ಶನಿವಾರ, ಸೆಪ್ಟೆಂಬರ್ 25, 2021
28 °C

ಔಡಿ ಇ–ಟ್ರಾನ್‌, ಇ–ಟ್ರಾನ್‌ ಸ್ಪೋರ್ಟ್‌ಬ್ಯಾಕ್‌ ಬುಕಿಂಗ್‌ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಐಷಾರಾಮಿ ಕಾರು ತಯಾರಿಸುವ ಔಡಿ ಕಂಪನಿಯ ವಿದ್ಯುತ್ ಚಾಲಿತ ಎಸ್‌ಯುವಿಗಳಾದ ಇ–ಟ್ರಾನ್‌ ಮತ್ತು ಇ–ಟ್ರಾನ್‌ ಸ್ಪೋರ್ಟ್‌ಬ್ಯಾಕ್‌ನ ಬುಕಿಂಗ್‌ ಆರಂಭವಾಗಿದೆ. ಈ ಎರಡೂ ಎಸ್‌ಯುವಿಗಳು ಜುಲೈ 22ರಂದು ಮಾರುಕಟ್ಟೆಗೆ ಬರಲಿವೆ.

ಒಂದು ಎಸ್‌ಯುವಿಗೆ ಆರಂಭಿಕ ಮೊತ್ತ ₹ 5 ಲಕ್ಷ ಪಾವತಿಸಿ ಬುಕ್‌ ಮಾಡಬಹುದು. ಕಂಪನಿಯ ಜಾಲತಾಣದಲ್ಲಿ ಅಥವಾ ಸ್ಥಳೀಯ ಔಡಿ ಇಂಡಿಯಾ ಡೀಲರ್‌ಶಿಪ್‌ ಬಳಿ ಬುಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ. ಇ–ಟ್ರಾನ್ ಬ್ರ್ಯಾಂಡ್‌ ಅಡಿಯಲ್ಲಿ ಇನ್ನೂ ಹಲವು ಹೊಸ ಮಾದರಿಗಳನ್ನು ಕಂಪನಿಯು ಬಿಡುಗಡೆ ಮಾಡಲಿದೆ ಎಂದು ಔಡಿ ಇಂಡಿಯಾದ ಪ್ರಕಟಣೆ ತಿಳಿಸಿದೆ.

ಎರಡೂ ಎಸ್‌ಯುವಿಗಳನ್ನು 11ಕೆಡಬ್ಲ್ಯು ಎ.ಸಿ. ಹೋಮ್‌ ಚಾರ್ಜರ್‌ ಮೂಲಕ ಎಂಟೂವರೆ ಗಂಟೆಗಳಲ್ಲಿ ಚಾರ್ಜ್‌ ಮಾಡಬಹುದು. ನಾಲ್ಕು ಹಂತದ ಹವಾ ನಿಯಂತ್ರಣ ವ್ಯವಸ್ಥೆಯನ್ನು ಇದು ಹೊಂದಿದೆ ಎಂದು ಕಂಪನಿ ತಿಳಿಸಿದೆ.

‘ಭವಿಷ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳೇ ಇರಲಿವೆ. ಈ ನಿಟ್ಟಿನಲ್ಲಿ ಎರಡು ವಿದ್ಯುತ್ ಚಾಲಿತ ಎಸ್‌ಯುವಿಗಳ ಬುಕಿಂಗ್‌ ಆರಂಭಿಸಲು ರೋಮಾಂಚನ ಆಗುತ್ತಿದೆ’ ಎಂದು ಕಂಪನಿಯ ಭಾರತದ ಮುಖ್ಯಸ್ಥ ಬಲ್ಬೀರ್ ಸಿಂಗ್‌ ಧಿಲ್ಲೋನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು