ಗುರುವಾರ , ಜುಲೈ 29, 2021
20 °C

ಜೆಎಲ್‌ಆರ್‌ನಿಂದ ಎಂವೈ 21 ರೇಂಜ್‌ ರೋವರ್, ರೇಂಜ್‌ ರೋವರ್‌ ಸ್ಪೋರ್ಟ್ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಜಾಗ್ವರ್‌ ಲ್ಯಾಂಡ್‌ ರೋವರ್ (ಜೆಎಲ್‌ಆರ್‌) ಕಂಪನಿಯು ಬುಧವಾರ ಎಂವೈ 21 ರೇಂಜ್‌ ರೋವರ್‌ ಮತ್ತು ರೇಂಜ್‌ ರೋವರ್ ಸ್ಪೋರ್ಟ್‌ ಮಾದರಿಗಳನ್ನು ಅನಾವರಣಗೊಳಿಸಿದೆ. ಈ ಮಾದರಿಗಳ ಬಿಡುಗಡೆ ದಿನಾಂಕ ಮತ್ತು ಬೆಲೆಯನ್ನು ಕಂಪನಿ ಸದ್ಯಕ್ಕೆ ಘೋಷಿಸಿಲ್ಲ.

ಭಾರತದಲ್ಲಿ ಎಂವೈ 21 ರೇಂಜ್‌ ರೋವರ್‌ ಸ್ಟ್ಯಾಂಡರ್ಡ್ ವೀಲ್‌ ಬೇಸ್‌, ಲಾಂಗ್‌ ವೀಲ್‌ ಬೇಸ್‌ ಮತ್ತು ವಿಶೇಷ ಆವೃತ್ತಿಗಳಲ್ಲಿ ಲಭ್ಯವಿರಲಿದೆ. ಜತೆಗೆ 3 ಲೀಟರ್‌ ಎಂಎಚ್‌ಇವಿ ಪೆಟ್ರೋಲ್‌ ಅಥವಾ 3 ಲೀಟರ್‌ ನ್ಯೂ ಮೈಲ್ಡ್‌ ಹೈಬ್ರಿಡ್‌ ಎಲೆಕ್ಟ್ರಿಕ್‌ ವೆಹಿಕಲ್‌ (ಎಂಎಚ್‌ಇವಿ) ಡೀಸೆಲ್‌ ಎಂಜಿನ್‌ ಆಯ್ಕೆಗಳನ್ನು ನೀಡಿದೆ.

ಎಂವೈ 21 ರೇಂಜ್‌ ರೋವರ್‌ ಸ್ಪೋರ್ಟ್ 2 ಲೀಟರ್‌ ಪೆಟ್ರೋಲ್‌ ಮತ್ತು 5 ಲೀಟರ್‌ ಸೂಪರ್ ಚಾರ್ಜ್ಡ್ ಪೆಟ್ರೋಲ್‌ ಹಾಗೂ 3 ಲೀಟರ್‌ ಡೀಸೆಲ್‌ ಎಂಜಿನ್‌ಗಳಲ್ಲಿ ಲಭ್ಯವಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು