ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಡಬ್ಲ್ಯು ‘ಎಕ್ಸ್‌1 20ಐ ಟೆಕ್‌ ಎಡಿಷನ್‌’ ಬಿಡುಗಡೆ

Last Updated 15 ಜುಲೈ 2021, 11:23 IST
ಅಕ್ಷರ ಗಾತ್ರ

ನವದೆಹಲಿ:ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಎಕ್ಸ್‌1 20ಐ ಟೆಕ್‌ ಎಡಿಷನ್‌ ಅನ್ನು ಭಾರತದ ಮಾರುಕಟ್ಟೆಗೆ ಗುರುವಾರ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 43 ಲಕ್ಷ.

ಈ ಸ್ಪೋರ್ಟ್ಸ್‌ ಆ್ಯಕ್ಟಿವಿಟಿ ವೆಹಿಕಲ್‌ (ಎಸ್‌ಎವಿ) ಅನ್ನು ಚೆನ್ನೈನಲ್ಲಿ ಇರುವ ಕಂಪನಿಯ ಘಟಕದಲ್ಲಿ ತಯಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರೀಮಿಯಂ ಕಾಂಪ್ಯಾಕ್ಟ್‌ ಎಸ್‌ಎವಿ ವಿಭಾಗದಲ್ಲಿ ಬಿಎಂಡಬ್ಲ್ಯು ಇಂಡಿಯಾ ಪ್ರಾಬಲ್ಯ ಹೊಂದಿದೆ. ಬಿಎಂಡಬ್ಲ್ಯು ಎಕ್ಸ್‌1 20ಐ ಟೆಕ್‌ ಆವೃತ್ತಿಯ ಮೂಲಕ ಈ ವಿಭಾಗದಲ್ಲಿನ ವಾಹನ ಖರೀದಿಸಲು ಬಯಸುವ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಾಗುತ್ತಿದೆ ಎಂದು ಕಂಪನಿಯ ಭಾರತದ ಅಧ್ಯಕ್ಷ ವಿಕ್ರಂ ಪವಾಹ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮಾದರಿಯು ಎರಡು ಲೀಟರ್ ಪೆಟ್ರೋಲ್‌ ಎಂಜಿನ್‌ ಹೊಂದಿದೆ. 6 ಏರ್‌ಬ್ಯಾಗ್‌, ಡೈನಾಮಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ಡಿಎಸ್‌ಸಿ) ಕಾರ್ನರಿಂಗ್‌ ಬ್ರೇಕ್‌ ಕಂಟ್ರೋಲ್‌ (ಸಿಬಿಸಿ), ಎಲೆಕ್ಟ್ರಿಕ್‌ ಪಾರ್ಕಿಂಗ್‌ ಬ್ರೇಕ್‌ ವಿತ್‌ ಆಟೊ ಹೋಲ್ಡ್‌, ಕ್ರ್ಯಾಷ್‌ ಸೆನ್ಸರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT