ಗುರುವಾರ , ಆಗಸ್ಟ್ 6, 2020
23 °C

ಹುಂಡೈ ಗ್ರ್ಯಾಂಡ್‌ ಐ10 NIOS ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಂಡೈ ಮೋಟರ್‌ ಇಂಡಿಯಾ ಲಿಮಿಟೆಡ್‌ (ಎಚ್‌ಎಂಐಎಲ್‌) ಕಂಪನಿಯು ತನ್ನ ಹೊಸ ಹ್ಯಾಚ್‌ಬ್ಯಾಕ್‌ ಗ್ರ್ಯಾಂಡ್‌ ಐ10 ನಿಯೋಸ್‌ (NIOS) ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 4.99 ಲಕ್ಷದಿಂದ ₹ 7.99 ಲಕ್ಷದವರೆಗಿದೆ. ಕಂಪನಿಯ ವಿತರಣಾ ಕೇಂದ್ರಗಳು ಮತ್ತು ಆನ್‌ಲೈನ್‌ ಮೂಲಕ ₹ 11 ಸಾವಿರ ಮುಂಗಡ ಪಾವತಿಸಿ ಕಾಯ್ದಿರಿಸಬಹುದಾಗಿದೆ.

‘ಕಳೆದ 21 ವರ್ಷಗಳಿಂದ  ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ವಿಶ್ವದರ್ಜೆಯ ವಾಹನಗಳನ್ನು ನೀಡುವ ಮೂಲಕ ಹುಂಡೈ ಮೋಟರ್ಸ್ ಇಂಡಿಯಾ, ಭಾರತೀಯ ಆಟೊಮೊಬೈಲ್ ಕ್ಷೇತ್ರದಲ್ಲಿ ಮೈಲುಗಲ್ಲನ್ನು ಸ್ಥಾಪಿಸಿದೆ. ನಾವು ಇದೀಗ ಹೊಚ್ಚ ಹೊಸದಾದ 3 ನೇ ತಲೆಮಾರಿನ ಕಾರನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವೆನಿಸುತ್ತಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್‍. ಎಸ್. ಕಿಮ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು