘಟ್ಟ ಸದ್ಯ ರಾಹುಲರಿಂದ ಬಯಸುತ್ತಿದೆ. ಮೋದಿಯವರ ಪಾಲಿಗೂ ಈಗ ಶನಿ ಕಾಟದ ವಿದ್ಯಮಾನ ನಡೆಯುತ್ತಿದೆ. ಇದು ಗಮನಾರ್ಹ. ಅನುಗ್ರಹಿಸಲು ಮುಂದಾಗಿರುವ ಶುಕ್ರ ಗ್ರಹವೇ ರಾಹುಲರ ದಾರಿಯನ್ನು ಈಗ ನಿರ್ದೇಶಿಸಬೇಕು. ಬುಧನ ಅನುಗ್ರಹವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.