ಭಾನುವಾರ, ಏಪ್ರಿಲ್ 18, 2021
32 °C

ಬಿಎಂಡಬ್ಲ್ಯೂ ಹೊಸ X3 xDrive30i SportX ದೇಶದಲ್ಲಿ ಬಿಡುಗಡೆ: ದರ ಎಷ್ಟಿದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ನೂತನ ಬಿಎಂಡಬ್ಲ್ಯೂ ಎಕ್ಸ್ 3 ಸಿರೀಸ್ ಕಾರು ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಸ್ಥಳೀಯವಾಗಿ ಬಿಎಂಡಬ್ಲ್ಯೂ ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದಿಸಲಾದ ಹೊಸ ಎಕ್ಸ್ ಸರಣಿಯಲ್ಲಿ ಪೆಟ್ರೋಲ್ ವೇರಿಯೆಂಟ್‍ನ X3 xDrive30i SportX ರಸ್ತೆಗೆ ಲಗ್ಗೆ ಇರಿಸಿದೆ.

ಹೊಸ ಬಿಎಂಡಬ್ಲ್ಯೂ X3 xDrive30i SportX, ಆಕರ್ಷಕ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ ಹೊಂದಿದೆ ಎಂದು ಕಂಪನಿ ಪ್ರಕಟಣೆ ಹೇಳಿದೆ. ವಿಸ್ತಾರವಾದ ಹೆಡ್‍ಲ್ಯಾಂಪ್ಸ್, ರೇಡಿಯೆಟರ್ ಗ್ರಿಲ್ ಬಾರ್ಸ್ ಮೇಲೆ ಬ್ಲಾಕ್ ಹೈ ಗ್ಲಾಸ್ ಅಂಶಗಳು, ಟು-ಟೋನ್ ಅಂಡರ್ ಬಾಡಿ ಪ್ರೊಟೆಕ್ಷನ್, ಏರ್-ಬ್ರೀಥರ್ ಹೊಸ ಆವೃತ್ತಿಯ ಆಕರ್ಷಣೆಗಳಾಗಿವೆ ಎಂದು ಬಿಎಂಡಬ್ಲ್ಯೂ ಹೇಳಿದೆ.

ಜತೆಗೆ ನೂತನ ಎಕ್ಸ್ ಸರಣಿಯಲ್ಲಿ, ಪನೋರಮಿಕ್ ಸನ್‍ರೂಫ್, ವೆಲ್ಕಮ್ ಕಾರ್ಪೆಟ್‍ನೊಂದಿಗೆ ಆಂಬಿಯೆಂಟ್ ಲೈಟಿಂಗ್ ಮತ್ತು ಆಟೊಮ್ಯಾಟಿಕ್ 3 ಝೋನ್ ಎಸಿ, ಕ್ಯಾಬಿನ್ ಅನುಭವವನ್ನು ಮತಷ್ಟು ಹೆಚ್ಚಿಸುತ್ತದೆ. ಪಾರ್ಕಿಂಗ್ ಅಸಿಸ್ಟೆಂಟ್  ಮತ್ತು ಆಪಲ್ ಕಾರ್‌ ಪ್ಲೇ ಹಾಗೂ ಆಂಡ್ರಾಯ್ಡ್ ಆಟೊ ಬೆಂಬಲ ಹೊಂದಿದೆ. 

ಬೆಲೆ ಎಷ್ಟಿದೆ?

ಹೊಸ ಬಿಎಂಡಬ್ಲ್ಯೂ X3 xDrive30i SportX ಕಾರು ₹56,50,000 ಲಕ್ಷ ದರದೊಂದಿಗೆ, ಪ್ರಾರಂಭಿಕ ಬೆಲೆ(ಎಕ್ಸ್-ಶೋರೂಂ)ಯಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ.

ನೂತನ ಆವೃತ್ತಿ ಮಿನರಲ್ ವ್ಹೈಟ್, ಸೊಫಿಸ್ಟೊ ಗ್ರೇ, ಬ್ಲಾಕ್ ಸಫೈರ್ ಮತ್ತು ಫೈಟೋನಿಕ್ ಬ್ಲೂ. ಈ ಶ್ರೇಣಿಯ ಅಪ್‍ಹೋಲ್‍ಸ್ಟ್ರಿ ಸಂಯೋಜನೆಗಳಲ್ಲಿ ಸೆನ್ಸಾಟೆಕ್ ಕ್ಯಾನ್‍ಬೆರ್ರಾ ಬೀಜ್ ಮತ್ತು ಸೆನ್ಸಾಟೆಕ್ ಬ್ಲಾಕ್ ಮೆಟಾಲಿಕ್ ಪೈಂಟ್ ವರ್ಕ್ಸ್‌ನಲ್ಲಿ ಲಭ್ಯ ಎಂದು ಕಂಪನಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು