ಶನಿವಾರ, ಜುಲೈ 24, 2021
27 °C

ಆನ್‌ಲೈನ್‌ ಮಾರಾಟಕ್ಕೆ ಹೀರೊ ಇ–ಶಾಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೀರೊ ಮೊಟೊ ಕಾರ್ಪ್‌ ಕಂಪನಿಯು ಆನ್‌ಲೈನ್‌ ಮಾರಾಟಕ್ಕಾಗಿ ಇ–ಶಾಪ್‌ (eSHOP) ಆರಂಭಿಸಿದೆ.

ದ್ವಿಚಕ್ರ ವಾಹನಗಳ ಖರೀದಿ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್‌ ಮೂಲಕವೇ ನಡೆಯಲಿದೆ. ಕಂಪನಿಯ ಜಾಲತಾಣದ ಮೂಲಕವೇ ಗ್ರಾಹಕರು ಮೋಟರ್‌ಸೈಕಲ್‌ ಅಥವಾ ಸ್ಕೂಟರ್‌ಗಳನ್ನು ನೇರವಾಗಿ ಖರೀದಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಖರೀದಿ, ವಿತರಣೆ, ಆನ್‌ ರೋಡ್‌ ಪ್ರೈಸ್‌, ವಾಹನದ ಲಭ್ಯತೆ, ದಾಖಲೆ ಪತ್ರಗಳ ಸಲ್ಲಿಕೆ, ತಕ್ಷಣದಲ್ಲೇ ಡೀಲರ್ಸ್‌ ಮಾಹಿತಿ ಹೀಗೆ ಪ್ರತಿಯೊಂದೂ ಮಾಹಿತಿಯು ಆನ್‌ಲೈನ್‌ನಲ್ಲಿಯೇ ಸಿಗಲಿವೆ.

ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾರಾಟದ ನಂತರ ಸೇವೆಗಳನ್ನೂ ಡಿಜಿಟಲ್‌ ರೂಪದಲ್ಲಿಯೇ ನೀಡುವ ವ್ಯವಸ್ಥೆಯನ್ನು ಹೀರೊ ಆ್ಯಪ್‌ನಲ್ಲಿ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು