ಬುಧವಾರ, ಫೆಬ್ರವರಿ 8, 2023
18 °C
ಕಂಪನಿಗಳಿಂದ ಹೂಡಿಕೆ ಘೋಷಣೆ

ಸುಜುಕಿ ‘ಇವಿಎಕ್ಸ್‌’ ಅನಾವರಣ: ಮೊದಲ ದಿನ ಮೇಳೈಸಿದ ವಿದ್ಯುತ್ ಚಾಲಿತ ವಾಹನಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗ್ರೇಟರ್‌ ನೊಯಿಡಾ: ಸುಜುಕಿ ಮೋಟರ್‌ ಕಾರ್ಪೊರೇಷನ್‌ನ (ಎಸ್‌ಎಂಸಿ) ಕಾನ್ಸೆಪ್ಟ್‌ ಎಲೆಕ್ಟ್ರಿಕ್‌ ಎಸ್‌ಯುವಿ ‘ಇವಿಎಕ್ಸ್‌’ ಅನಾವರಣದ ಮೂಲಕ ದೇಶದ ಅತಿದೊಡ್ಡ ವಾಹನ ಪ್ರದರ್ಶನ ಮೇಳಕ್ಕೆ ಬುಧವಾರ ಚಾಲನೆ ದೊರೆಯಿತು.

ಮಧ್ಯಮ ಗಾತ್ರದ ಎಲೆಕ್ಟ್ರಿಕ್‌ ಎಸ್‌ಯುವಿ 60 ಕಿಲೋ ವಾಟ್‌ ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಒಮ್ಮೆ ಪೂರ್ತಿಯಾಗಿ ಚಾರ್ಜ್‌ ಮಾಡಿದರೆ 550 ಕಿಲೋ ಮೀಟರ್‌ ಚಲಿಸಬಲ್ಲದು ಎಂದು ಕಂಪನಿ ತಿಳಿಸಿದೆ.

ಈ ಎಲೆಕ್ಟ್ರಿಕ್‌ ಎಸ್‌ಯುವಿಯನ್ನು 2025ರ ವೇಳೆಗೆ ಮಾರುಕಟ್ಟೆಗೆ ತರುವ ಯೋಜನೆ ಹೊಂದಲಾಗಿದೆ ಎಂದು ಕಂಪನಿಯ ಅಧ್ಯಕ್ಷ ತೊಶಿಹಿರೊ ಸುಜುಕಿ ತಿಳಿಸಿದ್ದಾರೆ. ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ತರುವ ಗುರಿ ಸಾಧನೆಗೆ ವಿದ್ಯುತ್ ಚಾಲಿತ ವಾಹನಗಳು ಮಾತ್ರವೇ ಪರಿಹಾರ ಆಗಲಾರವು. ಫ್ಲೆಕ್ಸ್‌ ಫ್ಯೂಯೆಲ್‌, ಹೈಬ್ರಿಡ್‌ ಮತ್ತು ಸಿಎನ್‌ಜಿ ತಂತ್ರಜ್ಞಾನಗಳ ಕಡೆಗೂ ಕಂಪನಿ ಗಮನ ಹರಿಸುತ್ತಿದೆ ಎಂದು ಹೇಳಿದ್ದಾರೆ.

ಮಾರುತಿ ಸುಜುಕಿ ಕಂಪನಿಯ ವ್ಯಾಗನ್‌ಆರ್‌ ಫ್ಲೆಕ್ಸ್ ಫ್ಯೂಯೆಲ್‌ ಪ್ರೊಟೊಟೈಪ್‌, ಬ್ರೆಜಾ ಎಸ್‌–ಸಿಎನ್‌ಜಿ ಮತ್ತು ಗ್ರ್ಯಾಂಡ್‌ ವಿಟಾರಾ ಇಂಟೆಲಿಜೆಂಟ್‌ ಎಲೆಕ್ಟ್ರಿಕ್‌ ಹೈಬ್ರಿಡ್‌ ವಾಹನಗಳು ಪ್ರದರ್ಶನಗೊಳ್ಳಲಿವೆ.


ಟಾಟಾ ಸಿಯಾರಾ ಇವಿ –ಪಿಟಿಐ

ಟಾಟಾ ಮೋಟರ್ಸ್‌: ಟಾಟಾ ಮೋಟರ್ಸ್ ಕಂಪನಿಯು ವಿದ್ಯುತ್ ಚಾಲಿತ ವಾಹನಗಳನ್ನೂ ಒಳಗೊಂಡು ಒಟ್ಟು 12 ಕಾರುಗಳನ್ನು ಪ್ರದರ್ಶಿಸಿದೆ.

ಹುಂಡೈ ಅಯಾನಿಕ್‌ 5: ಹುಂಡೈ ಮೋಟರ್ ಇಂಡಿಯಾ ಕಂಪನಿಯು ತನ್ನ ವಿದ್ಯುತ್ ಚಾಲಿತ ಅಯಾನಿಕ್‌ 5 ಮಾದರಿಯನ್ನು ಬಿಡುಗಡೆ ಮಾಡಿದೆ.


ಟೊಯೋಟ ಬಿಜೆಡ್‌4ಎಕ್ಸ್‌ ಪಿಟಿಐ ಚಿತ್ರ

ಒಮ್ಮೆ ಪೂರ್ತಿ ಚಾರ್ಜ್‌ ಮಾಡಿದರೆ 631 ಕಿಲೋ ಮೀಟರ್ ಚಲಾಯಿಸಬಹುದು. ಮೊದಲ 500 ಗ್ರಾಹಕರಿಗೆ ಪರಿಚಯಾತ್ಮಕ ಬೆಲೆ ₹44.95 ಲಕ್ಷ ಇರಲಿದೆ ಎಂದು ಕಂಪನಿ ತಿಳಿಸಿದೆ.

500 ಕಿ.ಮೀ ಚಲಿಸುವ ಇ–ಬಸ್‌: ವಿಇ ಕಮರ್ಷಿಯಲ್‌ ವೆಹಿಕಲ್‌ (ವಿಇಸಿವಿ) ಕಂಪನಿಯು 500 ಕಿಲೋ ಮೀಟರ್‌ ಸಾಗಬಲ್ಲ ಎಲೆಕ್ಟ್ರಿಕ್‌ ಬಸ್‌ ‘ಐಷರ್‌ ಪ್ರೊ 2049’ ಅನಾವರಣ ಮಾಡಿದೆ. ಇದು 13.5 ಮೀಟರ್ ಉದ್ದ ಇದೆ.

ಡಿಪೊದಲ್ಲಿ ಒಮ್ಮೆಗೆ 6 ಗಂಟೆ ಚಾರ್ಜ್‌ ಮಾಡಿದರೆ 300 ರಿಂದ 350 ಕಿಲೋ ಮೀಟರ್‌ ಚಲಾಯಿಸಬಹುದು. ಬಳಿಕ ಪ್ರಯಾಣದ ವೇಳೆ 30–40 ನಿಮಿಷ ಚಾರ್ಜ್‌ ಮಾಡಿದರೆ ಮತ್ತೆ 150 ರಿಂದ 200 ಕಿಲೋ ಮೀಟರ್ ಚಲಾಯಿಸಬಹುದು ಎಂದು ಕಂಪನಿಯ ಬಸ್ ವಿಭಾಗದ ಅಧ್ಯಕ್ಷ  ಆಕಾಶ್‌ ಪಸ್ಸೆ ತಿಳಿಸಿದ್ದಾರೆ.

ಎಲ್‌ಎನ್‌ಜಿ ಮತ್ತು ಸಿಎನ್‌ಜಿ ವ್ಯವಸ್ಥೆ ಹೊಂದಿರುವ ಐಷರ್ ಪ್ರೊ 8055 ಟ್ರಕ್‌ ಅನಾವರಣ ಮಾಡಲಾಗಿದೆ. ಟ್ರಕ್‌ನಲ್ಲಿ ನೀಡಿರುವ ಸ್ವಿಚ್‌ ಮೂಲಕ ಇಂಧನ ಬಳಕೆಯನ್ನು ಬದಲಾಯಿಸಬಹುದು.


ವಾಹನ ಮೇಳದಲ್ಲಿ ಹುಂಡೈ ಅಯಾನಿಕ್‌ 5 ಬಿಡುಗಡೆ ವೇಳೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಮಾತನಾಡಿದರು –ಎಎಫ್‌ಪಿ ಚಿತ್ರ

 

ಪ್ರಮುಖ ಅಂಶಗಳು

* ಎಂಜಿ4, ಎಂಜಿ ಇಎಚ್‌ಎಸ್‌, ಪ್ಲಗ್‌–ಇನ್‌ ಹೈಬ್ರಿಡ್‌ ಎಸ್‌ಯುವಿ ಅನಾವರಣ. ಎಂಜಿ ಮೋಟರ್ ಕಂಪನಿಯ ಹೊಸ ಪೀಳಿಗೆಯ ಹೆಕ್ಟರ್‌ನ ಎಕ್ಸ್‌ ಷೋರೂಂ ಬೆಲೆ ₹14.72 ಲಕ್ಷ

* ಗ್ರೀವ್ಸ್‌ ಕಾಟನ್‌ ಕಂಪನಿಯಿಂದ ಆ್ಯಂಪೇರ್‌ ಪ್ರೈಮಸ್‌, ಎನ್‌ಎಕ್ಸ್‌ಜಿ ಮತ್ತು ಮಲ್ಟಿ ಯುಟಿಲಿಟಿ ಸ್ಕೂಟರ್‌ ಆ್ಯಂಪೇರ್ ಎನ್‌ಎಕ್ಸ್‌ಯು ಅನಾವರಣ

* ಎಲೆಕ್ಟ್ರಿಕ್‌ ವಾಹನಗಳ ತಯಾರಿಕೆಗೆ ಮುಂದಿನ ನಾಲ್ಕು ವರ್ಷಗಳಲ್ಲಿ ₹ 2 ಸಾವಿರ ಕೋಟಿ ಹೂಡಿಕೆಗೆ ಕಿಯಾ ಇಂಡಿಯಾ ಯೋಜನೆ

* ಅಶೋಕ್‌ ಲೇಲ್ಯಾಂಡ್‌ ಕಂಪನಿಯು ಎಲ್‌ಎನ್‌ಜಿ, ಸಿಎನ್‌ಜಿ, ಎಲೆಕ್ಟ್ರಿಕ್‌ ಮಾದರಿಗಳ ಒಟ್ಟು ಏಳು ವಾಹನಗಳನ್ನು ಅನಾವರಣ ಮಾಡಿದೆ

* ಲೆಕ್ಸಸ್‌ನಿಂದ 5ನೇ ಪೀಳಿಗೆಯ ಆರ್‌ಎಕ್ಸ್ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ ಅನಾವರಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು