ಹುಂಡೈ ಎಸ್ಯುವಿ 'ವೆನ್ಯೂ' ಬುಕಿಂಗ್ ಆರಂಭ

ನವದೆಹಲಿ: ಹುಂಡೈ ಮೋಟಾರ್ ಇಂಡಿಯಾ, ತನ್ನ ಹೊಸ ಸರಣಿಯ ಕಾರು ಕಾಂಪ್ಯಾಕ್ಟ್ 'ಎಸ್ಯುವಿ ವೆನ್ಯೂ' ಈ ತಿಂಗಳ ಅಂತ್ಯದಲ್ಲಿ ಮಾರುಕಟ್ಟೆಗೆ ಬರಲಿದ್ದು, ಬುಕ್ಕಿಂಗ್ ಆರಂಭಿಸಲಾಗಿದೆ ಎಂದು ಶುಕ್ರವಾರ ತಿಳಿಸಿದೆ.
ಗ್ರಾಹಕರು ಕಂಪೆನಿಯ ವಿತರಕರ ಬಳಿ ₹ 21,000 ಪಾವತಿಸಿ ಕಾರು ಬುಕ್ ಮಾಡಿಕೊಳ್ಳಬಹುದಾಗಿದೆ. ಆನ್ಲೈನ್ನಲ್ಲಿಯೂ ಬುಕ್ ಮಾಡಬಹುದು.
'2019ರಲ್ಲಿ ಪ್ರಾರಂಭವಾದಾಗಿನಿಂದಲೂ ವೆನ್ಯೂ ಭಾರತದಲ್ಲಿ ಅದ್ಭುತ ಯಶಸ್ಸು ಗಳಿಸಿದೆ. ದೇಶದಾದ್ಯಂತ ಇರುವ ಗ್ರಾಹಕರು ಅದರ ಅತ್ಯಾಧುನಿಕ ವಿನ್ಯಾಸ, ಸುಧಾರಿತ ತಂತ್ರಜ್ಞಾನ, ಶಕ್ತಿಶಾಲಿ ಕಾರ್ಯಕ್ಷಮತೆಯಿಂದ ಪುಳಕಗೊಂಡಿದ್ದಾರೆ. ಅದನ್ನು ನಾವು ಹೊಸ ವಿನ್ಯಾಸದೊಂದಿಗೆ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದೇವೆ' ಎಂದು ಹುಂಡೈ ಮೋಟಾರ್ ಇಂಡಿಯಾದ ನಿರ್ದೇಶಕ ತರುಣ್ ಗರ್ಗ್ ಹೇಳಿಕೆ ನೀಡಿದ್ದಾರೆ.
ಹೊಸ ಸರಣಿಯು ಬ್ರಾಂಡ್ನ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂಬ ವಿಶ್ವಾಸವಿದೆ ಎಂದೂ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.